ದೇಶ

ಚುನಾವಣೆ ಲಾಭಕ್ಕಾಗಿ ಬಿಜೆಪಿ ಅಯೋಧ್ಯೆಯಲ್ಲಿ ಬಾಂಬ್ ಸ್ಫೋಟಿಸಿ ಮುಸ್ಲಿಂ-ಪಾಕಿಸ್ತಾನವನ್ನು ದೂರಬಹುದು: ಅಜಯ್ ಯಾದವ್

Ramyashree GN

ಪಾಟ್ನಾ: ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಅಯೋಧ್ಯೆಯಲ್ಲಿ ಬಾಂಬ್ ಸ್ಫೋಟಿಸಬಹುದು. ಅದಕ್ಕೆ ಪಾಕಿಸ್ತಾನ ಮತ್ತು ಮುಸ್ಲಿಮರನ್ನು ದೂಷಿಸುತ್ತದೆ ಎಂದು ಹೇಳುವ ಮೂಲಕ ಆರ್‌ಜೆಡಿ ಶಾಸಕ ಅಜಯ್ ಯಾದವ್ ಭಾನುವಾರ ಹೊಸ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ.

ಅತ್ರಿ ವಿಧಾನಸಭಾ ಕ್ಷೇತ್ರದ ಆರ್‌ಜೆಡಿ ಶಾಸಕ ಅಜಯ್ ಯಾದವ್ ತಮ್ಮ ಮನೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, 'ಅಯೋಧ್ಯೆಗೆ ಭಾರಿ ಜನರು ಭೇಟಿ ನೀಡುತ್ತಿದ್ದು, ನಮಗೆ ಭಯವಾಗುತ್ತಿದೆ. ಚುನಾವಣೆಯ ಲಾಭಕ್ಕಾಗಿ ಅವರು (ಬಿಜೆಪಿ) ಅಲ್ಲಿ ಬಾಂಬ್‌ಗಳನ್ನು ಸ್ಫೋಟಿಸುತ್ತಾರೆ ಮತ್ತು ಅದಕ್ಕಾಗಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ ಸಂಘಟನೆಗಳು ಅಥವಾ ಮುಸ್ಲಿಮರನ್ನು ದೂರುತ್ತಾರೆ' ಎಂದಿದ್ದಾರೆ.

ಮೋದಿ ಅವರು ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಯಾದವ್ ಹೇಳಿದರು. 

ಭಗವಾನ್ ರಾಮನು ತನ್ನ ಹೆಂಡತಿಗಾಗಿ ಬಲಿಷ್ಠ ರಾವಣನ ವಿರುದ್ಧ ಹೋರಾಡಿದನು. ಆದರೆ, ಮೋದಿ ಜಿ ತನ್ನ ಹೆಂಡತಿಯನ್ನು ತೊರೆದಿದ್ದಾರೆ. ತನ್ನ ಹೆಂಡತಿಯನ್ನು ತೊರೆದ ವ್ಯಕ್ತಿಯು ಭಗವಾನ್ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ! ಎಂದು ದೂರಿದ್ದಾರೆ.

SCROLL FOR NEXT