ಭಾರತೀಯ ಸೇನೆ
ಭಾರತೀಯ ಸೇನೆ TNIE
ದೇಶ

ಸೇನೆಗೆ 84,560 ಕೋಟಿ ರೂ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ ಒಪ್ಪಿಗೆ

Srinivas Rao BV

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) 84,560 ಕೋಟಿ ರೂ ಮೌಲ್ಯದ ವಿವಿಧ ಹಾರ್ಡ್ವೇರ್ (ಯಂತ್ರಾಂಶ)ಗಳನ್ನು ಖರೀದಿಸುವುದಕ್ಕೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, 'ಆತ್ಮನಿರ್ಭರ'ದ ನೈಜ ಉದ್ದೇಶದಲ್ಲಿ ಈ ಅನುಮೋದನೆಗಳಲ್ಲಿ ಭಾರತೀಯ ಮಾರಾಟಗಾರರಿಂದ ವಿವಿಧ ಉಪಕರಣಗಳ ಖರೀದಿಗೆ ವಿಶೇಷ ಒತ್ತು ನೀಡಿವೆ.

ಭೂಕಂಪನ ಸಂವೇದಕಗಳನ್ನು ಹೊಂದಿರುವ ಹೊಸ ತಲೆಮಾರಿನ ಟ್ಯಾಂಕ್ ನಿರೋಧಕ ಮೈನ್ (Anti-tank mines) ಖರೀದಿಸುವುದಕ್ಕೆ ಅನುಮೋದನೆ ನೀಡಲಾಗಿದೆ. ಇದೇ ವೇಳೆ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ರಿಮೋಟ್ ನಿಷ್ಕ್ರಿಯಗೊಳಿಸುವಿಕೆಯನ್ನು ಒದಗಿಸಲು ಡಿಎಸಿ ಎಒಎನ್ ನ್ನು ಖರೀದಿ (ಭಾರತೀಯ-ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ (ಐಡಿಡಿಎಂ) ವಿಭಾಗದ ಅಡಿಯಲ್ಲಿ ಅನುಮೋದನೆ ನೀಡಲಾಗಿದೆ.

ಯಾಂತ್ರೀಕೃತ ಪಡೆಗಳಿಂದ ದೃಶ್ಯ ಗೋಚರತೆಯನ್ನು ಮೀರಿದ ಗುರಿಗಳನ್ನು ತಲುಪಲು, ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಾಬಲ್ಯವನ್ನು ಹೆಚ್ಚಿಸಲು, Buy (ಭಾರತೀಯ-ಐಡಿಡಿಎಂ) ವಿಭಾಗದ ಅಡಿಯಲ್ಲಿ ಕ್ಯಾನಿಸ್ಟರ್ ಆಂಟಿ-ಆರ್ಮರ್ ಲೋಯ್ಟರ್ ಮ್ಯೂನಿಷನ್ ಸಿಸ್ಟಮ್ ಅನ್ನು ಖರೀದಿಸಲು ಡಿಎಸಿ ಒಪ್ಪಿಗೆ ನೀಡಿದೆ. ರಕ್ಷಣಾ ಮೂಲಗಳ ಪ್ರಕಾರ, 15 ಕಡಲ ಗಸ್ತು ವಿಮಾನಗಳನ್ನು ಮೇಡ್ ಇನ್ ಇಂಡಿಯಾ ಸಿ -295 ಸಾರಿಗೆ ವಿಮಾನ ಯೋಜನೆಯಡಿಯಲ್ಲಿ 29,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

SCROLL FOR NEXT