ನದಿಗೆ ಡೈವ್ ಮಾಡಲು ವಿದ್ಯುತ್ ಕಂಬ ಏರಿದ ಯುವಕ 
ದೇಶ

ತುಂಬಿ ಹರಿಯುತ್ತಿರುವ ಗಾಂಗಾ ನದಿ: ವಿದ್ಯುತ್ ಕಂಬ ಏರಿ ಡೈವ್ ಮಾಡುತ್ತಿರುವ ಯುವಕ; ಅಪಾಯಕಾರಿ ಸ್ಟಂಟ್ Video Viral

ಉತ್ತರ ಭಾರತದಲ್ಲಿ ಮಳೆ ಅಬ್ಬರ ಜೋರಾಗಿದ್ದು ದೇಶದ ಪ್ರಮುಖ ನದಿಗಳಲ್ಲಿ ಒಂದಾದ ಗಂಗಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ಗಂಗಾ ನದಿ ಪ್ರವಹಿಸುವ ಘಾಟ್ ಗಳಲ್ಲಿ ಸಾಮಾನ್ಯವಾಗಿ ನದಿ ತುಂಬಿ ಹರಿಯುತ್ತಿದ್ದು ಇದೇ ನದಿಯಲ್ಲಿ ಸ್ಥಳೀಯ ಯುವಕರು ಅಪಾಯಕಾರಿಯಾಗಿ ಸ್ವಿಮ್ಮಿಂಗ್ ಮಾಡುತ್ತಿದ್ದಾರೆ.

ಕಾನ್ಪುರ: ನದಿ ಬಳಿಯ ವಿದ್ಯುತ್ ಕಂಬ ಏರಿ ಗಂಗಾನದಿಗೆ ಧುಮುಕುತ್ತಿರುವ ಯುವಕರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಉತ್ತರ ಭಾರತದಲ್ಲಿ ಮಳೆ ಅಬ್ಬರ ಜೋರಾಗಿದ್ದು ದೇಶದ ಪ್ರಮುಖ ನದಿಗಳಲ್ಲಿ ಒಂದಾದ ಗಂಗಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ಗಂಗಾ ನದಿ ಪ್ರವಹಿಸುವ ಘಾಟ್ ಗಳಲ್ಲಿ ಸಾಮಾನ್ಯವಾಗಿ ನದಿ ತುಂಬಿ ಹರಿಯುತ್ತಿದ್ದು ಇದೇ ನದಿಯಲ್ಲಿ ಸ್ಥಳೀಯ ಯುವಕರು ಅಪಾಯಕಾರಿಯಾಗಿ ಸ್ವಿಮ್ಮಿಂಗ್ ಮಾಡುತ್ತಿದ್ದಾರೆ. ಇಂತಹ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದರೆ ಇದೇ ಉತ್ತರ ಪ್ರದೇಶದ ಗಂಗಾನದಿ ತಪ್ಪಲಿನ ಭೈರವ್ ಘಾಟ್ ನಲ್ಲಿ ಯುವಕರು ವಿದ್ಯುತ್ ಕಂಬ ಏರಿ ಗಂಗಾನದಿಗೆ ಹಾರುತ್ತಿರುವ ಅಪಾಯಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾಲಿಗೆ ಚಪ್ಪಲಿಯೂ ಇಲ್ಲದೆ ಒಂದೇ ಒಂದು ಚಡ್ಡಿಯಲ್ಲಿ ಯುವಕನೋರ್ವ ವಿದ್ಯುತ್ ಕಂಬ ಏರಿ ನದಿಗೆ ಹಾರುತ್ತಿದ್ದಾನೆ. ಅದೃಷ್ಟವಶಾತ್ ಕಂಬದಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಹೀಗಾಗಿ ಯುವಕ ಪಾರಾಗಿದ್ದಾನೆ.

ಇನ್ನು ಉತ್ತರ ಪ್ರದೇಶದಲ್ಲೂ ಭಾರಿ ಮಳೆ ಅಬ್ಬರಿಸುತ್ತಿದ್ದು, ಗಂಗಾ ನದಿ ಸೇರಿದಂತೆ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಒಂದೆಡೆ ಪ್ರವಾಹದ ಭೀತಿ ನಡುವೆಯೇ ಯುವಕ ಹುಚ್ಚಾಟವೂ ಮುಂದುವರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!