ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ದೇಶ

ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಮೂವರು ಕಾರ್ಮಿಕರು ಅಪಹರಣ

Nagaraja AB

ತಿನ್ಸುಕಿಯಾ: ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಮೂವರು ಕಾರ್ಮಿಕರನ್ನು ಶಂಕಿತ ಉಗ್ರರು ಅಪಹರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡೂ ರಾಜ್ಯಗಳ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ಒಳಗೊಂಡ ತಂಡವು ಗಣಿ ಕಾರ್ಮಿಕರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಅರೆಸೇನಾ ಪಡೆಯ ವಕ್ತಾರರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಚಾಂಗ್ಲಾಗ್ ಜಿಲ್ಲೆಯ ಮೂವರು ವ್ಯಕ್ತಿಗಳು, ನೆರೆಯ ರಾಜ್ಯದ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದು, ಅಪಹರಣಗೊಂಡಿರುವ ಸಾಧ್ಯತೆಯಿದೆ. ಅಪಹರಣಕ್ಕೊಳಗಾದವರ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಜಿತ್ ಗೌರವ್ ಹೇಳಿದ್ದಾರೆ.

ವರದಿಗಳ ಪ್ರಕಾರ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಶಂಕಿತ ಉಲ್ಫಾ (ಐ) ಮತ್ತು ಎನ್ ಎಸ್ ಸಿಎನ್ ಉಗ್ರಗಾಮಿಗಳು ಅಪಹರಿಸಿದ್ದಾರೆ ಎನ್ನಲಾಗಿದೆ. ತಿನ್ಸುಕಿಯಾ ಜಿಲ್ಲೆ ಉಲ್ಫಾ ಉಗ್ರಗಾಮಿಗಳ ತಾಣವಾಗಿದ್ದು, ಚಾಂಗ್ಲಾಂಗ್ ಜಿಲ್ಲೆಯಲ್ಲಿ ಎನ್‌ಎಸ್‌ಸಿಎನ್ ಸಕ್ರಿಯವಾಗಿದೆ.

SCROLL FOR NEXT