ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ, ಅಜಿತ್ ಪವಾರ್ 
ದೇಶ

ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಿದ ಫಡ್ನವಿಸ್

ಇಂದು ವಿಧಾನಸಭೆಯಲ್ಲಿ ಶಿವಸೇನಾ ಶಾಸಕ ಉದಯ್ ಸಾಮಂತ್ ಮತ್ತು ಇತರರು ಮಂಡಿಸಿದ ವಿಶ್ವಾಸಮತ ಯಾಚನೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.

ಮುಂಬೈ: ದೇವೇಂದ್ರ ಫಡ್ನವಿಸ್ ನೇತೃತ್ವದ ಮಹಾಯುತಿ ಸರ್ಕಾರ ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಿದೆ.

ಇಂದು ವಿಧಾನಸಭೆಯಲ್ಲಿ ಶಿವಸೇನಾ ಶಾಸಕ ಉದಯ್ ಸಾಮಂತ್ ಮತ್ತು ಇತರರು ಮಂಡಿಸಿದ ವಿಶ್ವಾಸಮತ ಯಾಚನೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.

ವಿಶ್ವಾಸಮತ ಯಾಚನೆಗೆ ಸದನ ಅನುಮೋದನೆ ನೀಡಿದೆ ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ ಘೋಷಿಸಿದರು.

288 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ-ಶಿವಸೇನೆ-ಎನ್‌ಸಿಪಿ 'ಮಹಾಯುತಿ' ಒಕ್ಕೂಟವು 230 ಸ್ಥಾನಗಳ ಬಹುಮತ ಹೊಂದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ 144 ಶಾಸಕರ ಬೆಂಬಲದ ಅಗತ್ಯ ಇದೆ.

"ವಿಶ್ವಾಸಮತ ಬಹುಮತದೊಂದಿಗೆ ಅಂಗೀಕಾರವಾಗಿದೆ. ವಿಧಾನಸಭೆ ಈಗ ಮುಂದೂಡಲ್ಪಡುತ್ತದೆ ಮತ್ತು ಮಹಾರಾಷ್ಟ್ರ ರಾಜ್ಯಪಾಲರ ಭಾಷಣದ ನಂತರ ಪುನರಾರಂಭವಾಗಲಿದೆ" ಎಂದು ನಾರ್ವೇಕರ್ ವಿಧಾನಸಭೆಯಲ್ಲಿ ಹೇಳಿದರು.

ಫಡ್ನವಿಸ್ ಅವರು ಡಿಸೆಂಬರ್ 5 ರಂದು ಮೂರನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾವೇರಿಗೆ ಸಂಧಾನ ಸೂತ್ರ: ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಬೆಂಗಳೂರಿಗೆ ಬರುವುದು ಡೌಟು? ಇದೇ ಕಾರಣ...!

ಪರೀಕ್ಷಾ ವ್ಯವಸ್ಥೆ ಸುಧಾರಣೆ: ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ; ಪ್ರಧಾನಿ ಮೋದಿ ಘೋಷಣೆ! Video

3rd T20: ಜಿಂಬಾಬ್ವೆ ವಿರುದ್ಧ 35 ರನ್ ಗೆಲುವು; 3-0 ಅಂತರದಿಂದ ಸರಣಿ 'ಕ್ಲೀನ್ ಸ್ವೀಪ್' ಮಾಡಿದ ಭಾರತ!

ತುಮಕೂರು: ನಡುರಸ್ತೆಯಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ!

ನಾಲಾಯಕ್ ಗೃಹ ಸಚಿವ ಟೀಕೆ: ವಿಜಯೇಂದ್ರಗೆ ಭಯ-ಹತಾಶೆ ಶುರುವಾಗಿರುವುದು ಅವರ ಘನತೆಗೆ ತಕ್ಕದ್ದೇ? ಪ್ರಿಯಾಂಕ್ ಖರ್ಗೆ ತಿರುಗೇಟು!