ಪುಣೆ: ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಟಿಕೆಟ್‌ನೊಂದಿಗೆ ಲಖನೌಗೆ ತೆರಳಲು ಯತ್ನಿಸಿದ 27 ವರ್ಷದ ಯುವಕನನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಸಲೀಂ ಗೋಲ್ ಖಾನ್, ತನ್ನ ಸ್ನೇಹಿತ ಉತ್ತರ ಪ್ರದೇಶ ಮೂಲದ ನಸ್ರುದ್ದೀನ್ ಖಾನ್ ಅವರಿಂದ ಖಾಸಗಿ ಏರ್‌ಲೈನ್ಸ್ ಟಿಕೆಟ್ ಪಡೆದಿದ್ದಾನೆ.
ಈ ಸಂಬಂಧ ಪೊಲೀಸರು ಸಲೀಂ ಖಾನ್ ಮತ್ತು ನಸ್ರುದ್ದೀನ್ ಖಾನ್ ವಿರುದ್ಧ ಭಾರತೀಯ ನ್ಯಾಯ್ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ಬೆಳಗಿನ ಜಾವ 3.55ಕ್ಕೆ ಈ ಘಟನೆ ನಡೆದಿದೆ. "ಚೆಕ್-ಇನ್ ಕಿಯೋಸ್ಕ್‌ನಲ್ಲಿರುವ ಸಿಐಎಸ್‌ಎಫ್ ಅಧಿಕಾರಿಗಳು ಸಲೀಂ ಖಾನ್ ತೋರಿಸಿದ ಟಿಕೆಟ್‌ನಲ್ಲಿ ನಕಲಿ ಪಿಎನ್‌ಆರ್ ಸಂಖ್ಯೆಯನ್ನು ಪತ್ತೆ ಮಾಡಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಇಂಡಿಗೋ ವಿಮಾನದಲ್ಲಿ ಲಖನೌಗೆ ತೆರಳುತ್ತಿದ್ದ ತನ್ನ ತಂದೆಯನ್ನು ನೋಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದೇನೆ ಎಂದು ಖಾನ್ ಹೇಳಿಕೊಂಡಿದ್ದಾನೆ. ಅವರ ತಂದೆಯ ಟಿಕೆಟ್‌ನಲ್ಲಿನ ಪಿಎನ್‌ಆರ್ ನಿಜವಾಗಿದೆ ಎಂದು ವಿಮಂತಲ್ ಪೊಲೀಸ್ ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಲೀಂ ಖಾನ್ ತನ್ನ ಸ್ನೇಹಿತ ನಸ್ರುದ್ದೀನ್ ಖಾನ್‌ನಿಂದ 6,500 ರೂಪಾಯಿ ನೀಡಿ ನಕಲಿ ಪಿಎನ್‌ಆರ್‌ನೊಂದಿಗೆ ಟಿಕೆಟ್ ಪಡೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
ಟಿಕೆಟ್ ಪಡೆಯುವ ಹಿಂದಿನ ಉದ್ದೇಶದ ಬಗ್ಗೆ ಹೇಳಿಕೆಗಳನ್ನು ಬದಲಾಯಿಸುತ್ತಿರುವ ಸಲೀಂ ಖಾನ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ತಂದೆಯನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಬಂದಿರುವುದಾಗಿ ಸಲೀಂ ಖಾನ್ ಹೇಳಿಕೊಂಡಿದ್ದಾನೆ. ಆದರೆ ಲಖನೌಗೆ ತೆರಳಲು ನಕಲಿ PNR ಇರುವ ಟಿಕೆಟ್ ಕೊಂಡೊಯ್ಯುತ್ತಿದ್ದರು" ಎಂದು ಅಧಿಕಾರಿ ತಿಳಿಸಿದ್ದಾರೆ.