ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್ 
ದೇಶ

ನಾನು ನಿಜವಾದ ಸನಾತನಿ; ಹಿಂದೂಗಳನ್ನು ಪ್ರಚೋದಿಸುವ BJP ಅಲ್ಲ: ದಿಗ್ವಿಜಯ್ ಸಿಂಗ್

Vishwanath S

ಅಗರ್ ಮಾಲ್ವಾ(ಮಧ್ಯಪ್ರದೇಶ): ಬಿಜೆಪಿ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮೈತ್ರಿ ಮಾಡಿಕೊಂಡಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿಗೆ ಎಲ್ಲಿಂದ ಹಣ ಸಿಗುತ್ತದೆ ಎಂಬುದನ್ನೂ ತಿಳಿಯಬೇಕು. ಬಿಜೆಪಿ ಹಿಂದೂಗಳನ್ನು ಪ್ರಚೋದಿಸುತ್ತದೆ, ಇನ್ನು ಓವೈಸಿ ಪಕ್ಷ ಎಐಎಂಐಎಂ ಮುಸ್ಲಿಮರನ್ನು ಪ್ರಚೋದಿಸುತ್ತದೆ. ಆದರೆ ಅವರು ಪರಸ್ಪರ ಪೂರಕವಾಗಿ ಮತ್ತು ಸಮನ್ವಯದಿಂದ ಕೆಲಸ ಮಾಡುತ್ತಾರೆ ಎಂದು ಅವರು ಆರೋಪಿಸಿದರು.

ಒವೈಸಿ ಹೈದರಾಬಾದ್‌ನಲ್ಲಿ ಮುಸ್ಲಿಮರನ್ನು ಬಹಿರಂಗವಾಗಿ ಪ್ರಚೋದಿಸುತ್ತಾರೆ, ಬಿಜೆಪಿ ಇಲ್ಲಿ ಹಿಂದೂಗಳನ್ನು ಪ್ರಚೋದಿಸುತ್ತದೆ. ಆದರೆ ನಾನು ಕೇಳುತ್ತೇನೆ, ಮುಸ್ಲಿಮರ ಮತಗಳನ್ನು ವಿಭಜಿಸಲು ಓವೈಸಿಯನ್ನು ಕಣಕ್ಕಿಳಿಸಲು ಹಣ ಎಲ್ಲಿಂದ ಬರುತ್ತದೆ? ಇವರು ಒಟ್ಟಿಗೆ ರಾಜಕೀಯ ಮಾಡುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ. ಜನರನ್ನು ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಸಿಂಗ್ ಆರೋಪಿಸಿದರು. ಕಳಂಕಿತ ನಾಯಕರನ್ನು ಸ್ವಚ್ಛಗೊಳಿಸುವ ವಾಷಿಂಗ್ ಮೆಷಿನ್ ಆಗಿ ಬಿಜೆಪಿ ಮಾರ್ಪಟ್ಟಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಿಯಾಗಿಯೇ ಹೇಳಿದ್ದಾರೆ ಎಂದು ಹೇಳಿದರು.

ತನ್ನನ್ನು ತಾನು ನಿಜವಾದ 'ಸನಾತನಿ' ಎಂದು ಕರೆದುಕೊಂಡ ದಿಗ್ವಿಜಯ್ ಸಿಂಗ್, ‘ಸರ್ವ ಧರ್ಮ ಸಂಭವ’ದಲ್ಲಿ ನಂಬಿಕೆ ಇಟ್ಟಿರುವ ಸನಾತನ ಧರ್ಮಕ್ಕೆ ತಮ್ಮ ಪಕ್ಷ ಸದಾ ಬೆಂಬಲ ನೀಡಿದೆ ಎಂದು ಹೇಳಿದರು. ಅವರು ಹೇಳಿದರು, “ನಾನು ಕಟ್ಟಾ ಹಿಂದೂ ಮತ್ತು ಗೋ ಸೇವಕ. ನಾನು ಗೋಹತ್ಯೆಯನ್ನು ವಿರೋಧಿಸುತ್ತೇನೆ, ಆದರೆ ನಾನು ಧರ್ಮದ ಹೆಸರಿನಲ್ಲಿ ಮತ ಕೇಳುವುದಿಲ್ಲ.

ಇದು ನನ್ನ ಕೊನೆಯ ಚುನಾವಣೆ - ದಿಗ್ವಿಜಯ್

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶ್ರೇಯಸ್ಸು ಬಿಜೆಪಿಗೆ ಸಲ್ಲದೇ ನ್ಯಾಯಾಲಯಕ್ಕೆ ಸಲ್ಲುತ್ತದೆ ಎಂದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಡಳಿತದಲ್ಲಿ ಇದೇ ಸ್ಥಳದಲ್ಲಿ ರಾಮಮಂದಿರದ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಬಿಜೆಪಿ ಅದನ್ನು ವಿರೋಧಿಸಿದರು. ಇದು ನನ್ನ ಕೊನೆಯ ಚುನಾವಣೆ ಮತ್ತು ರಾಜ್‌ಗಢ ಲೋಕಸಭಾ ಕ್ಷೇತ್ರದ ಜನರ ಧ್ವನಿಯಾಗಲು ಬಯಸುವುದಾಗಿ ಸಿಂಗ್ ಪುನರುಚ್ಚರಿಸಿದರು.

SCROLL FOR NEXT