ಸಾಂದರ್ಭಿಕ ಚಿತ್ರ 
ದೇಶ

ಈ ವರ್ಷ ನವೆಂಬರ್ 14 ರವರೆಗೆ ವಿಮಾನಯಾನ ಸಂಸ್ಥೆಗಳಿಗೆ 999 ಹುಸಿ ಬಾಂಬ್ ಬೆದರಿಕೆ!

ಈ ಕುರಿತು ಸೋಮವಾರ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು, ಬೆದರಿಕೆಗಳು ವಿಮಾನಗಳ ಕಾರ್ಯಾಚರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದರು.

ನವದೆಹಲಿ: ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ವರ್ಷ ನವೆಂಬರ್ 14 ರವರೆಗೆ ಒಟ್ಟು 999 ಹುಸಿ ಬಾಂಬ್ ಬೆದರಿಕೆಗಳ ಬಂದಿವೆ. ಈ ಪೈಕಿ ಅಕ್ಟೋಬರ್‌ನಲ್ಲಿಯೇ ವಿಮಾನಯಾನ ಸಂಸ್ಥೆಗಳಿಗೆ 666 ಹುಸಿ ಬಾಂಬ್ ಬೆದರಿಕೆಗಳು ಬಂದಿವೆ.

ಈ ಕುರಿತು ಸೋಮವಾರ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು, ಹುಸಿ ಬಾಂಬ್ ಬೆದರಿಕೆಗಳು ವಿಮಾನಯಾನ ಸಂಸ್ಥೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಬೆದರಿಕೆಗಳು ವಿಮಾನಗಳ ಕಾರ್ಯಾಚರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಹೇಳಿದರು.

ಜನವರಿ 2024 ರಿಂದ ನವೆಂಬರ್ 14, 2024 ರ ಅವಧಿಯಲ್ಲಿ ಒಟ್ಟು 999 ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ವರದಿಯಾಗಿವೆ ಎಂದು ಸಚಿವರು ಪ್ರತ್ಯೇಕ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸಚಿವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಒಟ್ಟು 666 ಘಟನೆಗಳು ಅಕ್ಟೋಬರ್‌ನಲ್ಲಿ ಮತ್ತು ನವೆಂಬರ್ ನಲ್ಲಿ 14 ರವರೆಗೆ 52 ಪ್ರಕರಣಗಳು ವರದಿಯಾಗಿವೆ.

ಜನವರಿಯಲ್ಲಿ 11, ಫೆಬ್ರವರಿಯಲ್ಲಿ 17, ಮಾರ್ಚ್‌ನಲ್ಲಿ 5, ಏಪ್ರಿಲ್‌ನಲ್ಲಿ 60, ಮೇನಲ್ಲಿ 26, ಜೂನ್‌ನಲ್ಲಿ 116, ಜುಲೈ 10, ಆಗಸ್ಟ್‌ನಲ್ಲಿ, 21 ಮತ್ತು ಸೆಪ್ಟೆಂಬರ್‌ನಲ್ಲಿ 15 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ