ನವದೆಹಲಿ: ಅಜಾಗರೂಕತೆಯಿಂದ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ನಂತರ ಬಂಧಿಸಲ್ಪಟ್ಟ ಪಾಕಿಸ್ತಾನಿ ವ್ಯಕ್ತಿಯನ್ನು ಮಾನವೀಯ ಆಧಾರದ ಮೇಲೆ ಪಾಕಿಸ್ತಾನ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಬಿಎಸ್‌ಎಫ್ ವಕ್ತಾರರು ಭಾನುವಾರ ತಿಳಿಸಿದ್ದಾರೆ.
ಶನಿವಾರ ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯ ಗಡಿ ಬೇಲಿ ಬಳಿ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆಗಳು ಬಂಧಿಸಿದ್ದವು. ವಿಚಾರಣೆ ವೇಳೆ ಆತನಿಗೆ ಅಂತರಾಷ್ಟ್ರೀಯ ಗಡಿ ಜೋಡಣೆಯ ಬಗ್ಗೆ ತಿಳಿದಿರಲಿಲ್ಲ ಮತ್ತು ಹೀಗಾಗಿ ಭಾರತದ ಭೂಪ್ರದೇಶವನ್ನು ದಾಟಿದ್ದಾನೆ ಎಂಬುದು ತಿಳಿಸಿದು ಬಂದಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಹುಡುಕಾಟದ ಸಮಯದಲ್ಲಿ ವ್ಯಕ್ತಿಯ ಮೇಲೆ ಆಕ್ಷೇಪಾರ್ಹವಾದ ಪ್ರಮಾದ ಏನೂ ಕಂಡುಬಂದಿಲ್ಲ. ಪಾಕಿಸ್ತಾನ ಪ್ರಜೆಯ ಅನಗತ್ಯ ಚಲನವಲನವನ್ನು ನಿರ್ಬಂಧಿಸುವಲ್ಲಿ ವಿಫಲವಾದ ಬಗ್ಗೆ ಕಳವಳ ವ್ಯಕ್ತಪಡಿಸಲು ಪಾಕಿಸ್ತಾನ ರೇಂಜರ್‌ಗಳೊಂದಿಗೆ ಧ್ವಜ ಸಭೆಯನ್ನು ನಡೆಸಲಾಯಿತು ಎಂದು ಅವರು ಹೇಳಿದರು.