ಮುಂಬೈ: ಹಾಜಿ ಅಲಿ ದರ್ಗಾ ನವೀಕರಣಕ್ಕೆ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ 1.21 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಕುರಿತು ದರ್ಗಾದ ಮ್ಯಾನೇಜಿಂಗ್ ಟ್ರಸ್ಟಿ ಸುಹೇಲ್ ಖಂಡ್ವಾನಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ದರ್ಗಾಕ್ಕೆ ಅಕ್ಷಯ್ ಕುಮಾರ್ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸುವ ಹಾಗೂ ಚಾದರ್ ಹೊದಿಸುವ ವಿಡಿಯೋವೊಂದನ್ನು ಖಾಂಡ್ವಾನಿ ಫೋಸ್ಟ್ ಮಾಡಿದ್ದಾರೆ. ಹಾಜಿ ಅಲಿ ದರ್ಗಾ ನವೀಕರಣ ಕಾರ್ಯ ನಡೆಯುತ್ತಿದ್ದು, ಅಕ್ಷಯ್ ಕುಮಾರ್ ರೂ. 1,21,00,000 ದೇಣಿಗೆ ನೀಡುವ ಮೂಲಕ ಒಂದು ಭಾಗದ ನವೀಕರಣದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
"ಅಕ್ಷಯ್ ಕುಮಾರ್ ಅವರ ಪರೋಪಕಾರಿ ಗುಣವನ್ನು ನನ್ನ ಇಡೀ ತಂಡದೊಂದಿಗೆ ಸ್ವಾಗತಿಸುವುದು ನನಗೆ ಮ್ಯಾನೇಜಿಂಗ್ ಟ್ರಸ್ಟಿಯಾಗಿ ನನಗೆ ಹೆಮ್ಮೆಯಾಗಿದೆ. ಅವರ ದಿವಂಗತ ಪೋಷಕರು ಮತ್ತು ಇಡೀ ರಾಷ್ಟ್ರಕ್ಕಾಗಿ ಪ್ರಾರ್ಥಿಸಲಾಗಿದೆ ಎಂದು ಖಾಂಡ್ವಾನಿ ಹೇಳಿದ್ದಾರೆ.