ಸಾಂದರ್ಭಿಕ ಚಿತ್ರ 
ದೇಶ

ಥಾಣೆ: ಸೆಕ್ಸ್ ದಂಧೆಗಾಗಿ ಬಾಂಗ್ಲಾದೇಶಿ ಮಹಿಳೆಯ ಕಳ್ಳಸಾಗಣೆ; ಇಬ್ಬರ ಬಂಧನ, ಅತ್ಯಾಚಾರ ಪ್ರಕರಣ ದಾಖಲು

ಸೆಕ್ಸ್ ದಂಧೆಗಾಗಿ ಬಾಂಗ್ಲಾದೇಶಿ ಮಹಿಳೆಯ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ.

ಥಾಣೆ: ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ 24 ವರ್ಷದ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಮತ್ತು ಸೆಕ್ಸ್ ದಂಧೆಗಾಗಿ ಮಹಿಳೆಯನ್ನು 2 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದಲ್ಲಿ ನವಿ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸೆಕ್ಸ್ ದಂಧೆಗಾಗಿ ಬಾಂಗ್ಲಾದೇಶಿ ಮಹಿಳೆಯ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಮಹಿಳೆ ಸೇರಿದಂತೆ ಬಂಧಿತ ಜೋಡಿಯನ್ನು ನೆರೂಲ್ ಮೂಲದ ಅಮೀರ್ ಅಜಂ(27) ಮತ್ತು ಶೈಫಾಲಿ ಜಹಾಂಗೀರ್ ಮುಲ್ಲಾ(34) ಎಂದು ಗುರುತಿಸಲಾಗಿದೆ.

"ಕೆಲವು ಏಜೆಂಟರು ಸಂತ್ರಸ್ತೆಯನ್ನು ಉದ್ಯೋಗ ಕೊಡಿಸುವ ಭರವಸೆಯ ಮೇಲೆ ಭಾರತಕ್ಕೆ ಕರೆತಂದು ವಂಚಿಸಿದ್ದಾರೆ. ಮಹಿಳೆ ಭಾರತಕ್ಕೆ ಬಂದ ನಂತರ ಒಬ್ಬ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ, ಇತರ ಕೆಲವು ಆರೋಪಿಗಳು ಯುವತಿಯನ್ನು ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ಲಾಡ್ಜ್‌ಗೆ ಕರೆದೊಯ್ದು ಸೆಕ್ಸ್ ದಂಧೆ ನಡೆಸುತ್ತಿರುವವರಿಗೆ ಒಪ್ಪಿಸಿದ್ದಾರೆ ಎಂದು ನೆರೂಲ್ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ನೀಲೇಶ್ ಫುಲೆ ಹೇಳಿದ್ದಾರೆ.

"ಏಜೆಂಟರು ನಂತರ ಸಂತ್ರಸ್ತೆಯನ್ನು ಕರೆದೊಯ್ದು ಇತರ ಇಬ್ಬರು ಆರೋಪಿಗಳಿಗೆ 2 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಅವರು ಸೆಕ್ಸ್ ದಂಧೆಯಲ್ಲಿ ಭಾಗಿಯಾಗುವಂತೆ ಯುವತಿಗೆ ಒತ್ತಾಯಿಸಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಅಡಿಯಲ್ಲಿ ಅತ್ಯಾಚಾರ, ಮಾನವ ಕಳ್ಳಸಾಗಣೆ, ಅನೈತಿಕ ಸಂಬಂಧ(ತಡೆಗಟ್ಟುವಿಕೆ) ಕಾಯ್ದೆ, ಪಾಸ್‌ಪೋರ್ಟ್(ಭಾರತದ ಪ್ರವೇಶ) ಕಾಯ್ದೆ ಸೇರಿದಂತೆ ಇತರ ಸೆಕ್ಷೆನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!