ಬಿಆರ್ ಎಸ್ ನಾಯಕ ಕೆಟಿ ರಾಮರಾವ್ online desk
ದೇಶ

Formula-E race ಅಕ್ರಮ: KT Rama Rao ವಿರುದ್ಧ ED ಕೇಸ್, ತನಿಖಾ ಸಂಸ್ಥೆ ದಾಳಿಯ ಆತಂಕದಲ್ಲಿ BRS ನಾಯಕ

ರೇಸ್ ನ್ನು ಆಯೋಜಿಸಲು ವಿದೇಶಿ ಕಂಪನಿಗೆ (ಫಾರ್ಮುಲಾ-ಇ ಆಪರೇಷನ್ಸ್ ಲಿಮಿಟೆಡ್, ಯುಕೆ ಮೂಲದ ಕಂಪನಿ) ಹಣವನ್ನು ವರ್ಗಾಯಿಸಿರುವುದರ ಬಗ್ಗೆ ಸಂಸ್ಥೆ ಗಮನಹರಿಸಲಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಜಾರಿ ನಿರ್ದೇಶನಾಲಯ ಬಿಆರ್ ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್, ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್, ಹೆಚ್ಎಂಡಿಎ ಮುಖ್ಯ ಇಂಜಿನಿಯರ್ ಬಿಎಲ್ಎಮ್ ರೆಡ್ಡಿ ವಿರುದ್ಧ ಇಸಿಐಆರ್ ದಾಖಲಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಇಡಿ ಪ್ರಕರಣವನ್ನು ದಾಖಲಿಸಲಾಗಿದೆ.

ED ಮೂಲಗಳು ಪ್ರಕರಣದ ದಾಖಲಾತಿಯನ್ನು ಖಚಿತಪಡಿಸಿದ್ದು, ರಾಮರಾವ್ ಅವರನ್ನು ಆರೋಪಿ ನಂ. 1 (ಎ-1), ಅರವಿಂದ್ ಕುಮಾರ್ ಎ-2 ಮತ್ತು ಬಿಎಲ್‌ಎನ್ ರೆಡ್ಡಿ ಎ-3 ಎಂದು ಹೆಸರಿಸಲಾಗಿದೆ.

ರೇಸ್ ನ್ನು ಆಯೋಜಿಸಲು ವಿದೇಶಿ ಕಂಪನಿಗೆ (ಫಾರ್ಮುಲಾ-ಇ ಆಪರೇಷನ್ಸ್ ಲಿಮಿಟೆಡ್, ಯುಕೆ ಮೂಲದ ಕಂಪನಿ) ಹಣವನ್ನು ವರ್ಗಾಯಿಸಿರುವುದರ ಬಗ್ಗೆ ಸಂಸ್ಥೆ ಗಮನಹರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಅಂತಿಮ ಫಲಾನುಭವಿಯನ್ನು ಗುರುತಿಸುವುದು ಮತ್ತು ಫಲಾನುಭವಿ ಖಾತೆಗಳಿಂದ ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ವಹಿವಾಟು ನಡೆದಿದೆಯೇ ಎಂಬುದನ್ನು ನಿರ್ಧರಿಸುವತ್ತ ಗಮನ ಹರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ACB ವಿಚಾರಣೆಗೆ ಸಮಾನಾಂತರವಾಗಿ ಇಡಿ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ. ರಾಮರಾವ್ ಮತ್ತು ಇತರ ಇಬ್ಬರು ಆರೋಪಿಗಳ ನಿವಾಸಗಳ ಮೇಲೆ ED ಶೋಧ ಅಥವಾ ದಾಳಿಗಳನ್ನು ಅಗತ್ಯವಿದ್ದಲ್ಲಿ ನಡೆಸುವ ಸಾಧ್ಯತೆ ಇದೆ. ಇದಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿ ತನ್ನ ಎದುರು ಹಾಜರಾಗುವಂತೆ ಮೂವರು ಆರೋಪಿಗಳಿಗೆ ಸಂಸ್ಥೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದ್ದು, ರಾಮರಾವ್ ಮತ್ತು ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.

ರಾಮರಾವ್, ಅರವಿಂದ್ ಕುಮಾರ್ ಮತ್ತು ಬಿಎಲ್‌ಎನ್ ರೆಡ್ಡಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ಪ್ರತಿಯನ್ನು ನೀಡುವಂತೆ ಇಡಿ ಶುಕ್ರವಾರ ಎಸಿಬಿ ಮಹಾನಿರ್ದೇಶಕರಿಗೆ ಪತ್ರ ಬರೆದಿತ್ತು. ಇಡಿ ಪತ್ರದಲ್ಲಿ ಎಫ್‌ಐಆರ್, ದೂರಿನ ಪ್ರತಿಗಳು, ವಿದೇಶಿ ಕಂಪನಿಗಳಿಗೆ ಎಚ್‌ಎಂಡಿಎ ವರ್ಗಾಯಿಸಿದ ಹಣದ ವಿವರಗಳು ಮತ್ತು ಒಪ್ಪಂದಗಳ ಪ್ರತಿಗಳನ್ನು ಕೋರಲಾಗಿದೆ.

"ಇದರಲ್ಲಿ ಭ್ರಷ್ಟಾಚಾರ ಎಲ್ಲಿದೆ? ನಾವು 55 ಕೋಟಿ ರೂಪಾಯಿ ಪಾವತಿಸಿದ್ದೇವೆ. ಅವರು (ಫಾರ್ಮುಲಾ-ಇ) ಪಾವತಿಯನ್ನು ಒಪ್ಪಿಕೊಂಡಿದ್ದಾರೆ" ಎಂದು ಕೆಟಿಆರ್ ಎಂದೂ ಕರೆಯಲ್ಪಡುವ ರಾಮರಾವ್ ತಪ್ಪನ್ನು ನಿರಾಕರಿಸಿದ್ದರು.

ಇದು "ನೇರ" ಖಾತೆ ಎಂದು ಅವರು ಹೇಳಿದರು. ಎಚ್‌ಎಂಡಿಎ (ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ) ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದು, ಆ ಖಾತೆಯಿಂದ ಹಣವನ್ನು ವರ್ಗಾಯಿಸಲಾಗಿದೆ ಎಂದು ಎಸಿಬಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕೆಟಿಆರ್ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT