ಕಿರಣ್ ರಿಜಿಜು online desk
ದೇಶ

ವಕ್ಫ್ ಆಸ್ತಿ (ಅನಧಿಕೃತ ನಿವಾಸಿಗಳ ತೆರವು) ಮಸೂದೆ, 2014 ನ್ನು ಹಿಂಪಡೆದ ಸರ್ಕಾರ

ವಕ್ಫ್ ಆಸ್ತಿ (ಅನಧಿಕೃತ ನಿವಾಸಿಗಳ ತೆರವು), ಮಸೂದೆ, 2014 ನ್ನು ಹಿಂದಿನ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ ರೆಹಮಾನ್ ಖಾನ್ ಅವರು ಫೆಬ್ರವರಿ 18, 2014 ರಂದು ರಾಜ್ಯಸಭೆಯಲ್ಲಿ ಮಂಡಿಸಿದ್ದರು.

ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಆ.08 ರಂದು ವಕ್ಫ್ ಆಸ್ತಿ (ಅನಧಿಕೃತ ನಿವಾಸಿಗಳ ತೆರವು) ಮಸೂದೆ, 2014 ನ್ನು ಹಿಂಪಡೆದಿದೆ.

ವಕ್ಫ್ ಆಸ್ತಿಗಳಿಂದ ಅನಧಿಕೃತ ನಿವಾಸಿಗಳನ್ನು ಹೊರಹಾಕುವ ಕಾರ್ಯವಿಧಾನಕ್ಕೆ ಈ ಮಸೂದೆ ನೆರವಾಗಿತ್ತು. ಇದನ್ನು ಈಗ ಹಿಂಪಡೆಯುವುದಾಗಿ ರಾಜ್ಯಸಭೆಯಲ್ಲಿ ಸರ್ಕಾರ ಘೋಷಿಸಿದೆ.

ವಕ್ಫ್ ಆಸ್ತಿ (ಅನಧಿಕೃತ ನಿವಾಸಿಗಳ ತೆರವು), ಮಸೂದೆ, 2014 ನ್ನು ಹಿಂದಿನ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ ರೆಹಮಾನ್ ಖಾನ್ ಅವರು ಫೆಬ್ರವರಿ 18, 2014 ರಂದು ರಾಜ್ಯಸಭೆಯಲ್ಲಿ ಮಂಡಿಸಿದ್ದರು. ಇದನ್ನು ಮಾರ್ಚ್ 5, 2014 ರಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು.

ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಮೀಸಲಾದ ಸ್ವತ್ತುಗಳನ್ನು ವಕ್ಫ್ ಆಸ್ತಿಗಳು ಎಂದು ಉಲ್ಲೇಖಿಸಲಾಗುತ್ತದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಹಿಂಪಡೆಯಲು ಸದನದ ಅನುಮತಿ ಕೋರಿದರು ಮತ್ತು ಸದಸ್ಯರು ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಹಿಂತೆಗೆದುಕೊಳ್ಳುವಿಕೆಯನ್ನು ಅಂಗೀಕರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್