ಸಾಂದರ್ಭಿಕ ಚಿತ್ರ 
ದೇಶ

ಮಣಿಪುರ: ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳದಂತೆ ಸೇನೆಯನ್ನೇ ತಡೆದ ಮಹಿಳೆಯರು

ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಮಂಗಳವಾರ ಮಹಿಳೆಯರ ನೇತೃತ್ವದ ಪ್ರತಿಭಟನಾಕಾರರು ಜಪ್ತಿ ಮಾಡಿದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತೆಗೆದುಕೊಂಡು ಹೋಗದಂತೆ ಸೇನೆಯನ್ನು ತಡೆದರು.

ಬಿಷ್ಣುಪುರ್: ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಮಂಗಳವಾರ ಮಹಿಳೆಯರ ನೇತೃತ್ವದ ಪ್ರತಿಭಟನಾಕಾರರು ಜಪ್ತಿ ಮಾಡಿದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತೆಗೆದುಕೊಂಡು ಹೋಗದಂತೆ ಸೇನೆಯನ್ನು ತಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಕುಂಬಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಸೇನೆಯ ಮಹಾರ್ ರೆಜಿಮೆಂಟ್‌ನ ಸಿಬ್ಬಂದಿ, ಎರಡು ಎಸ್‌ಯುವಿಗಳನ್ನು ತಡೆದ, ಅದರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು ಎಂದು ಅವರು ಹೇಳಿದ್ದಾರೆ.

"ಸೇನಾ ಸಿಬ್ಬಂದಿಯನ್ನು ನೋಡಿದ ತಕ್ಷಣ ಎರಡು ವಾಹನಗಳಲ್ಲಿದ್ದ ದುಷ್ಕರ್ಮಿಗಳು, ವಾಹನ ಮತ್ತು ಶಸ್ತ್ರಾಸ್ತ್ರಗಳನ್ನು ಬಿಟ್ಟು ಓಡಿಹೋದರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ, 'ಮೀರಾ ಪೈಬಿಸ್' - ಮೈಟಿ ಮಹಿಳೆಯರ ನಾಗರಿಕ ಗುಂಪು ಸ್ಥಳದಲ್ಲಿ ಜಮಾಯಿಸಿ, ಶಸ್ತ್ರಾಸ್ತ್ರಗಳನ್ನು ತಮಗೆ ಹಸ್ತಾಂತರಿಸುವಂತೆ ಸೇನೆಗೆ ಒತ್ತಾಯಿಸಿದರು ಎಂದು ಅವರು ತಿಳಿಸಿದರು.

ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಸಂಘರ್ಷ ಸಂಪೂರ್ಣ ಮುಗಿಯುವವರೆಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಬಾರದು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.

ನೂರಾರು ಮಹಿಳೆಯರು ರಸ್ತೆ ತಡೆ ನಡೆಸಿ, ಸೇನಾ ಬೆಂಗಾವಲು ಪಡೆ ಸ್ಥಳದಿಂದ ಹೊರಹೋಗದಂತೆ ತಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಪನ್ನು ಚದುರಿಸಲು, ಸೇನೆಯು ಗಾಳಿಯಲ್ಲಿ ಗುಂಡು ಹಾರಿಸಿತು. ಆದರೂ ಮಹಿಳೆಯರು ಸ್ಥಳದಿಂದ ತೆರಳಲಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Lionel Messi: ಮೆಸ್ಸಿ ನೋಡೋಕೆ ಆಗಲಿಲ್ಲ ಎಂದು ರೊಚ್ಚಿಗೆದ್ದ ಫ್ಯಾನ್ಸ್, ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ದಾಂಧಲೆ-Video

17.5 ಕೋಟಿ ರೂ. ವಂಚನೆ ಪ್ರಕರಣ: ಸಿದ್ದರಾಮಯ್ಯರ ವಿಶೇಷ ಕರ್ತವ್ಯಾಧಿಕಾರಿ ಪುತ್ರನ ಹೆಸರು: NRI ದೂರು!

'ಕಡತಗಳು ಟೇಬಲ್‌ನಿಂದ ಟೇಬಲ್‌ಗೆ ವರ್ಗವಾಗುತ್ತಿರುವಾಗಲೇ ಸುವರ್ಣ ಸಮಯ ಕಳೆದು ಹೋಗುತ್ತಿದೆ': HDKಗೆ ರವಿಕುಮಾರ್ ಟಾಂಗ್

ಬೆಂಗಳೂರು: ರಿಕ್ಕಿ ಕೇಜ್ ಮನೆಯಲ್ಲಿ ಡೆಲಿವರಿ ಬಾಯ್ ಕಳ್ಳತನ; ವಿಡಿಯೋ ಹಂಚಿಕೊಂಡ 'ಗ್ರ್ಯಾಮಿ' ಪುರಸ್ಕೃತ!

ರಾಂಚಿ: ಲ್ಯಾಂಡಿಗೆ ವೇಳೆ ಇಂಡಿಗೋ ವಿಮಾನದ ಬಾಲ ರನ್‌ವೇಗೆ ಡಿಕ್ಕಿ; ತಪ್ಪಿದ ದೊಡ್ಡ ಅನಾಹುತ!

SCROLL FOR NEXT