ದೇಶ

ಪುರಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ; ಗುಟ್ಕಾ, ಪಾನ್ ನಿಷೇಧ

Srinivas Rao BV

ಪುರಿ: ಪುರಿ ಜಗನ್ನಾಥ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದ್ದು, ದೇವಾಲಯ ಪ್ರವೇಶಿಸುವ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯವಾಗಿದೆ. 

ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಟ್ಕಾ, ಪಾನ್ ಸೇವಿಸುವುದನ್ನ ಹಾಗೂ ಪ್ಲಾಸ್ಟಿಕ್, ಪಾಲಿಥಿನ್ ಬಳಸುವುದನ್ನು 2024 ರ ಹೊಸ ವರ್ಷದ ದಿನದಕ್ಕೆ ನಿರ್ಬಂಧ ವಿಧಿಸಲಾಗಿದೆ. 

ದೇಗುಲಕ್ಕೆ ಪ್ರವೇಶಿಸಲು ಭಕ್ತರು "ಯೋಗ್ಯವಾದ ಬಟ್ಟೆಗಳನ್ನು" ಧರಿಸಬೇಕಾಗುತ್ತದೆ ಎಂದು ಜಗನ್ನಾಥ ದೇವಾಲಯದ ಆಡಳಿತಾಧಿಕಾರಿ ತಿಳಿಸಿದ್ದಾರೆ. ಹಾಫ್ ಪ್ಯಾಂಟ್, ಶಾರ್ಟ್ಸ್, ಟೋರ್ನ್ ಜೀನ್ಸ್, ಸ್ಕರ್ಟ್, ಸ್ಲೀವ್ ಲೆಸ್ ಡ್ರೆಸ್ ಧರಿಸಿದ ಭಕ್ತರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. 

ನಿಯಮ ಜಾರಿಗೆ ಬರುವುದರೊಂದಿಗೆ 2024 ರ ಮೊದಲ ದಿನದಂದು ದೇವಸ್ಥಾನಕ್ಕೆ ಬರುವ ಪುರುಷ ಭಕ್ತರು ಧೋತಿ  ಧರಿಸಿದ್ದರು ಮತ್ತು ಮಹಿಳೆಯರು ಸೀರೆ ಅಥವಾ ಸಲ್ವಾರ್ ಕಮೀಜ್‌ಗಳನ್ನು ಧರಿಸಿ ದೇವರ ದರ್ಶನ ಪಡೆಯಲು ನೆರೆದಿದ್ದರು.

ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಪೊಲೀಸರ ನೆರವಿನೊಂದಿಗೆ ನಿರ್ಬಂಧಗಳನ್ನು ಜಾರಿಗೊಳಿಸಿದೆ. ದೇವಾಲಯದ ಆವರಣದಲ್ಲಿ ಗುಟ್ಕಾ ಮತ್ತು ಪಾನ್ ನಿಷೇಧವನ್ನು ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಜಾರಿಗೊಳಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. ನಿರ್ಬಂಧವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಅವರು ಹೇಳಿದರು.

SCROLL FOR NEXT