ಸಾಂದರ್ಭಿಕ ಚಿತ್ರ 
ದೇಶ

ರಾಷ್ಟ್ರ ರಾಜಧಾನಿಯಲ್ಲಿ ವಾಂಟೆಡ್ ಹಿಜ್ಬುಲ್ ಭಯೋತ್ಪಾದಕನ ಬಂಧನ!

ದೆಹಲಿ ಪೊಲೀಸ್ ವಿಶೇಷ ದಳ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ವಾಂಟೆಡ್ ಭಯೋತ್ಪಾದಕನನ್ನು ಬಂಧಿಸಿದೆ.

ನವದೆಹಲಿ: ದೆಹಲಿ ಪೊಲೀಸ್ ವಿಶೇಷ ದಳ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ವಾಂಟೆಡ್ ಭಯೋತ್ಪಾದಕನನ್ನು ಬಂಧಿಸಿದೆ. ಬಂಧಿತ ಭಯೋತ್ಪಾದಕನನ್ನು ಜಾವೇದ್ ಅಹ್ಮದ್ ಮ್ಯಾಟೊ ಎಂದು ಗುರುತಿಸಲಾಗಿದೆ.  ಆತನ ತಲೆಗೆ 5 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು. 

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಆತನಿಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾಗಿ ದೆಹಲಿ ಪೊಲೀಸ್ ವಿಶೇಷ ದಳ ತಿಳಿಸಿದೆ. ಜಮ್ಮು-ಕಾಶ್ಮೀರದ ಸೊಪೋರ್ ನಿವಾಸಿಯಾದ ಮ್ಯಾಟೊ ಪಾಕಿಸ್ತಾನಕ್ಕೂ ತೆರಳಿದ್ದ ಎನ್ನಲಾಗಿದೆ. 

ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆದ ವೀಡಿಯೊದಲ್ಲಿ, ಜಾವೇದ್ ಅವರ ಸಹೋದರ ರಯೀಸ್ ಮ್ಯಾಟೊ ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ ತ್ರಿವರ್ಣ ಧ್ವಜವನ್ನು ಬೀಸುತ್ತಿರುವುದು ವೈರಲ್ ಕಂಡುಬಂದಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಲವು ಭಯೋತ್ಪಾದಕ ಘಟನೆಗಳಲ್ಲಿ ಮ್ಯಾಟೊ ಪೊಲೀಸರಿಗೆ ಬೇಕಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನ್ಯೂ ಟೀಂ ಘೋಷಣೆ; ರಾಮ್ ಮಾಧವ್, ಸ್ಮೃತಿ ಜೊತೆ ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ!

ಪ್ರಧಾನಿ ಮೋದಿ ಭೇಟಿ ಮಾಡಿದ ದೇವೇಂದ್ರ ಫಡ್ನವೀಸ್; ಮಹಾರಾಷ್ಟ್ರ ರಾಜಕೀಯಕ್ಕೆ ಗುಡ್ ಬೈ?

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

ನಾನು ರಾತ್ರೋರಾತ್ರಿ ಸ್ಟಾರ್ ಆದವನಲ್ಲ, ಕಷ್ಟಪಟ್ಟು ಸ್ಟಾರ್ ಆಗಿದ್ದೇನೆ: ಕಷ್ಟದ ದಿನಗಳನ್ನು ನೆನೆದ ರಾಕಿಂಗ್ ಸ್ಟಾರ್ ಯಶ್‌

ನಟ ದರ್ಶನ್‌ಗೆ ಮತ್ತೊಂದು ಶಾಕ್; ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಸೂಚನೆ