ಕೆಸಿ ತ್ಯಾಗಿ 
ದೇಶ

ಕಾಂಗ್ರೆಸ್ ನಿತೀಶ್ ಗೆ ಮಾಡಿದ ಅವಮಾನದಿಂದ ಇಂಡಿಯಾ ಮೈತ್ರಿಕೂಟ ಪತನ: ಕೆ ಸಿ ತ್ಯಾಗಿ

ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಬಹುತೇಕ ಪತನವಾಗುವುದನ್ನು ಜೆಡಿಯು ರಾಜಕೀಯ ಸಲಹೆಗಾರ ಹಾಗೂ ವಕ್ತಾರ ಕೆ. ಸಿ. ತ್ಯಾಗಿ ಶನಿವಾರ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕತ್ವದ ಒಂದು ವರ್ಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪದೇ ಪದೇ 'ಅವಮಾನ' ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಾಟ್ನಾ: ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಬಹುತೇಕ ಪತನವಾಗುವುದನ್ನು ಜೆಡಿಯು ರಾಜಕೀಯ ಸಲಹೆಗಾರ ಹಾಗೂ ವಕ್ತಾರ ಕೆ. ಸಿ. ತ್ಯಾಗಿ ಶನಿವಾರ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕತ್ವದ ಒಂದು ವರ್ಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪದೇ ಪದೇ 'ಅವಮಾನ' ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ. ತ್ಯಾಗಿ ಇಂಡಿಯಾ ಮೈತ್ರಿಕೂಟ ಪತನದ ಅಂಚಿನಲ್ಲಿದೆ. ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಇಂಡಿಯಾ ಬ್ಲಾಕ್ ಪಕ್ಷಗಳ ಮೈತ್ರಿ ಬಹುತೇಕ ಮುಗಿದಿದೆ ಎಂದರು.

ಕಾಂಗ್ರೆಸ್ಸೇತರ ಪಕ್ಷಗಳನ್ನು ಕಾಂಗ್ರೆಸ್‌ನೊಂದಿಗೆ ಕರೆತರುವಲ್ಲಿ ಯಶಸ್ವಿಯಾದ ಜೆಡಿಯು ಅಧ್ಯಕ್ಷ ಕುಮಾರ್ ಅವರ ಗುರಿ ಮತ್ತು ಉದ್ದೇಶಗಳನ್ನು ಕಾಂಗ್ರೆಸ್  ನಾಯಕರು 'ತಪ್ಪಾಗಿ ಅರ್ಥೈಸಿದರು. ಇಂಡಿಯಾ ಮೈತ್ರಿಕೂಟದಲ್ಲಿ ಸ್ಥಾನಕ್ಕಾಗಿ ಎಂದಿಗೂ ಹಾತೊರೆಯಲಿಲ್ಲ ಆದರೆ ಕಾಂಗ್ರೆಸ್ ನಾಯಕತ್ವದ ಒಂದು ವಿಭಾಗ ಅವರನ್ನು ಪದೇ ಪದೇ ಅವಮಾನಿಸಿತು ಎಂದು ಅವರು ಹೇಳಿದರು.

ಇಂಡಿಯಾ ಮೈತ್ರಿಕೂಟ 'ಸರ್ವಶಕ್ತ' ಭಾರತೀಯ ಜನತಾ ಪಕ್ಷದ ವಿರುದ್ಧ ಹೇಗೆ ಹೋರಾಡಬಹುದು ಎಂಬುದನ್ನು ಅವರು ನೋಡಲಿಲ್ಲ. ಪಾಟ್ನಾದಲ್ಲಿ ಹಲವಾರು ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ನಿತೀಶ್ ಯಶಸ್ವಿಯಾದರು ಆದರೆ ಚುನಾವಣೆ ಹತ್ತಿರದಲ್ಲಿದ್ದರೂ ನಾಯಕತ್ವ ಹಾಗೂ ಕಾರ್ಯಸೂಚಿ ಬಗ್ಗೆ ಇಂಡಿಯಾ ಮೈತ್ರಿಕೂಟ ಯಾವುದೇ ಜಂಟಿ ಸಭೆ ನಡೆಸಲಿಲ್ಲ. ಇದರಿಂದ ಇಡೀ ಪ್ರಕ್ರಿಯೆ ವ್ಯರ್ಥವಾಯಿತು ಎಂದು ತ್ಯಾಗಿ ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್