ದೇಶ

ದೇವಿ ಅವಾರ್ಡ್ಸ್ 2024: 11 ಸಾಧಕಿಯರಿಗೆ ಸನ್ಮಾನ; ಮಹಿಳೆಯರ ಶಕ್ತಿ, ಸಾಮರ್ಥ್ಯವೇ ಮಾನದಂಡ

Sumana Upadhyaya

ಚೆನ್ನೈ: ಸಮಾಜದಲ್ಲಿ ಮಹಿಳೆಯರ ಪಾತ್ರವು ಹರಿಯುವ ನೀರಿನಂತೆ ನಿರಂತರವಾಗಿ ವಿಕಸನಗೊಳ್ಳುತ್ತಿರುವಾಗ, ಚೆನ್ನೈನಲ್ಲಿ ನಡೆದ ದೇವಿ ಪ್ರಶಸ್ತಿ 2024ರ 26 ನೇ ಆವೃತ್ತಿಯಲ್ಲಿ, ಶಕ್ತಿ, ದೃಢತೆ ಮತ್ತು ಸ್ಥಿತಿಸ್ಥಾಪಕತ್ವ ಗುಣವನ್ನು ಹೊಂದಿರುವ 11 'ದೇವಿ'ಗಳೆಂದು ಕರೆಯಲ್ಪಡುವ ಮಹಿಳೆಯರನ್ನು ಗೌರವಿಸಿ ಅವರ ಸಾಧನೆಗಳನ್ನು ಸನ್ಮಾನಿಸಲಾಯಿತು. 

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಪ್ರತಿವರ್ಷ ನೀಡುತ್ತಾ ಬಂದಿರುವ ದೇವಿ ಅವಾರ್ಡ್ಸ್, ಸಮಾಜವನ್ನು ರೂಪಿಸಿದ ಮತ್ತು ಮರುರೂಪಿಸಿದ ಮಹಿಳೆಯರ ಯಶಸ್ಸನ್ನು ಆಚರಿಸುತ್ತದೆ. 2024 ರ ಪ್ರಶಸ್ತಿಗಳ ಆವೃತ್ತಿಯು ವ್ಯಾಪಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ 11 ಮಹಿಳೆಯರು ತುಂಬಿದ ಸಭಾಂಗಣದಲ್ಲಿ ಚಪ್ಪಾಳೆ ಸುರಿಮಳೆ ನಡುವೆ ಪ್ರಶಸ್ತಿ ಸ್ವೀಕರಿಸಿದರು. 

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (TNIE) ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರ ಉಪಸ್ಥಿತಿಯಲ್ಲಿ ತೆಲಂಗಾಣದ ಗವರ್ನರ್ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಡಾ ತಮಿಳಿಸೈ ಸೌಂದರರಾಜನ್ ಅವರಿಂದ ದೇವಿ ಪ್ರಶಸ್ತಿಯನ್ನು ವಿಚರಿಸಲಾಯಿತು. ಕಾರ್ಯಕ್ರಮದಲ್ಲಿ TNIE ಗ್ರೂಪ್‌ ಸಂಪಾದಕಿ ಸಾಂತ್ವಾನ ಭಟ್ಟಾಚಾರ್ಯ ಮತ್ತು TNIE ನ ಸಿಇಒ ಲಕ್ಷ್ಮಿ ಮೆನನ್ ಉಪಸ್ಥಿತರಿದ್ದರು.

ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಗಾಯಕಿ ಅರುಣಾ ಸಾಯಿರಾಂ, ಮಾಧ್ಯಮ ಸಾಮ್ರಾಜ್ಯದ ಹಿಂದಿನ ಶಕ್ತಿಯಾಗಿದ್ದಕ್ಕಾಗಿ ಕವಿಯಾ ಕಲಾನಿತಿ ಮಾರನ್ (ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ), ಡಾ ಪ್ರಿಯಾ ಅಬ್ರಹಾಂ (ವೈರಾಲಜಿಸ್ಟ್) ಅವರು ಸ್ಥಳೀಯ ಕೋವಿಡ್-19 ಲಸಿಕೆಗೆ ನೀಡಿದ ಕೊಡುಗೆಗೆ ಗುರುತಿಸಿ ಸನ್ಮಾನಿಸಲಾಗಿದೆ. ಅನ್ನಪೂರ್ಣಿ ಸುಬ್ರಮಣ್ಯಂ, ಖಗೋಳ ಭೌತಶಾಸ್ತ್ರಜ್ಞ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ನಿರ್ದೇಶಕಿ, ಶರಣ್ಯ ಮಣಿವಣ್ಣನ್ (ಲೇಖಕಿ ಮತ್ತು ಸಚಿತ್ರಕಾರ), ಶೋಭಾ ವಿಶ್ವನಾಥ್ (ಪ್ರಕಾಶಕರು ಮತ್ತು ಲೇಖಕರು), ತಿರುಪುರಸುಂದರಿ ಸೆವ್ವೆಲ್ (ವಾಸ್ತುಶಿಲ್ಪಿ ಮತ್ತು ಶಿಕ್ಷಣತಜ್ಞ), ಶ್ರೀಮತಿ ಟೆಕ್ ಕೇಸನ್ (ಸ್ಪೇಸ್ ), ಉಮಾ ಪ್ರಜಾಪತಿ (ಸಾಮಾಜಿಕ ಉದ್ಯಮಿ), ವಿಶಾಲಾಕ್ಷಿ ರಾಮಸ್ವಾಮಿ (ಸಾಂಪ್ರದಾಯಿಕ ಕರಕುಶಲ ಪುನರುಜ್ಜೀವನಕಾರ) ಮತ್ತು ಅರ್ಚನಾ ಸ್ಟಾಲಿನ್ (ಉದ್ಯಮಿ) ಅವರು ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಪ್ರಸಕ್ತ ವರ್ಷದ ದೇವಿ ಪ್ರಶಸ್ತಿ ಪುರಸ್ಕೃತರು 

ಸ್ವಾಗತ ಭಾಷಣ ಮಾಡಿದ ಸಾಂತ್ವಾನ ಭಟ್ಟಾಚಾರ್ಯ, ದೇವಿ ಪ್ರಶಸ್ತಿಗಳು ಜೀವನದ ಪ್ರತಿಯೊಂದು ರಂಗದ ಮಹಿಳೆಯರ ಯಶಸ್ಸು, ಶಕ್ತಿ, ಸೃಜನಶೀಲತೆ, ವ್ಯಾವಹಾರಿಕ ಕುಶಾಗ್ರಮತಿ, ನಾವೀನ್ಯತೆ ಮತ್ತು ಕಲ್ಪನೆಯನ್ನು ಸ್ಮರಿಸುವುದಾಗಿದೆ ಎಂದರು.

ಸ್ತ್ರೀವಾದದ ಬಗ್ಗೆ ಮಾತನಾಡಿದ ಭಟ್ಟಾಚಾರ್ಯ, ಸ್ತ್ರೀವಾದ ಮತ್ತು ಹಕ್ಕುಗಳು ಮತ್ತು ಮಹಿಳಾ ಶಕ್ತಿಯ ಹೋರಾಟವು ಸಾಕಷ್ಟು ಮೌಲ್ಯಮಾಪನ ಮತ್ತು ಚರ್ಚೆಯ ಮೂಲಕ ಸಾಗಿದೆ ಮತ್ತು ನಡೆಯುತ್ತಿದೆ. ಇದು ವಿಕಸನಗೊಳ್ಳುತ್ತಿರುವ ವ್ಯಾಖ್ಯಾನವಾಗಿದೆ. ನಾವು ದೇವಿ ಅಥವಾ ದಾಸಿಯಾಗಬಾರದು; ನಾವು ನಾವಾಗಿಯೇ ಇರೋಣ ಎಂದರು. ಪ್ರಭು ಚಾವ್ಲಾ ಅವರು ರಾಜ್ಯಪಾಲರನ್ನು ಸನ್ಮಾನಿಸಿದರು. ಲಕ್ಷ್ಮೀ ಮೆನನ್ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 

SCROLL FOR NEXT