ಆಪಲ್ ಐಫೋನ್
ಆಪಲ್ ಐಫೋನ್ online desk
ದೇಶ

ಭಾರತ ಸೇರಿ 90 ರಾಷ್ಟ್ರಗಳಲ್ಲಿ ಐಫೋನ್ ಸ್ಪೈವೇರ್ ಅಲರ್ಟ್

Srinivas Rao BV

ನವದೆಹಲಿ: ಐಫೋನ್ ತಯಾರಕ ಸಂಸ್ಥೆ ಆಪಲ್ ಭಾರತ ಸೇರಿದಂತೆ 91 ರಾಷ್ಟ್ರಗಳಲ್ಲಿರುವ ಬಳಕೆದಾರರಿಗೆ ಹೊಸ ನೊಟಿಫಿಕೇಶನ್ ನೀಡಿದ್ದು, ಸ್ಪೈ ವೇರ್ ಬಗ್ಗೆ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಪೆಗಾಸಸ್ ಮಾಲ್ವೇರ್ ಬಗ್ಗೆಯೂ ಇದೇ ವೇಳೆ ಐಫೋನ್ ತಯಾರಕ ಸಂಸ್ಥೆ ಆಪಲ್ ಎಚ್ಚರಿಕೆ ರವಾನಿಸಿದೆ.

ಭಾರತದಲ್ಲಿ ಹಲವು ಗ್ರಾಹಕರಿಗೆ ತಮ್ಮ ಖಾಸಗಿತನ ಹಾಗೂ ಡೇಟಾ ಭದ್ರತೆ ಅಪಾಯದಲ್ಲಿರುವುದರ ಬಗ್ಗೆ ಅಲರ್ಟ್ ಬಂದಿದೆ.

2023 ರ ಅಕ್ಟೋಬರ್ ನಲ್ಲಿ ಆಪಲ್ ಇದೇ ಮಾದರಿಯಲ್ಲಿ ನೋಟಿಫಿಕೇಶನ್ ಗಳನ್ನು ಕಾಂಗ್ರೆಸ್ ನಾಯಕ ಶಶಿ ತರೂರ್, ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ, ಟಿಎಂಸಿಯ ಮಹುವಾ ಮೊಯಿತ್ರಾ ಸೇರಿದಂತೆ ಹಲವು ನಾಯಕರಿಗೆ ಕಳಿಸಿತ್ತು. ಐಫೋನ್‌ಗಳನ್ನು ಗುರಿಯಾಗಿಸಿಕೊಂಡು "ಸಂಭಾವ್ಯ ಸರ್ಕಾರಿ ಪ್ರಾಯೋಜಿತ ಸ್ಪೈವೇರ್ ದಾಳಿ" ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿತ್ತು.

2021 ರಲ್ಲಿ, ಇಸ್ರೇಲಿ ಸಂಸ್ಥೆ NSO ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಅನಧಿಕೃತ ಕಣ್ಗಾವಲು ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಿತ್ತು. ಆಗಸ್ಟ್ 2022 ರಲ್ಲಿ, ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಸ್ಪೈವೇರ್ ಕಂಡುಬಂದಿಲ್ಲ ಎಂದು ಹೇಳಿತ್ತು. 29 ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಲಾಗಿದೆ, ಆದರೆ ಐದು ಮೊಬೈಲ್ ಫೋನ್‌ಗಳಲ್ಲಿ ಮಾಲ್‌ವೇರ್ ಪತ್ತೆಯಾಗಿತ್ತು.

ಈಗ ಆಪಲ್ ಸಂಸ್ಥೆ ತನ್ನ ಬಳಕೆದಾರರಿಗೆ ಇತ್ತೀಚಿನ ಭದ್ರತಾ ಪ್ಯಾಚ್‌ಗಳೊಂದಿಗೆ ತಮ್ಮ ಸಾಧನಗಳನ್ನು ನವೀಕರಿಸಲು ಸಲಹೆ ನೀಡಿದೆ ಮತ್ತು ಅನುಮಾನಾಸ್ಪದ ಲಿಂಕ್‌ಗಳು ಅಥವಾ ಸಂದೇಶಗಳೊಂದಿಗೆ ಸಂವಹನ ನಡೆಸುವಾಗ ಎಚ್ಚರಿಕೆಯಿಂದಿರಿ ಎಂದು ಹೇಳಿದೆ.

SCROLL FOR NEXT