ದೇಶ

ಅಯೋಧ್ಯೆಯಲ್ಲಿ ಲ್ಯಾಂಡ್ ಆದ ಮೊದಲ ವಿಮಾನದಲ್ಲಿ 'ರಾಮ, ಸೀತೆ, ಲಕ್ಷ್ಮಣ' ಆಗಮನ!

Lingaraj Badiger

ಅಯೋಧ್ಯೆ: ಗುಜರಾತ್ ನ ಅಹಮದಾಬಾದ್‌ನಿಂದ ಗುರುವಾರ ಅಯೋಧ್ಯೆಗೆ ಆಗಮಿಸಿದ ಮೊದಲ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರು ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಾನ್ ವೇಷ ಧರಿಸಿದ್ದರು.

ಇಂದು ಬೆಳಗ್ಗೆ 9 ಗಂಟೆಗೆ ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದಇಂಡಿಗೋ ವಿಮಾನದಲ್ಲಿ ಹಲವಾರು ಭಕ್ತರು ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತೆಯ ವೇಷಭೂಷಣ ಧರಿಸಿದ್ದರು.

ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿದ ವೀಡಿಯೊದಲ್ಲಿ, ಹಲವಾರು ಉತ್ಸಾಹಿ ಭಕ್ತರು ಭಗವಾನ್ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನ್ ವೇಷ ಧರಿಸಿರುವುದನ್ನು ಕಾಣಬಹುದು. ಹಲವು ಭಕ್ತರು "ಜೈ ಶ್ರೀ ರಾಮ್"  ಎಂದು ಘೋಷಣೆಗಳನ್ನು ಕೂಗುತ್ತಾ ಅಯೋಧ್ಯೆ ವಿಮಾನ ಏರಿದರು. 

ವಿಮಾನವು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಬಂದಿಳಿಯಿತು.

ಅಯೋಧ್ಯೆಯಲ್ಲಿ ಪವಿತ್ರ ರಾಮಲಲ್ಲಾ 'ಪ್ರಾಣ ಪ್ರತಿಷ್ಠಾಪನೆ' ಸಮಾರಂಭಕ್ಕೆ ಪೂರ್ವಭಾವಿಯಾಗಿ, ಉತ್ತರ ಪ್ರದೇಶ ಸರ್ಕಾರ ಸುಧಾರಿತ ಭದ್ರತೆ ಮತ್ತು ಸಂಚಾರ ನಿರ್ವಹಣಾ ಕ್ರಮಗಳನ್ನು ಒಳಗೊಂಡ ಸಮಗ್ರ ಯೋಜನೆ ಜಾರಿಗೆ ತಂದಿದೆ.
 

SCROLL FOR NEXT