ಸರ್ವಾನ್ ಸಿಂಗ್ ಪಂಧೇರ್  
ದೇಶ

ಕೇಂದ್ರ ಸರ್ಕಾರ ನಮ್ಮ ವಿರುದ್ಧ ರಬ್ಬರ್ ಗುಂಡು, ಹೊಗೆ ಶೆಲ್ ಗಳನ್ನು ಬಳಸುತ್ತಿದೆ: ರೈತರು

ನವದೆಹಲಿ: ಧರಣಿ ನಿರತ ರೈತರ ವಿರುದ್ಧ ಪೊಲೀಸರು ಮಿಲಿಟರಿ ಬಳಸುವ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಅವರು ಗುರುವಾರ ಆರೋಪಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಂಧೇರ್ ಅವರು, ಹೊಗೆ ಶೆಲ್ ಗಳು ಮತ್ತು ರಬ್ಬರ್ ಬುಲೆಟ್‌ಗಳಂತೆಯೇ ಕೆಲವು ಮದ್ದುಗುಂಡುಗಳನ್ನು ಪ್ರದರ್ಶಿಸಿದರು ಮತ್ತು ಅವುಗಳನ್ನು ಮಿಲಿಟರಿ ಮಾತ್ರ ಬಳಸುತ್ತದೆ ಎಂದು ಉಲ್ಲೇಖಿಸಿದ್ದಾರೆ.

"ನಾವು ಸೇನೆ ಮಾತ್ರ ಬಳಸುತ್ತಿರುವುದನ್ನು ತೋರಿಸುತ್ತಿದ್ದೇವೆ. ಒಂದು ಅಶ್ರುವಾಯು, ಇನ್ನೊಂದು ಹೊಗೆ ಶೆಲ್ ಏರ್ ಸ್ಫೋಟ ಮತ್ತು ನೆಲದ ಮೇಲೆ ಹೊಗೆ ಶೆಲ್ ಸ್ಫೋಟ. ಈ ಮದ್ದುಗುಂಡುಗಳು ಗಾಯಗಳಿಗೆ ಕಾರಣವಾಗುತ್ತವೆ. ಇದನ್ನು ಮಿಲಿಟರಿ ಮಾತ್ರ ಬಳಸುತ್ತದೆ ಮತ್ತು ಪೊಲೀಸರು ಬಳಸುವುದಿಲ್ಲ. ಆದರೆ ಇಲ್ಲಿ ಪೊಲೀಸರು ಅಧಿಕ ಸ್ಫೋಟಕ ಮದ್ದುಗುಂಡುಗಳನ್ನು ಬಳಸುತ್ತಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕೆಲವು ಅವಧಿ ಮೀರಿದ ಮದ್ದುಗುಂಡುಗಳನ್ನು ಬಳಸಲಾಗುತ್ತಿರುವುದು ಪತ್ತೆಯಾಗಿದೆ. ಎಸ್‌ಎಲ್‌ಆರ್ ಬುಲೆಟ್‌ಗಳನ್ನು ಹಾರಿಸಲಾಗುತ್ತಿದೆ. ಇದನ್ನು ಖಾಸಗಿಯಾಗಿ ಖರೀದಿಸಲಾಗಿದೆ" ಎಂದು ಪಂಧೇರ್ ಆರೋಪಿಸಿದ್ದಾರೆ.

"ಇಡೀ ದೇಶದಲ್ಲಿ ರೈತರು ತಮ್ಮ ಮನೆಗಳಿಂದ ಹೊರಗೆ ಬರಲು ಬಿಡುತ್ತಿಲ್ಲ. ಪ್ರತಿಭಟನೆಗೆ ಬರುವ ರೈತರನ್ನು ಬಂಧಿಸಲಾಗುತ್ತಿದೆ" ಎಂದು ಪಂಧೇರ್ ಹೇಳಿದ್ದಾರೆ.

ಗೃಹ ಸಚಿವಾಲಯದ ಆದೇಶದ ಮೇರೆಗೆ ಪಂಜಾಬ್‌ನ ಪಟಿಯಾಲ, ಸಂಗ್ರೂರ್ ಮತ್ತು ಫತೇಘರ್ ಸಾಹಿಬ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಫೆಬ್ರವರಿ 16 ರವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ರೈತರ ‘ದೆಹಲಿ ಚಲೋ’ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ ಎಂದು ಅವರು ದೂರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT