ದೇಶ

ಮುಂಬೈ ನಲ್ಲಿ ಫೆ.06 ವರೆಗೆ ನಿಷೇಧಾಜ್ಞೆ ಜಾರಿ

Srinivas Rao BV

ಮುಂಬೈ: ಮುಂಬೈ ನಲ್ಲಿ ಫೆ.06 ವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಂತಿ ಕದಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜ.26 ರಂದು ಮುಂಬೈ ನಲ್ಲಿ ಮರಾಠಾ ಮೀಸಲಾತಿ ಕಾರ್ಯಕರ್ತ ಮನೋಜ್ ಜಾರಂಗೆ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದು ರಾಜ್ಯ ರಾಜಧಾನಿಯ ಹಾದಿಯಲ್ಲಿದ್ದಾರೆ.

ಎಲ್ಲಾ ಮರಾಠಿಗರಿಗೆ ಒಬಿಸಿ ಜಾತಿ ಪ್ರಮಾಣಪತ್ರ ನೀಡಬೇಕೆಂದು ಜಾರಂಗೆ ಆಗ್ರಹಿಸಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಸಾರ್ವಜನಿಕ ನೆಮ್ಮದಿ, ಮಾನವ ಜೀವಗಳಿಗೆ ಅಪಾಯ ಮತ್ತು ಆಸ್ತಿ ನಷ್ಟ, ಶಾಂತಿ ಭಂಗ ಮತ್ತು ಕದಡುವ ಸಾಧ್ಯತೆಯ ಬಗ್ಗೆ ಮಾಹಿತಿ ಪಡೆದ ನಂತರ ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸ್ ಉಪ ಆಯುಕ್ತರು (ಕಾರ್ಯಾಚರಣೆ) ಜನರು ಮತ್ತು ಮೆರವಣಿಗೆಗಳನ್ನು ನಿಷೇಧಿಸುವ ಆದೇಶವನ್ನು ಸೋಮವಾರ ಹೊರಡಿಸಿದರು.

ಈ ಆದೇಶ ಮಂಗಳವಾರದಿಂದ ಜಾರಿಗೆ ಬಂದಿದ್ದು, ಮುಂದಿನ 15 ದಿನಗಳವರೆಗೆ ಜಾರಿಯಲ್ಲಿರಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ನಿಷೇಧಾಜ್ಞೆಯ ಜಾರಿಯಾಗಿರುವ ಹಿನ್ನೆಲೆಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಯಾವುದೇ ಸಭೆ, ಯಾವುದೇ ಜನರ ಮೆರವಣಿಗೆ ಮತ್ತು ಧ್ವನಿವರ್ಧಕಗಳ ಬಳಕೆ, (ಧ್ವನಿ) ವರ್ಧಿಸುವ ವಾದ್ಯಗಳು, ಸಂಗೀತ ಬ್ಯಾಂಡ್‌ಗಳು ಮತ್ತು ಸಭೆಯ ಯಾವುದೇ ಮೆರವಣಿಗೆಯಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ಪ್ರಕಾರ ನಿಷೇಧಿಸಲಾಗಿದೆ.

SCROLL FOR NEXT