ನಾರಾಯಣಮೂರ್ತಿ- ಅದಾನಿ online desk
ದೇಶ

"ಹೆಂಡತಿ ಓಡಿಹೋಗ್ತಾಳೆ": ವಾರಕ್ಕೆ 70 ಗಂಟೆ ಕೆಲಸದ ಬಗ್ಗೆ ಶ್ರೀಮಂತ ಉದ್ಯಮಿ Gautam Adani

ಗೌತಮ್ ಅದಾನಿಯ ಪ್ರಕಾರ, ಯಾವುದೇ ವ್ಯಕ್ತಿಗೆ ಆತನಿಗೆ ಇಷ್ಟವಾದುದ್ದನ್ನು ಮಾಡಿದಾಗ ಉದ್ಯೋಗ-ಜೀವನದ ಸಮತೋಲನವನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ.

ಉದ್ಯೋಗ-ಜೀವನದ ಸಮತೋಲನ, ವಾರಕ್ಕೆ 70 ಗಂಟೆ ಕೆಲಸ ಮಾಡುವ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿದ್ದು, ಈ ಚರ್ಚೆಗೆ ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿರುವ ಗೌತಮ್ ಅದಾನಿಯೂ ಜೊತೆಯಾಗಿದ್ದಾರೆ.

ಗೌತಮ್ ಅದಾನಿಯ ಪ್ರಕಾರ, ಯಾವುದೇ ವ್ಯಕ್ತಿಗೆ ಆತನಿಗೆ ಇಷ್ಟವಾದುದ್ದನ್ನು ಮಾಡಿದಾಗ ಉದ್ಯೋಗ-ಜೀವನದ ಸಮತೋಲನವನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ ಶಾಶ್ವತವಲ್ಲ ಎಂಬ ವಾಸ್ತವವನ್ನು ಅರ್ಥಮಾಡಿಕೊಂಡಾಗಲಷ್ಟೇ ಜೀವನ ಸರಳವಾಗಿರಲು ಸಾಧ್ಯ ಎಂದು ಅದಾನಿ ಹೇಳಿದ್ದಾರೆ.

ಸುದ್ದಿ ಸಂಸ್ಥೆ ಐಎಎನ್ ಜೊತೆ ಮಾತನಾಡಿರುವ ಅದಾನಿ, ಯಾವುದೇ ವ್ಯಕ್ತಿಯೋರ್ವನಿಗೆ ಮತ್ತೋರ್ವ ವ್ಯಕ್ತಿಗೆ ಅನ್ವಯವಾಗುವಂತಹ ಕೆಲಸ-ಜೀವನ ಸಮತೋಲನ ಹೇರಬಾರದು, ಯಾರಾದರೂ ಕುಟುಂಬದೊಂದಿಗೆ ನಾಲ್ಕು ಗಂಟೆಗಳ ಕಾಲ ಕಳೆಯುತ್ತಾರೆ ಮತ್ತು ಅದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ, ಅಥವಾ ಬೇರೆಯವರು ಎಂಟು ಗಂಟೆಗಳ ಕಾಲ ಕಳೆಯುತ್ತಾರೆ ಮತ್ತು ಅದನ್ನು ಆನಂದಿಸುತ್ತಾರೆ, ಅದು ಅವರ ಸಮತೋಲನವಾಗಿದೆ. ಅದೇನೇ ಇದ್ದರೂ ನೀವು ಎಂಟು ಗಂಟೆ ಕಳೆದರೆ, ಹೆಂಡತಿ ಓಡಿಹೋಗುತ್ತಾಳೆ." ಎಂದು ಹೇಳಿದ್ದಾರೆ.

ಕೆಲಸ-ಜೀವನದ ಸಮತೋಲನದ ಸಾರವು ಒಬ್ಬರ ಸ್ವಂತ ಸಂತೋಷ ಮತ್ತು ಪ್ರೀತಿಪಾತ್ರರ ಸಂತೋಷದಲ್ಲಿದೆ ಎಂದು ಅದಾನಿ ಹೇಳಿದ್ದಾರೆ.

"ನೀವು ನಿಮಗೆ ಇಷ್ಟವಾಗುವಂತಹ ಕೆಲಸಗಳನ್ನು ಮಾಡುವಾಗ ನಿಮ್ಮ ಕೆಲಸ-ಜೀವನವು ಸಮತೋಲಿತವಾಗಿರುತ್ತದೆ. ನಮಗೆ ಕುಟುಂಬ ಅಥವಾ ಕೆಲಸ, ಇದರಿಂದ ಹೊರತಾಗಿ ಪ್ರಪಂಚವಿಲ್ಲ... ನಮ್ಮ ಮಕ್ಕಳು ಅದನ್ನು ಮಾತ್ರ ಗಮನಿಸುತ್ತಾರೆ ಇದು. ಯಾರೂ ಇಲ್ಲಿಗೆ ಶಾಶ್ವತವಾಗಿ ಬಂದಿಲ್ಲ, ಇದನ್ನು ಅರ್ಥಮಾಡಿಕೊಂಡಾಗ ಜೀವನ ಸರಳವಾಗುತ್ತದೆ" ಎಂದು ಅದಾನಿ ಹೇಳಿದರು.

ಮುಂದುವರಿದ ಆರ್ಥಿಕತೆಗಳೊಂದಿಗೆ ಭಾರತವನ್ನು ಸ್ಪರ್ಧಿಸಲು ಅನುವು ಮಾಡಿಕೊಡಲು ವಾರಕ್ಕೆ 70 ಗಂಟೆಗಳ ಕೆಲಸ ಮಾಡಲು ಯುವಕರಿಗೆ ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಕರೆ ನೀಡಿದ್ದರ ಬಗ್ಗೆ ಚರ್ಚೆಯ ಮುಂದುವರಿದ ಭಾಗವಾಗಿ ಅದಾನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಳೆದ ವಾರ ನಾರಾಯಣ ಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಉದ್ಯಮಿ ನಮಿತಾ ಥಾಪರ್, ಮಾಲಿಕರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುತ್ತಾರೆ, ಅಷ್ಟೇ ಪ್ರಮಾಣದಲ್ಲಿ ಲಾಭವನ್ನೂ ಗಳಿಸುತ್ತಾರೆ, ಅದಕ್ಕೆ ತಕ್ಕಂತೆ ಅಗತ್ಯವಿದ್ದರೆ 24 ಗಂಟೆಗಳೂ ಕೆಲಸ ಮಾಡಲು ಸಿದ್ಧರಿರುತ್ತಾರೆ. ಹಾಗಂತ ಸಾಮಾನ್ಯ ಉದ್ಯೋಗಿಗೂ ಅದನ್ನೇ ಅನ್ವಯ ಮಾಡಲು ಸಾಧ್ಯವಿಲ್ಲ, ಒಂದು ವೇಳೆ ಸಾಮಾನ್ಯ ಉದ್ಯೋಗಿಗೂ ಅದನ್ನೇ ಅನ್ವಯಿಸಿದರೆ ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT