ನವದೆಹಲಿ: ಮಾಜಿ ಪ್ರಧಾನಿ Manmohan singh ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ತನ್ನ ಗಣ್ಯ ನಾಯಕನ ಅಗಲಿಕೆಗೆ ಭಾರತ ಶೋಕತಪ್ತವಾಗಿದೆ ಎಂದು ಬರೆದಿದ್ದಾರೆ.
ಮನಮೋಹನ್ ಸಿಂಗ್ ಅವರ ಕೊಡುಗೆಗಳನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಾಧಾರಣ ಹಿನ್ನೆಲೆಯಿಂದ ಬಂದಂತಹ ಮನಮೋಹನ್ ಸಿಂಗ್ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞನಾಗಿ ಬೆಳೆದರು. ವಿತ್ತ ಸಚಿವರಾಗಿ ಅವರು ಆರ್ಥಿಕ ನೀತಿಗಳಲ್ಲಿ ಛಾಪು ಮೂಡಿಸಿದ್ದಾರೆ.
ಸಂಸತ್ತಿನಲ್ಲಿ ಅವರು ಒಳನೋಟವುಳ್ಳ ನಾಯಕನಾಗಿದ್ದರು. ನಮ್ಮ ಪ್ರಧಾನಿಯಾಗಿ ಅವರು ಜನಜೀವನವನ್ನು ಸುಧಾರಿಸುವುದಕ್ಕಾಗಿ ಶ್ರಮಿಸಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.