ನವದೆಹಲಿ: ಭಾರತಕ್ಕೆ ಆಗಮಿಸಿರುವ ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಚಿನ್ಹ್ ಅವರು ನಿನ್ನೆಯಿಂದ ಭಾರತ ಪ್ರವಾಸದಲ್ಲಿದ್ದಾರೆ. ದ್ವಿಪಕ್ಷೀಯ ಸಭೆಗೂ ಮುನ್ನ ರಾಜ್‌ಘಾಟ್‌ಗೆ ಭೇಟಿ ನೀಡಿದ ಚಿನ್ಹ್, ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸೂಚಿಸಿದರು. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರ ಪ್ರಿಯವಾದ ರಘುಪತಿ ರಾಘವ ರಾಜಾ ರಾಮ್ ಗೀತೆಯನ್ನು ನುಡಿಸಲಾಯಿತು.
ಇಂದು ಮುಂಜಾನೆ, ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಚಿನ್ಹ್ ಅವರಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಯಿತು, ಅಲ್ಲಿ ಅವರನ್ನು ಪ್ರಧಾನಿ ಮೋದಿ ಅವರು ಸ್ವಾಗತಿಸಿದರು. ನಂತರ ಅವರು ಭಾರತೀಯ ಸೇನೆಯಿಂದ ಗೌರವ ಗಾರ್ಡ್ ನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಉಪಸ್ಥಿತರಿದ್ದರು.
ನಿನ್ನೆ ವಿದೇಶಾಂಗ ಸಚಿವ ಜೈಶಂಕರ್ ಅವರು ಚಿನ್ಹ್ ಅವರನ್ನು ಭೇಟಿ ಮಾಡಿದ್ದರು.
ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ವಿಯೆಟ್ನಾಂ ನಡುವಿನ ವ್ಯೂಹಾತ್ಮಕ ಸಂಬಂಧಗಳು ಏರುಮುಖದಲ್ಲಿವೆ. ಕಳೆದ ವರ್ಷ ಜುಲೈನಲ್ಲಿ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹೆಚ್ಚುತ್ತಿರುವ ಆಕ್ರಮಣಕಾರಿ ನಡವಳಿಕೆಯ ಬಗ್ಗೆ ಕಳವಳಗಳ ಮಧ್ಯೆ ಭಾರತವು ಬೆಳೆಯುತ್ತಿರುವ ದ್ವಿಪಕ್ಷೀಯ ಕಾರ್ಯತಂತ್ರ ಮತ್ತು ರಕ್ಷಣಾ ಪಾಲುದಾರಿಕೆಯನ್ನು ಪ್ರತಿಬಿಂಬಿಸುವ ಸಲುವಾಗಿ ತನ್ನ ಸೇವಾ ಕ್ಷಿಪಣಿ ಕಾರ್ವೆಟ್ INS ಕಿರ್ಪಾನ್ ನ್ನು ವಿಯೆಟ್ನಾಂಗೆ ಉಡುಗೊರೆಯಾಗಿ ನೀಡಿತು.
ಭಾರತವು ಮೊದಲ ಬಾರಿಗೆ ಸಂಪೂರ್ಣ ಕಾರ್ಯಾಚರಣೆಯ ಕಾರ್ವೆಟ್ ನ್ನು ಸ್ನೇಹಪರ ವಿದೇಶಿ ದೇಶಕ್ಕೆ ಹಸ್ತಾಂತರಿಸುತ್ತಿರುವುದು ಅದೇ ಮೊದಲು.
ವಿಯೆಟ್ನಾಂ, ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ನ ಪ್ರಮುಖ ದೇಶ, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾದೊಂದಿಗೆ ಪ್ರಾದೇಶಿಕ ವಿವಾದಗಳನ್ನು ಹೊಂದಿದೆ. ದಕ್ಷಿಣ ಚೀನಾ ಸಮುದ್ರದ ವಿಯೆಟ್ನಾಂ ನೀರಿನಲ್ಲಿ ಭಾರತವು ತೈಲ ಪರಿಶೋಧನಾ ಯೋಜನೆಗಳನ್ನು ಹೊಂದಿದೆ.
ಭಾರತ ಮತ್ತು ವಿಯೆಟ್ನಾಂ ಸಾಮಾನ್ಯ ಹಿತಾಸಕ್ತಿಗಳನ್ನು ರಕ್ಷಿಸಲು ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಕಡಲ ಭದ್ರತಾ ಸಹಕಾರವನ್ನು ಹೆಚ್ಚಿಸುತ್ತಿವೆ.