ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಕುಸಿದ ಮನೆಯ ಅವಶೇಷಗಳ ಬಳಿ ಸ್ಥಳೀಯ ಅಂಗಡಿ ಮಾಲೀಕರು ಮತ್ತು ನಿವಾಸಿಗಳು. 
ದೇಶ

ದೆಹಲಿಯಲ್ಲಿ ಮುಂದುವರಿದ ಧಾರಾಕಾರ ಮಳೆ: ಕಟ್ಟಡ ಕುಸಿದು ಓರ್ವ ಸಾವು, ಮೂವರಿಗೆ ಗಾಯ

ದೆಹಲಿ ಪೊಲೀಸರಿಗೆ ಕಟ್ಟಡ ಕುಸಿತದ 26 ಕರೆಗಳು ಬಂದಿವೆ. ಸಬ್ಜಿ ಮಂಡಿ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಕೊಲ್ಲಲಾಯಿತು, 12 ಗಂಟೆಯವರೆಗೆ ಟ್ರಾಫಿಕ್ ಜಾಮ್‌ಗೆ ಸಂಬಂಧಿಸಿದ 2,727 ಕರೆಗಳು ಮತ್ತು ಜಲಾವೃತಕ್ಕೆ ಸಂಬಂಧಿಸಿದ 119 ಕರೆಗಳು ಬಂದಿವೆ.

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಇಂದು ಗುರುವಾರ ಕೂಡ ಮುಂದುವರಿದಿದ್ದು, ಭಾರೀ ಮಳೆಯಿಂದಾಗಿ ನಗರದ ಅನೇಕ ಭಾಗಗಳು ಮುಳುಗಿ 27 ಕಟ್ಟಡಗಳು ಕುಸಿದು ಇಂದು ಮತ್ತೊಬ್ಬರು ಅಸುನೀಗುವ ಮೂಲಕ ಮೃತರ ಸಂಖ್ಯೆ 3ಕ್ಕೇರಿದೆ. ಮೂವರು ಗಾಯಗೊಂಡಿದ್ದಾರೆ.

ದೆಹಲಿ ಪೊಲೀಸರಿಗೆ ಕಟ್ಟಡ ಕುಸಿತದ 26 ಕರೆಗಳು ಬಂದಿವೆ. ಸಬ್ಜಿ ಮಂಡಿ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಕೊಲ್ಲಲಾಯಿತು, 12 ಗಂಟೆಯವರೆಗೆ ಟ್ರಾಫಿಕ್ ಜಾಮ್‌ಗೆ ಸಂಬಂಧಿಸಿದ 2,727 ಕರೆಗಳು ಮತ್ತು ಜಲಾವೃತಕ್ಕೆ ಸಂಬಂಧಿಸಿದ 119 ಕರೆಗಳು ಬಂದಿವೆ.

ಐಟಿಒ, ರಾಜ್‌ಘಾಟ್, ಮದರ್ ಡೈರಿ, ಗಣೇಶ್ ನಗರ ಮತ್ತು ಪಟ್‌ಪರ್‌ಗಂಜ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ನಿನ್ನೆ ಗಾಜಿಪುರದಲ್ಲಿ 22 ವರ್ಷದ ಮಹಿಳೆ ಮತ್ತು ಅವರ ಮೂರು ವರ್ಷದ ಮಗ ನೀರು ತುಂಬಿದ ಕಾರಣ ಚರಂಡಿಗೆ ಜಾರಿ ಬಿದ್ದು ಮೃತಪಟ್ಟಿದ್ದರು.

ಪೂರ್ವ ದೆಹಲಿಯ ಮಯೂರ್ ವಿಹಾರ್ ಪ್ರದೇಶದ ಸಲ್ವಾನ್ ನಿಲ್ದಾಣದಲ್ಲಿ 147.5 ಮಿಮೀ ಮಳೆ ದಾಖಲಾಗಿದೆ. ನಜಾಫ್‌ಗಢ್ ನಿಲ್ದಾಣದಲ್ಲಿ 113 ಮಿಮೀ ಮತ್ತು ಲೋಧಿ ರಸ್ತೆ, ದೆಹಲಿ ವಿಶ್ವವಿದ್ಯಾಲಯ ಮತ್ತು ಸಫ್ದರ್‌ಜಂಗ್ ವೀಕ್ಷಣಾಲಯಗಳಲ್ಲಿ ಕ್ರಮವಾಗಿ 107.5 ಮಿಮೀ, 104.5 ಮಿಮೀ ಮತ್ತು 105.6 ಮಿಮೀ ಮಳೆ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್