ದೇಶ

ಬಿಹಾರದಲ್ಲಿ ರಾಜಕೀಯ ಬಿರುಗಾಳಿ ನಡುವೆ ಆರ್‌ಜೆಡಿ ಸಭೆ!

Nagaraja AB

ಪಾಟ್ನಾ: ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮಹಾಘಟ್ ಬಂಧನ್ ಮೈತ್ರಿಕೂಟ ತೊರೆಯುವ ಆತಂಕದ ನಡುವೆಯೇ ಬಿಹಾರದ ರಾಷ್ಟ್ರೀಯ ಜನತಾ ದಳದ ಮುಖಂಡರು ಶನಿವಾರ ಸಭೆ ನಡೆಸುತ್ತಿದ್ದಾರೆ.

ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಮಾಜಿ ಮುಖ್ಯಮಂತ್ರಿ ಪತ್ನಿ ರಾಬ್ರಿ ದೇವಿ, ರಾಜ್ಯ ಶಾಸಕಾಂಗ ಸದಸ್ಯರು ಸೇರಿದಂತೆ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ.

ಕಾಂಗ್ರೆಸ್ ಮತ್ತು ಮೂರು ಎಡ ಪಕ್ಷಗಳನ್ನು ಒಳಗೊಂಡಿರುವ ಮಹಾಘಟಬಂಧನ್‌ನಲ್ಲಿ ಆರ್‌ಜೆಡಿ ಅತಿದೊಡ್ಡ ಮೈತ್ರಿ ಪಾಲುದಾರ ಪಕ್ಷವಾಗಿದ್ದು, ಕುಮಾರ್ ಮೈತ್ರಿಕೂಟ ತೊರೆದರೆ ವಿಧಾನಸಭೆಯಲ್ಲಿ ಬಹುಮತಕ್ಕೆ 8 ಸದಸ್ಯರ ಕೊರತೆ ಎದುರಾಗಲಿದೆ.

ನಿತೀಶ್ ಕುಮಾರ್  ಬಿಜೆಪಿ ನೇತೃತ್ವದ ಎನ್ ಡಿಎ ಗೆ ಮರಳಬಹುದು ಎಂಬ ಬಲವಾದ ಸೂಚನೆಗಳ ನಡುವೆ ಬಿಹಾರದಲ್ಲಿ ಆಡಳಿತಾರೂಢ ಮಹಾಘಟ ಬಂಧನ್ ನಾಯಕರು ತೀವ್ರವಾದ ಚರ್ಚೆಯಲ್ಲಿ ತೊಡಗಿದ್ದಾರೆ. 
 

SCROLL FOR NEXT