ಪ್ರಧಾನಿ ನರೇಂದ್ರ ಮೋದಿ 
ದೇಶ

ನೆಲದ ಮೇಲೆ ನಿದ್ದೆ... ಎಳನೀರು ದ್ರವಾಹಾರ... ಪ್ರಧಾನಿ ಮೋದಿ ವ್ರತಾಚರಣೆ ಹೇಗಿದೆ ನೋಡಿ....

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ವಿಡಿಯೊ ಸಂದೇಶವೊಂದರಲ್ಲಿ ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರದಲ್ಲಿ ರಾಮ್ ಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ಕಟ್ಟುನಿಟ್ಟಿನ ವ್ರತಾಚರಣೆ ಮಾಡುವುದಾಗಿ ಹೇಳಿಕೊಂಡಿದ್ದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ವಿಡಿಯೊ ಸಂದೇಶವೊಂದರಲ್ಲಿ ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರದಲ್ಲಿ ರಾಮ್ ಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ಕಟ್ಟುನಿಟ್ಟಿನ ವ್ರತಾಚರಣೆ ಮಾಡುವುದಾಗಿ ಹೇಳಿಕೊಂಡಿದ್ದರು.

ಹಾಗಾದರೆ ಅವರು ಮಾಡುತ್ತಿರುವ ಕಟ್ಟುನಿಟ್ಟಿನ ಆಚರಣೆಯೇನು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. 73 ವರ್ಷದ ಪ್ರಧಾನಿ ಮೋದಿಯವರು ನೆಲದ ಮೇಲೆ ಮಲಗುತ್ತಿದ್ದಾರಂತೆ. ಎಳನೀರನ್ನು ಮಾತ್ರ ಸೇವಿಸುತ್ತಿದ್ದಾರೆ, ಅದೂ ದಿನಕ್ಕೆ ಎರಡು ಬಾರಿ ಮಾತ್ರ ಎಂದು ಅವರ ವಕ್ತಾರರೊಬ್ಬರು ಹೇಳುತ್ತಿದ್ದಾರೆ. 

ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಹೈಲೈಟ್ ಪ್ರಧಾನಿ ಮೋದಿಯವರೇ, ಅವರ ಉಸ್ತುವಾರಿಯಲ್ಲಿ ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಇದು ಪ್ರಧಾನಿ ಮೋದಿಯವರು ತಮ್ಮ ಸಾತ್ವಿಕ ವ್ರತಾಚರಣೆಯ ಅಂಗವಾಗಿ ಕೈಗೊಂಡ ಕಟ್ಟುನಿಟ್ಟಿನ ಆಚರಣೆಯಂತೆ.ಅಯೋಧ್ಯೆಯಲ್ಲಿ ರಾಮ್ ಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠಾ’ಪನೆಗೆ ಇನ್ನು ಇರುವುದು ಕೇವಲ ಮೂರು ದಿನಗಳು. 

ರಾಮ ಮಂದಿರ ಉದ್ಘಾಟನೆಯಂತಹ ಶುಭ ಸಮಾರಂಭಕ್ಕೆ ಸಾಕ್ಷಿಯಾಗುವ ಭಾಗ್ಯ ನನ್ನದು. ಸಮಾರಂಭದಲ್ಲಿ ಭಾರತದ ಜನರನ್ನು ಪ್ರತಿನಿಧಿಸಲು ದೇವರು ನನ್ನನ್ನು ಕಳುಹಿಸಿಕೊಡುತ್ತಿದ್ದಾನೆ. ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಂದ ಆಶೀರ್ವಾದವನ್ನು ಕೋರುತ್ತೇನೆ” ಎಂದು ವೀಡಿಯೊದಲ್ಲಿ ಪ್ರಧಾನಿ ಕೇಳಿಕೊಂಡಿದ್ದರು. 

ಬೆಳಗ್ಗೆ ಬೇಗನೆ ಏಳುವುದು, ಕಟ್ಟುನಿಟ್ಟಿನ ಆಹಾರ ಪದ್ಧತಿಯ ಹೊರತಾಗಿ, ಮೋದಿ ಅವರು ಪಶ್ಚಿಮ ಮತ್ತು ದಕ್ಷಿಣ ಭಾರತದ ದೇವಾಲಯಗಳಿಗೆ ಕಳೆದ ಕೆಲ ದಿನಗಳಿಂದ ಭೇಟಿ ನೀಡುತ್ತಿದ್ದಾರೆ. ನಾಸಿಕ್‌ನ ಪಂಚವಟಿಗೆ ಭೇಟಿ ನೀಡಿದ್ದರು. ಅಲ್ಲಿ ಭಗವಾನ್ ರಾಮನು ತನ್ನ ವನವಾಸದ ಕೆಲವು ಭಾಗಗಳನ್ನು ಕಳೆದಿದ್ದನು ಎಂದು ನಂಬಲಾಗಿದೆ. ಕೇರಳದ ಗುರುವಾಯೂರ್ ದೇವಸ್ಥಾನ ಮತ್ತು ಆಂಧ್ರಪ್ರದೇಶದ ವೀರಭದ್ರ ದೇವಸ್ಥಾನಕ್ಕೂ ಮೋದಿ ಭೇಟಿ ನೀಡಿದ್ದರು. ತಮಿಳುನಾಡಿನಲ್ಲಿ ಹಲವು ದೇಗುಲಗಳಿಗೆ ಭೇಟಿ ಕೊಟ್ಟಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ದೇವರ ಮೊರೆ ಹೋದ ಡಿಕೆಶಿ ಬೆಂಬಲಿಗರು: ಅಯ್ಯಪ್ಪ ಮಾಲಾಧಾರಿಗಳ ವಿಶೇಷ ಪೂಜೆ; ಗಣಪತಿ ದೇವಾಲಯಲ್ಲಿ ಈಡುಗಾಯಿ ಸೇವೆ!

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಿ ಸೃಷ್ಟಿಸುತ್ತಿದೆ: DCM ಡಿ.ಕೆ. ಶಿವಕುಮಾರ್

SCROLL FOR NEXT