ಸಂಗ್ರಹ ಚಿತ್ರ TNIE
ದೇಶ

ಬಿಹಾರದಲ್ಲಿ ಎಡವಟ್ಟು: ಗರ್ಭಿಣಿ ಎಂದು ಬಿಂಬಿಸಿ ಶಿಕ್ಷಕನಿಗೆ 6 ತಿಂಗಳ ಹೆರಿಗೆ ರಜೆ ಘೋಷಣೆ!

ಹಾಜಿಪುರ ಮಹುವಾ ಬ್ಲಾಕ್ ಪ್ರದೇಶದ ಹಸನ್‌ಪುರ ಒಸಟಿ ಪ್ರೌಢಶಾಲೆಯಲ್ಲಿ ನಡೆದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಪಿಎಸ್‌ಸಿಯಿಂದ ಆಯ್ಕೆಯಾದ ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರನ್ನು ಶಿಕ್ಷಣ ಇಲಾಖೆ ಗರ್ಭಿಣಿ ಎಂದು ಘೋಷಿಸಿದೆ.

ಪಾಟ್ನಾ: ಬಿಹಾರ ಶಿಕ್ಷಣ ಇಲಾಖೆಯಲ್ಲಿನ ಎಡವಟ್ಟುಗಳು ಆಗಾಗ್ಗೆ ಹೊರಬರುತ್ತಿರುತ್ತದೆ. ಕೆಲವೊಮ್ಮೆ ಹಾಜರಾತಿಗೆ ಸಂಬಂಧಿಸಿದಂತೆ ಮತ್ತು ಕೆಲವೊಮ್ಮೆ ರಜೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಅಥವಾ ಎಡವಟ್ಟುಗಳು ಬರುತ್ತಲೇ ಇರುತ್ತವೆ. ಕೆಲವು ಪ್ರಕರಣಗಳಲ್ಲಿ ಇಲಾಖೆಗೆ ಅಪಖ್ಯಾತಿಯೂ ಬಂದಿದೆ. ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಎಲ್ಲರೂ ಶಾಕ್ ಆಗಿದ್ದಾರೆ. ವಾಸ್ತವವಾಗಿ, ಹಾಜಿಪುರದಲ್ಲಿ ಶಿಕ್ಷಣ ಇಲಾಖೆಯು ಪುರುಷ BPSC ಶಿಕ್ಷಕನನ್ನು ಗರ್ಭಿಣಿ ಎಂದು ಘೋಷಿಸಿ ಹೆರಿಗೆ ರಜೆಯನ್ನು ಅನುಮೋದಿಸಿದೆ.

ಈ ಘಟನೆ ಹಾಜಿಪುರ ಮಹುವಾ ಬ್ಲಾಕ್ ಪ್ರದೇಶದ ಹಸನ್‌ಪುರ ಒಸಟಿ ಪ್ರೌಢಶಾಲೆಯಲ್ಲಿ ನಡೆದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಪಿಎಸ್‌ಸಿಯಿಂದ ಆಯ್ಕೆಯಾದ ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರನ್ನು ಶಿಕ್ಷಣ ಇಲಾಖೆ ಗರ್ಭಿಣಿ ಎಂದು ಘೋಷಿಸಿದೆ. ಶಿಕ್ಷಣ ಇಲಾಖೆ ಮತ್ತು ಅಧಿಕೃತ ವೆಬ್‌ಸೈಟ್ ಪ್ರಕಾರ, ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಗರ್ಭಿಣಿ ಮತ್ತು ರಜೆಯಲ್ಲಿದ್ದಾರೆ. ಶಿಕ್ಷಕಿರು ಗರ್ಭಿಣಿಯಾಗಿದ್ದಾಗ ಅಥವಾ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಈ ರಜೆಯನ್ನು ನೀಡಲಾಗುತ್ತದೆ. ಆದರೆ ಹಾಜಿಪುರದಲ್ಲಿ ಪುರುಷ ಶಿಕ್ಷಕನಿಗೆ ಹೆರಿಗೆ ರಜೆ ನೀಡಲಾಗಿದೆ. ಇಲಾಖೆಯ ಪೋರ್ಟಲ್ ಇ-ಶಿಕ್ಷಾ ಕೋಶ್‌ನಲ್ಲಿ ಜಿತೇಂದ್ರ ಕುಮಾರ್ ಸಿಂಗ್ ಅವರಿಗೆ ಹೆರಿಗೆ ರಜೆ ನೀಡಲಾಗಿದೆ.

ಈ ಕುರಿತಂತೆ ಬ್ಲಾಕ್ ಶಿಕ್ಷಣಾಧಿಕಾರಿ ಅರ್ಚನಾ ಕುಮಾರಿ ಅವರು ಇಲಾಖೆಯ ತಪ್ಪನ್ನು ಒಪ್ಪಿಕೊಂಡಿದ್ದು ತಾಂತ್ರಿಕ ದೋಷದಿಂದ ಈ ರೀತಿ ನಡೆದಿದೆ. ಪುರುಷ ಶಿಕ್ಷಕರಿಗೆ ಈ ರೀತಿಯ ರಜೆ ನೀಡುವುದಿಲ್ಲ. ಇದನ್ನು ಶೀಘ್ರದಲ್ಲೇ ಸರಿಪಡಿಸಲಾಗುತ್ತದೆ. ಮಹಿಳೆಯರಿಗೆ ನೀಡುತ್ತಿದ್ದ ರಜೆಯನ್ನು ಪುರುಷ ಶಿಕ್ಷಕನಿಗೆ ನೀಡಿರುವುದು ಇಲಾಖೆಗೆ ಕಳಂಕ ತಂದಿದೆ ಎಂದರು. ತಾಂತ್ರಿಕ ಸಮಸ್ಯೆಯಿಂದ ಗುರುತು ಹಾಕಲಾಗಿದೆ. ಅದನ್ನು ಸರಿಪಡಿಸಬಹುದು ಎಂದರು. ಹೆರಿಗೆ ರಜೆಯನ್ನು ಸುಮಾರು 6 ತಿಂಗಳು ಅಂದರೆ 180 ದಿನ ನೀಡಲಾಗುತ್ತದೆ. ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆಯನ್ನು ಎರಡು ಮಕ್ಕಳವರೆಗೆ ಮಾತ್ರ ಅನುಮತಿಸಲಾಗಿದೆ. ರಜೆ ಪ್ರಾರಂಭವಾದ ದಿನಾಂಕದಿಂದ 180 ಸತತ ದಿನಗಳವರೆಗೆ ಅಂದರೆ ಆರು ತಿಂಗಳವರೆಗೆ ರಜೆ ಲಭ್ಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT