ದೇಶ

7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಐಎಎಫ್ ವಿಮಾನದ ಅವಶೇಷಗಳು ಪತ್ತೆ

Lingaraj Badiger

ನವದೆಹಲಿ: ಏಳು ವರ್ಷಗಳ ಹಿಂದೆ ಕಾರ್ಯಾಚರಣೆಯ ವೇಳೆ 29 ರಕ್ಷಣಾ ಸಿಬ್ಬಂದಿಯೊಂದಿಗೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನದ ಅವಶೇಷಗಳು ಚೆನ್ನೈ ಕರಾವಳಿಯಲ್ಲಿ 3.1 ಕಿಮೀ ಆಳದಲ್ಲಿ ಪತ್ತೆಯಾಗಿವೆ.

ಚೆನ್ನೈ ಮೂಲದ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ(ಎನ್‌ಐಒಟಿ) ವಿಜ್ಞಾನಿಗಳು ಕಳೆದ ತಿಂಗಳು ಬಹು-ಬೀಮ್ ಸೋನಾರ್(ಸೌಂಡ್ ನ್ಯಾವಿಗೇಷನ್ ಮತ್ತು ರೇಂಜಿಂಗ್) ಸೇರಿದಂತೆ ಸಮುದ್ರದ ಆಳದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಎಯುವಿ ವಾಹನವನ್ನು ವಿಮಾನ ಅವಘಡ ಸಂಭವಿಸಿದ್ದ ಸ್ಥಳದಲ್ಲಿ ನಿಯೋಜಿಸಿದ್ದರು. ಎಯುವಿ ವಾಹನ 3.1 ಕಿ.ಮೀ. ಆಳದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದೆ.

AUV ಸಮುದ್ರದಲ್ಲಿ 3,400 ಮೀಟರ್ ಆಳದಲ್ಲಿ ಬಲವಾದ ಸೋನಾರ್ ಪ್ರತಿಬಿಂಬಗಳನ್ನು ತೆಗೆದುಕೊಂಡಿದೆ ಮತ್ತು ವಿಮಾನದ ಅವಶೇಷಗಳ ಚಿತ್ರಗಳನ್ನು ಕ್ಲಿಕ್ ಮಾಡಿದೆ. ತಕ್ಷಣ ಆ ಚಿತ್ರಗಳನ್ನು ವಾಯುಪಡೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಅವರು ಅಧ್ಯಯನ ನಡೆಸಿ ಈ ಅವಶೇಷಗಳು ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ An-32 ವಿಮಾನಕ್ಕೆ ಸೇರಿದ್ದು ಎಂದು ದೃಢಪಡಿಸಿದ್ದಾರೆ.

An-32 ವಿಮಾನವು ಜುಲೈ 22, 2016 ರಂದು ಚೆನ್ನೈನ ತಾಂಬರಂ ಏರ್ ಫೋರ್ಸ್ ಸ್ಟೇಷನ್‌ನಿಂದ ಟೇಕ್ ಆಫ್ ಆಗಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ತೆರಳುತ್ತಿದ್ದಾಗ ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿತ್ತು.

SCROLL FOR NEXT