ಸಂಗ್ರಹ ಚಿತ್ರ 
ದೇಶ

ಆಘಾತಕಾರಿ ಘಟನೆ: ಮಧ್ಯರಾತ್ರಿ ಬಾಮೈದನನ್ನು ಕೋಣೆಗೆ ಕರೆದು ಮರ್ಮಾಂಗವನ್ನೇ ಕತ್ತರಿಸಿದ ಅತ್ತಿಗೆ!

ಯುವಕ ಕೋಣೆಗೆ ಹೋಗುತ್ತಿದ್ದಂತೆ ಮಹಿಳೆ ಆತನ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾಳೆ. ಯುವಕ ಕೋಣೆಯಲ್ಲೇ ಬಿದ್ದು ನೋವಿನಿಂದ ನರಳುತ್ತ ಜೋರಾಗಿ ಕೂಗಿಕೊಂಡಿದ್ದಾನೆ.

ಸಿಧಿ: ಮಧ್ಯಪ್ರದೇಶದ ಸಿಧಿಯಲ್ಲಿ ಅತ್ತಿಗೆ ತನ್ನ ಬಾಮೈದನ ಖಾಸಗಿ ಅಂಗವನ್ನು ಕತ್ತರಿಸಿದ ಘಟನೆ ಇದೀಗ ಸಂಚಲನ ಮೂಡಿಸಿದೆ. ಘಟನೆಗೂ ಮೊದಲು ಬಾಮೈದನನ್ನು ಕೋಣೆಗೆ ಕರೆದ ಅತ್ತಿಗೆ ಈ ದುಷ್ಕೃತ್ಯ ಎಸೆಗಿದ್ದಾಳೆ.

ಯುವಕ ಕೋಣೆಗೆ ಹೋಗುತ್ತಿದ್ದಂತೆ ಮಹಿಳೆ ಆತನ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾಳೆ. ಯುವಕ ಕೋಣೆಯಲ್ಲೇ ಬಿದ್ದು ನೋವಿನಿಂದ ನರಳುತ್ತ ಜೋರಾಗಿ ಕೂಗಿಕೊಂಡಿದ್ದಾನೆ. ಕೂಡಲೇ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸಂತ್ರಸ್ತನ ದೂರಿನ ಮೇರೆಗೆ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸಿಧಿ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ಕುಸ್ಮಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಜಮೀನಿನ ವಿಚಾರವಾಗಿ ಅತ್ತಿಗೆಯೊಂದಿಗೆ ಜಗಳ ನಡೆಯುತ್ತಿದೆ ಎಂದು ಬಾಮೈದ ಹೇಳಿದ್ದಾನೆ. ಪಿತೂರಿಯ ಭಾಗವಾಗಿ, ಆಕೆ ತನ್ನನ್ನು ಮನೆಗೆ ಕರೆದಿದ್ದಳು. ಕೋಣೆಗೆ ಹೋಗಿದ ಕೂಡಲೇ ಅತ್ತಿಗೆ ಹರಿತವಾದ ಆಯುಧದಿಂದ ತನ್ನ ಖಾಸಗಿ ಅಂಗಗಳನ್ನು ಕತ್ತರಿಸಿದ್ದು ರಕ್ತಸ್ರಾವವಾಯಿತು ಎಂದು ಯುವಕ ದೂರಿದ್ದಾನೆ.

ಸದ್ಯ ಯುವಕನ ಸ್ಥಿತಿ ಗಂಭೀರವಾಗಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT