ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ 
ದೇಶ

ಬಿಜೆಪಿ ಹೇರಿರುವ ನಿರುದ್ಯೋಗವೇ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ವಿಷಯ: ಮಲ್ಲಿಕಾರ್ಜುನ ಖರ್ಗೆ

Ramyashree GN

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೇರಿರುವ ನಿರುದ್ಯೋಗವೇ ದೊಡ್ಡ ವಿಷಯವಾಗಿದೆ. ಯುವಕರು ಉದ್ಯೋಗಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ ಮತ್ತು ದೇಶವು ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಯುವ ನ್ಯಾಯ' ಅಡಿಯಲ್ಲಿ ಕಾಂಗ್ರೆಸ್ 'ಪೆಹ್ಲಿ ನೌಕ್ರಿ ಪಕ್ಕಿ' ಗ್ಯಾರಂಟಿಯು ಕೆಲಸ ಮತ್ತು ಕಲಿಕೆಯನ್ನು ಪ್ರತ್ಯೇಕಿಸುವ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಆ ಮೂಲಕ ವೃತ್ತಿ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಹೇಳಿದ್ದಾರೆ.

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೇರಿರುವ ನಿರುದ್ಯೋಗವೇ ದೇಶದಲ್ಲಿ ದೊಡ್ಡ ವಿಷಯವಾಗಿದೆ. ನಮ್ಮ ಯುವಕರು ಉದ್ಯೋಗಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ ಮತ್ತು ಇದು ಜನರಿಗೆ ದುಃಸ್ವಪ್ನವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

ಭಾರತದ ಪ್ರಮುಖ ಸಂಸ್ಥೆಗಳು, ಐಐಟಿಗಳು ಮತ್ತು ಐಐಎಂಗಳನ್ನು ಉಲ್ಲೇಖಿಸಿದ ಖರ್ಗೆ, 12 ಐಐಟಿಗಳ ಸುಮಾರು 30 ಪ್ರತಿಶತದಷ್ಟು ವಿದ್ಯಾರ್ಥಿಗಳು ನಿಯಮಿತ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. 21 ಐಐಎಂಗಳಲ್ಲಿ ಕೇವಲ ಶೇ 20 ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಐಐಟಿಗಳು ಮತ್ತು ಐಐಎಂಗಳ ಪರಿಸ್ಥಿತಿ ಹೀಗಿದ್ದರೆ, ಬಿಜೆಪಿಯು ದೇಶದಾದ್ಯಂತ ನಮ್ಮ ಯುವಜನರ ಭವಿಷ್ಯವನ್ನು ಹೇಗೆ ನಾಶಪಡಿಸಿದೆ ಎಂದು ಯಾರಾದರೂ ಊಹಿಸಬಹುದು ಎಂದು ಹೇಳಿದರು.

ಮೋದಿ ಸರ್ಕಾರದ ಅಡಿಯಲ್ಲಿ ಯುವ ನಿರುದ್ಯೋಗ ದರವು 2014 ರಿಂದ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

'ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಇತ್ತೀಚಿನ ಭಾರತದ ಉದ್ಯೋಗ ವರದಿ ಪ್ರಕಾರ, ಪ್ರತಿ ವರ್ಷ ಭಾರತವು ಕಾರ್ಮಿಕ ವಲಯಕ್ಕೆ ಸುಮಾರು 70-80 ಲಕ್ಷ ಯುವಕರನ್ನು ಸಜ್ಜುಗೊಳಿಸುತ್ತದೆ. ಆದರೆ, 2012 ಮತ್ತು 2019ರ ನಡುವೆ ಉದ್ಯೋಗದಲ್ಲಿ ಬಹುತೇಕ ಶೂನ್ಯ ಬೆಳವಣಿಗೆ ಕಂಡುಬಂದಿದೆ. ಅದು ಕೇವಲ ಶೇ 0.01 ರಷ್ಟು!' ಖರ್ಗೆ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

2 ಕೋಟಿ ಉದ್ಯೋಗಗಳನ್ನು ಒದಗಿಸುವ ಮೋದಿ ಕಿ ಗ್ಯಾರಂಟಿ ನಮ್ಮ ಯುವಕರ ಹೃದಯ ಮತ್ತು ಮನಸ್ಸಿನಲ್ಲಿ ಕೆಟ್ಟ ಕನಸಾಗಿ ಪ್ರತಿಧ್ವನಿಸುತ್ತಿದೆ!. ಹಾಗಾಗಿ ಕಾಂಗ್ರೆಸ್ ಪಕ್ಷವು ಯುವ ನ್ಯಾಯದಡಿ ಪೆಹಲಿ ನೌಕ್ರಿ ಪಕ್ಕಿ ಗ್ಯಾರಂಟಿ ತಂದಿದೆ ಎಂದು ಅವರು ಹೇಳಿದರು.

SCROLL FOR NEXT