ಬೈಕ್ ಎಳೆದೊಯ್ದ ಬೊಲೆರೋ ಕಾರು 
ದೇಶ

Video: ಬೈಕ್ ಗೆ ಢಿಕ್ಕಿ; ಬೆಂಕಿ ಲೆಕ್ಕಿಸದೇ ಸವಾರನನ್ನು 2 ಕಿ.ಮೀ ಎಳೆದೊಯ್ದ SUV!, ಬೈಕರ್ ಸಾವು

ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಈ ಘಟನೆ ನಡೆದಿದ್ದು, ಕಾರಿನ ಕೆಳಗೆ ಬಿದ್ದ ಬೈಕ್​ನಿಂದ ಬೆಂಕಿಯ ಕಿಡಿ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ, ಕಾರು ಚಾಲಕ ರಭಸದಿಂದ ಚಾಲನೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಸಂಭಾಲ್: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೊಲೆರೊ ವಾಹನ ಢಿಕ್ಕಿಯಾದ ಬೈಕ್​ ಅನ್ನು ಬರೊಬ್ಬರಿ ಎರಡು ಕಿಲೋ ಮೀಟರ್​ ವರೆಗೆ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಈ ಘಟನೆ ನಡೆದಿದ್ದು, ಕಾರಿನ ಕೆಳಗೆ ಬಿದ್ದ ಬೈಕ್​ನಿಂದ ಬೆಂಕಿಯ ಕಿಡಿ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ, ಕಾರು ಚಾಲಕ ರಭಸದಿಂದ ಚಾಲನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸಂಭಲ್​ನ ಕೊಟ್ವಾಲಿ ಪ್ರದೇಶದಲ್ಲಿನ ಮೊರದಬಾದ್​ನ ವಜಿದ್ಪುರಮ್​ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಸಂಜೆ ಈ ಅಪಘಾತ ನಡೆದಿದ್ದು, ಬೊಲೆರೋ ಕಾರಿನ ಮೇಲೆ ಗ್ರಾಮ್​ ಪ್ರಧಾನ್​ ಎಂಬ ಹೆಸರಿನ ಬಿಜೆಪಿ ಸ್ಟಿಕರ್​ ಕಂಡುಬಂದಿದ್ದು, ಈ ಭಯಾನಕ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಬೈಕರ್ ಸಾವು

ಇನ್ನು ಈ ಘಟನೆಯಲ್ಲಿ ಬೈಕರ್ ಸಾವನ್ನಪ್ಪಿದ್ದು, ಸಾವಿಗೀಡಾದ ವ್ಯಕ್ತಿಯನ್ನು ಮೊರ್ದಾಬಾದ್​ ಜಿಲ್ಲೆಯ ನಿವಾಸಿ ಸುಖ್ವೀರ್​ (50) ಎಂದು ಗುರುತಿಸಲಾಗಿದೆ. ಸುಖ್ನೀರ್ ಭಾನುವಾರ ಮಾವನ ಮನೆಯಿಂದ ಸಂಭಲ್​ನ ಹಯತ್​ನಗರದಲ್ಲಿರುವ ತನ್ನ ಮನೆಗೆ ಮರಳುತ್ತಿದ್ದರು.

ಈ ವೇಳೆ ಮೊರದಾಬಾದ್​ ರಸ್ತೆಯಲ್ಲಿ ಎಸ್​ಯುವಿ ವಾಹನ ಡಿಕ್ಕಿಯಾಗಿದೆ. ಆದರೆ ಬಳಿಕ ಕಾರು ಚಾಲಕ ಬೈಕ್ ಮತ್ತು ಸುಖ್ವಿರ್ ಸಮೇತ ಎಳೆದುಕೊಂಡು ಹೋಗಿದ್ದು, ಸುಮಾರು 2 ಕಿ.ಮೀ ದೂರದಲ್ಲಿ ಬೈಕ್ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಸುಖ್ವೀರ್ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಖವೀರ್‌ರನ್ನು ಸಂಭಾಲ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿಂದ ಅವರನ್ನು ಮೊರಾದಾಬಾದ್‌ಗೆ ಕರೆದೊಯ್ಯಲಾಯಿತು. ಬಳಿಕ ಸುಖ್ವೀರ್ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಿಕಿತ್ಸೆಯ ಸಮಯದಲ್ಲಿ ಅವರು ಸೋಮವಾರ ನಿಧನರಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆ ಕುರಿತು ಮಾತಾಡಿರುವ ಪೊಲೀಸ್​ ಅಧಿಕಾರಿ ಅನುಜ್​ ಕುಮಾರ್​, ಹೃದಯಹೀನ ಕೃತ್ಯ ಎಸಗಿರುವ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಸ್​ಯುವಿಯನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ