ದೇಶ

ಅಯೋಧ್ಯೆಯಲ್ಲಿ ಏರುಗತಿಯಲ್ಲಿ ಹೋಟೆಲ್ ಉದ್ಯಮ: ಹೂಡಿಕೆದಾರರ ಕೇಂದ್ರಬಿಂದುವಾದ ಮಂದಿರ ನಗರಿ!

Srinivas Rao BV

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರದಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳು ತೆರೆದುಕೊಳ್ಳುತ್ತಿವೆ. 

ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಯೋಧ್ಯೆಯಲ್ಲಿ ಅತಿಥಿ ಸತ್ಕಾರ, ಹೋಟೆಲ್ ಉದ್ಯಮಗಳ ಮೇಲಿನ ಹೂಡಿಕೆಯತ್ತ ಗಮನ ಹರಿಸಿದ್ದಾರೆ. 

ಖ್ಯಾತ ಹೊಟೆಲ್ ಬ್ರಾಂಡ್ ಗಳು ಅಯೋಧ್ಯೆಯಲ್ಲಿ ಈಗ ತಮ್ಮ ಶಾಖೆಗಳನ್ನು ತೆರೆಯುತ್ತಿವೆ ಹಾಗೂ ಈ ಪ್ರದೇಶದಲ್ಲಿ ಕನಿಷ್ಠ 50 ಪ್ರಮುಖ ಹೋಟೆಲ್ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. 

ಹಲವಾರು ಸಣ್ಣ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ಈ ಪ್ರದೇಶದಲ್ಲಿ ಹೂಡಿಕೆ ಮಾಡುವುದರೊಂದಿಗೆ, ಅಯೋಧ್ಯೆಯು ಹೋಟೆಲ್ ಉದ್ಯಮದಲ್ಲಿ ಹೊಸ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮುತ್ತಿದೆ.

ಜೊತೆಗೆ, ಉತ್ತಮ ಹೆದ್ದಾರಿಗಳು ಮತ್ತು ರಸ್ತೆಗಳು, ಭಗವಾನ್ ರಾಮನ ಜೀವನವನ್ನು ಚಿತ್ರಿಸುವ ಗೋಡೆಯ ವರ್ಣಚಿತ್ರಗಳು, ಮುಂಭಾಗದ ದೀಪಗಳು ಮತ್ತು ವಿಕ್ಟೋರಿಯನ್ ದೀಪಗಳಿಂದ ಅಲಂಕರಿಸಲ್ಪಟ್ಟ ಭವ್ಯವಾದ ಪ್ರವೇಶದ್ವಾರವು ಅಯೋಧ್ಯೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಅಯೋಧ್ಯೆಯ ವಿಭಾಗೀಯ ಆಯುಕ್ತ ಗೌರವ್ ದಯಾಳ್ ಪ್ರಕಾರ, ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಅಯೋಧ್ಯೆಯಲ್ಲಿ ಪ್ರವಾಸೋದ್ಯಮಕ್ಕಾಗಿ ಸುಮಾರು 18,000 ಕೋಟಿ ಮೌಲ್ಯದ 102 ಉದ್ದೇಶಿತ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಪ್ರಸ್ತುತ, ಅಯೋಧ್ಯೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ 126 ಕಾರ್ಯಗತಗೊಳಿಸಲು ಸಿದ್ಧವಾಗಿರುವ ಯೋಜನೆಗಳಿವೆ.
 

SCROLL FOR NEXT