ರಾಂಬನ್ ನಲ್ಲಿ ಭೂಕುಸಿತ 
ದೇಶ

ಜಮ್ಮು ಮತ್ತು ಕಾಶ್ಮೀರ: ರಾಂಬನ್ ನಲ್ಲಿ ಭೂಕುಸಿತ, 1 ಕಿಮೀ ವರೆಗೂ ಭೂಮಿ ಮುಳುಗಡೆ, 30 ಮನೆಗಳಿಗೆ ಹಾನಿ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಬರೊಬ್ಬರಿ 1 ಕಿ.ಮೀ ವರೆಗೂ ರಸ್ತೆಗಳಲ್ಲಿನ ಭೂಮಿ ಮುಳುಗಡೆಯಾಗಿ 30ಮನೆಗಳು ಹಾನಿಗೊಳಗಾಗಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಬರೊಬ್ಬರಿ 1 ಕಿ.ಮೀ ವರೆಗೂ ರಸ್ತೆಗಳಲ್ಲಿನ ಭೂಮಿ ಮುಳುಗಡೆಯಾಗಿ 30ಮನೆಗಳು ಹಾನಿಗೊಳಗಾಗಿದೆ.

ಗುರುವಾರ ಸಂಜೆಯಿಂದ ಜಮ್ಮು ಮತ್ತು ಕಾಶ್ಮೀರದ ರಂಬಾನ್-ಗೂಲ್ ರಸ್ತೆಯಲ್ಲಿ ಸುಮಾರು 1 ಕಿ.ಮೀ.ನಷ್ಟು ಪ್ರದೇಶದಲ್ಲಿ ಭೂಮಿ ಮುಳುಗಡೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನಿಂದ 6 ಕಿಮೀ ದೂರದಲ್ಲಿರುವ ಪೆರ್ನೋಟ್ ಗ್ರಾಮದಲ್ಲಿ ಸುಮಾರು 30 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

''ನಿನ್ನೆ ಸಂಜೆಯಿಂದ ರಸ್ತೆಗಳಲ್ಲಿ ಸಣ್ಣಪುಟ್ಟ ಬಿರುಕುಗಳು ಉಂಟಾಗಿದ್ದು, 1000-1200 ಮೀಟರ್‌ ಉದ್ದದ ರಸ್ತೆಗೆ ಹಾನಿಯಾಗಿದೆ. ಈ ಭಾಗದಲ್ಲಿ ಭೂಮಿ ನಿಧಾನವಾಗಿ ಮುಳುಗುತ್ತಿದ್ದು, ಭೂಕುಸಿತದಿಂದಾಗಿ ಕೆಲವೆಡೆ 10-12 ಮೀಟರ್‌ಗಳಷ್ಟು ರಸ್ತೆ ಕುಸಿದಿದೆ. ಇಲ್ಲಿ ಇನ್ನೂ ಭೂ ಕುಸಿತ ಮುಂದುವರೆದಿದೆ. ಸಂತ್ರಸ್ತ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್‌ನ ಕಮಾಂಡಿಂಗ್ ಅಧಿಕಾರಿ ಎಸ್‌ಕೆ ಗೌತಮ್ ಹೇಳಿದ್ದಾರೆ.

"ನಿನ್ನೆ ಸಂಜೆ ರಾಂಬನ್ ನಿಂದ ಸುಮಾರು 5 ಕಿ.ಮೀ ದೂರದಲ್ಲಿ ಭೂಕುಸಿತ ಪ್ರಾರಂಭವಾಯಿತು. ಭೂ ಕುಸಿತ ಮತ್ತು ಭೂಮಿ ಮುಳುಗಡೆಯಿಂದಾಗಿ ರಸ್ತೆಗಳು ಹಾಳಾಗಿವೆ. ಸಮೀಪದ ಪ್ರದೇಶಗಳಲ್ಲಿ ಸುಮಾರು 30-40 ಮನೆಗಳು ಸಹ ಹಾನಿಗೊಳಗಾಗಿವೆ. ನಾವು ಈ ಭಾಗದಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಿದ್ದೇವೆ ಮತ್ತು ಅವರು ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ರಾಂಬನ್ ಎಡಿಡಿಸಿ ರೋಷನ್ ಲಾಲ್ ಮಾಹಿತಿ ನೀಡಿದ್ದಾರೆ.

ಜಮೀನು ಮುಳುಗಡೆಯಿಂದ ಬೆಳೆ ಹಾನಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT