ನವದೆಹಲಿ: ಕಾಂಗ್ರೆಸ್ ತನ್ನ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗವನ್ನು ಶನಿವಾರ ಪುನರ್‌ರಚಿಸಿದ್ದು, ಅದರ ಅಧ್ಯಕ್ಷರಾಗಿ ಅಭಿಷೇಕ್ ಮನು ಸಿಂಘ್ವಿ ಅವರು ನೇಮಕಗೊಂಡಿದ್ದಾರೆ.
ಕಾಂಗ್ರೆಸ್ ಕಾನೂನು ವಿಭಾಗವು ಹಿರಿಯ ವಕೀಲರಾದ ಸಲ್ಮಾನ್ ಖುರ್ಷಿದ್, ಕೆಟಿಎಸ್ ತುಳಸಿ ಮತ್ತು ವಿವೇಕ್ ತನ್ಖಾ ಅವರನ್ನು ಒಳಗೊಂಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಂಬರುವ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವಾರ್ ರೂಮ್ ಅಧ್ಯಕ್ಷರ ನೇಮಕದ ಪರಿಷ್ಕೃತ ಪ್ರಸ್ತಾವನೆಯನ್ನು ಸಹ ಅನುಮೋದಿಸಿದ್ದಾರೆ.
ಚಲ್ಲಾ ವಂಶಿ ಚಂದ್ ರೆಡ್ಡಿ ಅವರು ಮಹಾರಾಷ್ಟ್ರ, ನವೀನ್ ಶರ್ಮಾ ಅವರನ್ನು ಹರಿಯಾಣ ಮತ್ತು ಗೋಕುಲ್ ಬುಟೇಲ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ವಾರ್ ರೂಮ್ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ರಾಷ್ಟ್ರೀಯ ವಾರ್ ರೂಂ ಅಧ್ಯಕ್ಷರಾಗಿ ಸಸಿಕಾಂತ್ ಸೆಂಥಿಲ್ ಮುಂದುವರಿಯಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನರ್‌ರಚಿಸುವ ಪ್ರಸ್ತಾವನೆಗೂ ಖರ್ಗೆ ಅನುಮೋದನೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.