ವಿದೇಶಾಂಗ ಸಚಿವ ಎಸ್ ಜೈಶಂಕರ್ 
ದೇಶ

BRICS Currency ಪ್ರಸ್ತಾಪ ಮಾಡಿಲ್ಲ: Donald Trump ಎಚ್ಚರಿಕೆ ಬೆನ್ನಲ್ಲೇ ಜೈಶಂಕರ್ ಅಚ್ಚರಿ ಹೇಳಿಕೆ

ಅಮೆರಿಕ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ, ಡಾಲರ್ ಅನ್ನು ದುರ್ಬಲಗೊಳಿಸಲು ನಮಗೆ ಯಾವುದೇ ಆಸಕ್ತಿಯಿಲ್ಲ ಎಂದು ಅವರು ಹೇಳಿದರು.

ನವದೆಹಲಿ: ಅಮೆರಿಕ ಡಾಲರ ಪೈಪೋಟಿ ನೀಡಲು ಹೊಸ ಕರೆನ್ಸಿಯನ್ನು ಪ್ರಾರಂಭಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಕತಾರ್‌ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರ ಸಚಿವ ಮೊಹಮ್ಮದ್ ಬಿನ್ ಅಬ್ದುಲ್‌ರಹಮನ್‌ ಅವರ ಆಹ್ವಾನದ ಮೇರೆಗೆ ದೋಹಾ ಫೋರಾಂಗೆ ಭಾಗವಹಿಸಲು ದೋಹಾಗೆ ಭೇಟಿ ನೀಡಿರುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, 'ನಾವು (ಭಾರತ ಮತ್ತು ಅಮೆರಿಕ) ಉತ್ತಮ ಸಂಬಂಧವನ್ನು ಹೊಂದಿದ್ದೇವೆ.

ಮೊದಲ ಟ್ರಂಪ್ ಸರ್ಕಾರದೊಂದಿಗೆ ಬಹಳ ಗಟ್ಟಿಯಾದ ಸಂಬಂಧವನ್ನು ಹೊಂದಿದ್ದೇವೆ. ಹೌದು ಕೆಲವು ವಿಷಯಗಳಲ್ಲಿ ಸಮಸ್ಯೆಗಳು ಹೆಚ್ಚಾಗಿ ವ್ಯಾಪಾರ ಸಂಬಂಧಿತ ಸಮಸ್ಯೆಗಳಿದ್ದವು. ತುಂಬಾ ಅಂತಾರಾಷ್ಟ್ರೀಯವಾಗಿರುವ ಹಲವಾರು ಸಮಸ್ಯೆಗಳಿದ್ದವು. ಟ್ರಂಪ್ ಆಡಳಿತದ ಅಡಿಯಲ್ಲಿ QUAD ಅನ್ನು ಮರುಪ್ರಾರಂಭಿಸಲಾಗಿದೆ ಎಂದು ಜೈಶಂಕರ್ ಹೇಳಿದರು.

ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವೈಯಕ್ತಿಕ ಸ್ನೇಹವನ್ನು ಒತ್ತಿ ಹೇಳಿದ ಜೈಶಂಕರ್, 'ಇದು ಉಭಯ ದೇಶಗಳ ನಡುವಿನ ಬಲವಾದ ದ್ವಿಪಕ್ಷೀಯ ಬಾಂಧವ್ಯಕ್ಕೆ ಕೊಡುಗೆ ನೀಡಿದೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ವೈಯಕ್ತಿಕ ಸಂಬಂಧವಿದೆ... ಬ್ರಿಕ್ಸ್ ಟೀಕೆಗಳಿಗೆ ಸಂಬಂಧಿಸಿದಂತೆ, ನಾವು ಭಾರತವು ಡಾಲರೀಕರಣಕ್ಕೆ ಎಂದಿಗೂ ಮುಂದಾಗಿಲ್ಲ ಎಂದು ಹೇಳಿದ್ದೇವೆ, ಇದೀಗ ಬ್ರಿಕ್ಸ್ ಕರೆನ್ಸಿಯನ್ನು ಹೊಂದುವ ಯಾವುದೇ ಪ್ರಸ್ತಾಪವಿಲ್ಲ. ಅಮೆರಿಕ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ, ಡಾಲರ್ ಅನ್ನು ದುರ್ಬಲಗೊಳಿಸಲು ನಮಗೆ ಯಾವುದೇ ಆಸಕ್ತಿಯಿಲ್ಲ ಎಂದು ಅವರು ಹೇಳಿದರು.

ರಷ್ಯಾ– ಉಕ್ರೇನ್‌ ಬಿಕ್ಕಟ್ಟು ನಿವಾರಣೆಗೆ ರಾಜತಾಂತ್ರಿಕತೆ ಸಹಕಾರಿ

ಇದೇ ವೇಳೆ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಕುರಿತು ಮಾತನಾಡದ ಜೈಶಂಕರ್, 'ರಷ್ಯಾ– ಉಕ್ರೇನ್‌ ನಡುವಿನ ಯುದ್ಧ ನಿಲ್ಲುವ ಸೂಚನೆಯೊಂದಿಗೆ, ಪರಿಸ್ಥಿತಿಯು ಸಹಜ ಸ್ಥಿತಿಗೆ ತಲುಪುತ್ತಿದ್ದು, ಅದಕ್ಕಾಗಿ ಹೆಚ್ಚು ನಾವೀನ್ಯತೆ ಮತ್ತು ಸಕ್ರಿಯ ರಾಜತಾಂತ್ರಿಕ ಸಹಭಾಗಿತ್ವಬೇಕು. ಗಲ್ಫ್ ಮತ್ತು ಮೆಡಿಟರೇನಿಯನ್ ಪ್ರದೇಶದಲ್ಲಿನ ಸಂಘರ್ಷವು ಭಾರತ ಸೇರಿದಂತೆ ಎಲ್ಲ ದೇಶಗಳಲ್ಲಿ ತೈಲ, ರಸಗೊಬ್ಬರಗಳು ಮತ್ತು ಸಾಗಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಸಂಘರ್ಷದ ವಿಸ್ತರಣೆ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಪರಸ್ಪರ ಗುಂಡಿನ ದಾಳಿಯ ಉದಾಹರಣೆ ನೀಡಿದರು. ಕೆಂಪು ಸಮುದ್ರದಲ್ಲಿನ ಪರಿಸ್ಥಿತಿಯು ಏಷ್ಯಾದ ಹಡಗು ಸಾಗಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

'ಬ್ರಿಕ್ಸ್' ದೇಶಗಳಿಗೆ ಟ್ರಂಪ್ ಎಚ್ಚರಿಕೆ

ಬ್ರಿಕ್ಸ್ ದೇಶಗಳು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಮೇಲಿನ ಅವಲಂಬನೆಯನ್ನು ತಗ್ಗಿಸುವ ಪ್ರಯತ್ನಗಳನ್ನು ಕೈಬಿಡದಿದ್ದರೆ ಅವುಗಳಿಗೆ ಶೇ.100ರಷ್ಟು ಸುಂಕವನ್ನು ವಿಧಿಸುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು. ನಾವು ನೋಡುತ್ತಿರುವಂತೆ ಬ್ರಿಕ್ಸ್ ದೇಶಗಳು ಡಾಲರ್‌ನಿಂದ ದೂರ ಸರಿಯುವ ಕಲ್ಪನೆಗೆ ಇನ್ನು ಅವಕಾಶವಿಲ್ಲ.

ನೂತನ ಬ್ರಿಕ್ಸ್ ಕರೆನ್ಸಿಯನ್ನು ಸೃಷ್ಟಿಸುವುದಿಲ್ಲ ಅಥವಾ ಪ್ರಬಲ ಡಾಲರ್ ಬದಲಿಗೆ ಇತರ ಯಾವುದೇ ಕರೆನ್ಸಿಯನ್ನು ಬೆಂಬಲಿಸುವುದಿಲ್ಲ ಎಂಬ ಬದ್ಧತೆ ಈ ದೇಶಗಳಿಂದ ನಮಗೆ ಅಗತ್ಯವಿದೆ. ಇಲ್ಲದಿದ್ದರೆ ಅವು ಶೇ.100ರಷ್ಟು ಸುಂಕಗಳನ್ನು ಎದುರಿಸಬೇಕಾಗುತ್ತದೆ. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕದ ಡಾಲರ್‌ ಅನ್ನು ಬದಲಿಸಲು ಬ್ರಿಕ್ಸ್ ದೇಶಗಳಿಗೆ ಅವಕಾಶವಿಲ್ಲ ಮತ್ತು ಯಾವುದೇ ದೇಶವು ಅದಕ್ಕಾಗಿ ಪ್ರಯತ್ನಿಸಿದರೆ ಅದು ಅಮೆರಿಕದ ಅದ್ಭುತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ವಿದಾಯ ಹೇಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT