ವಿದೇಶಾಂಗ ಸಚಿವ ಜೈ ಶಂಕರ್ PTI
ದೇಶ

ಭಯೋತ್ಪಾದಕರನ್ನು ಮಟ್ಟ ಹಾಕಲು ನಮಗೂ ಯಾವುದೇ ನಿಯಮ ಬೇಕಿಲ್ಲ: ವಿದೇಶಾಂಗ ಸಚಿವ ಜೈಶಂಕರ್ ಗುಡುಗು

ಭಯೋತ್ಪಾದಕರಿಗೆ ಯಾವುದೇ ನಿಯಮಗಳು ಅಥವಾ ಕಾನೂನುಗಳು ಇಲ್ಲದಿರುವಾಗ ಉಗ್ರರನ್ನು ಮಟ್ಟ ಹಾಕಲು ನಮಗೂ ಯಾವುದೇ ನಿಮಯಗಳು ಬೇಕಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುಡುಗಿದ್ದಾರೆ.

ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಯೋತ್ಪಾದಕರು ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವವರಿಗೆ ಮತ್ತೊಮ್ಮೆ ಬಲವಾದ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದಕರಿಗೆ ಯಾವುದೇ ನಿಯಮಗಳು ಅಥವಾ ಕಾನೂನುಗಳು ಇಲ್ಲದಿರುವಾಗ ಉಗ್ರರನ್ನು ಮಟ್ಟ ಹಾಕಲು ನಮಗೂ ಯಾವುದೇ ನಿಮಯಗಳು ಬೇಕಿಲ್ಲ ಎಂದು ಗುಡುಗಿದ್ದಾರೆ.

ದೇಶ-ವಿದೇಶಗಳಿರಲಿ, ಸಂಕೋಚವಿಲ್ಲದೆ ಮಾತನಾಡುವುದು ಜೈಶಂಕರ್ ಗೆ ಅಭ್ಯಾಸವಾಗಿದೆ. 2014ರಿಂದ ಭಾರತದ ವಿದೇಶಾಂಗ ನೀತಿಯಲ್ಲಿ ಬದಲಾವಣೆಯಾಗಿದೆ. ಇದು ಭಯೋತ್ಪಾದನೆಯನ್ನು ಎದುರಿಸುವ ಮಾರ್ಗವಾಗಿದೆ ಎಂದು ಜೈಶಂಕರ್ ಈ ಬಾರಿ ಭಯೋತ್ಪಾದನೆಯ ಬಗ್ಗೆ ನೇರವಾಗಿ ಹೇಳಿದ್ದಾರೆ. ಭಯೋತ್ಪಾದಕರು ನಿಯಮಗಳ ಪ್ರಕಾರ ನಡೆಯದಿದ್ದರೆ ಪ್ರತಿದಾಳಿಗೆ ನಮಗೇಕೆ ನಿಯಮ ಎಂದು ಅವರು ಹೇಳಿದರು.

ಎಸ್ ಜೈಶಂಕರ್ ಅವರು ಪುಣೆಯಲ್ಲಿ ನಡೆದ 'ವೈ ಇಂಡಿಯಾ ಮ್ಯಾಟರ್ಸ್: ಯುವಕರಿಗೆ ಅವಕಾಶಗಳು ಮತ್ತು ಜಾಗತಿಕ ರಂಗದಲ್ಲಿ ಭಾಗವಹಿಸುವಿಕೆ' ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಾರೂ ನಮ್ಮ ಮೇಲೆ ಪ್ರತಿದಾಳಿ ಮಾಡಲು ಸಾಧ್ಯವಿಲ್ಲ ಎಂದು ಭಯೋತ್ಪಾದಕರು ಭಾವಿಸಬಾರದು. ಭಯೋತ್ಪಾದಕರು ಯಾವುದೇ ನಿಯಮಗಳ ಪ್ರಕಾರ ಆಡುವುದಿಲ್ಲ. ಭಯೋತ್ಪಾದಕರಿಗೆ ಪ್ರತಿಕ್ರಿಯಿಸಲು ನಮಗೂ ಯಾವುದೇ ನಿಯಮಬೇಕಿಲ್ಲ ಎಂದು ಹೇಳಿದರು.

ಭಾರತವು ಯಾವ ದೇಶಗಳೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತದೆ? ಪಾಕಿಸ್ತಾನ ನೆರೆಹೊರೆಯಲ್ಲಿದ್ದು, ಅದಕ್ಕೆ ನಾವು ಮಾತ್ರ ಜವಾಬ್ದಾರರು ಎಂದು ಜೈಶಂಕರ್ ಹೇಳಿದ್ದಾರೆ. 1947ರಲ್ಲಿ ಕಾಶ್ಮೀರದ ಮೇಲೆ ಪಾಕಿಸ್ತಾನ ದಾಳಿ ನಡೆಸಿತು. ಭಾರತೀಯ ಸೇನೆಯು ಪಾಕ್ ವಿರುದ್ಧ ಹೋರಾಡಿತು. ಇದರಿಂದಾಗಿ ಕಾಶ್ಮೀರ ಭಾರತದೊಂದಿಗೆ ವಿಲೀನಗೊಂಡಿತು. ಭಾರತೀಯ ಸೇನೆಯು ಕ್ರಮ ಕೈಗೊಳ್ಳುತ್ತಿರುವಾಗ, ನಾವು ನಿಲ್ಲಿಸಿ ವಿಶ್ವಸಂಸ್ಥೆಗೆ (ಯುಎನ್) ಹೋದೆವು. ದಾಳಿಕೋರರನ್ನು ಭಯೋತ್ಪಾದಕರ ಬದಲಿಗೆ ಬುಡಕಟ್ಟು ನುಸುಳುಕೋರರು ಎಂದು ವಿವರಿಸಿದರು. ಪಾಕಿಸ್ತಾನವು ಭಯೋತ್ಪಾದನೆಯನ್ನು ಬಳಸುತ್ತಿದೆ ಎಂದು ನಾವು ಮೊದಲಿನಿಂದಲೂ ಸ್ಪಷ್ಟಪಡಿಸಿದ್ದರೆ, ನಮ್ಮ ನೀತಿ ತುಂಬಾ ಭಿನ್ನವಾಗಿರುತ್ತಿತ್ತು. ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತದ ವಿದೇಶಾಂಗ ನೀತಿಯಲ್ಲಿ ನಿರಂತರತೆಯ ಕುರಿತು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಜೈಶಂಕರ್, ಹೌದು ವಿದೇಶಾಂಗ ನೀತಿಯಲ್ಲಿ 50ರಷ್ಟು ನಿರಂತರತೆ ಮತ್ತು 50 ಪ್ರತಿಶತ ಬದಲಾವಣೆ ಆಗಿದೆ. ಮುಂಬೈ ದಾಳಿಯ ನಂತರ ನಾವು ಪ್ರತಿಕ್ರಿಯೆ ನೀಡಬಾರದಿತ್ತು ಎಂದು ಭಾವಿಸುವ ಒಬ್ಬ ವ್ಯಕ್ತಿಯೂ ಇರಲಿಲ್ಲ. ಆದರೆ ಆ ಸಮಯದಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡದಿದ್ದಕ್ಕಿಂತ ಪಾಕಿಸ್ತಾನದ ಮೇಲೆ ದಾಳಿ ಮಾಡುವ ವೆಚ್ಚ ಹೆಚ್ಚು ಎಂದು ಭಾವಿಸಲಾಗಿತ್ತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT