ಭೋಲೆ ಬಾಬಾ 
ದೇಶ

ಭೋಲೆ ಬಾಬಾ: ಉತ್ತರ ಪ್ರದೇಶದ ಕಾನ್ಸ್ಟೇಬಲ್ ಶ್ರೀಮಂತ ದೇವಮಾನವನಾಗಿದ್ದು ಹೇಗೆ?: ಇಲ್ಲಿದೆ ಮಾಹಿತಿ

ಭೋಲೇ ಬಾಬಾ ಅವರಿಗೆ ಇರುವ ಅನುಯಾಯಿಗಳ ಪೈಕಿ ಬಹುತೇಕ ಮಂದಿ ದಮನಿತ, ದೀನದಲಿತ ವಿಭಾಗಗಳಿಂದ ಬಂದವರಾಗಿದ್ದು, ಆತನ ಆದಾಯದ ಮೂಲದ ಬಗ್ಗೆ ಅನೇಕ ಗೊಂದಲಗಳಿವೆ.

ಲಖನೌ: ಹತ್ರಾಸ್ ನಲ್ಲಿ ಕಾಲ್ತುಳಿತ ಉಂಟಾಗಿ 121 ಮಂದಿ ಸಾವಿಗೆ ಕಾರಣವಾಗಿದ್ದ ಸ್ವಯಂ ಘೋಷಿತ ದೇವಮಾನವ ಭೋಲೇ ಬಾಬಾ ಇನ್ನಷ್ಟೇ ಬಂಧನವಾಗಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಆತನ ಹೆಸರೂ ಸಹ ಎಫ್ಐಆರ್ ನಲ್ಲಿ ದಾಖಲಿಸಿಲ್ಲ.

ಪೊಲೀಸರೂ ಸಹ, ಘಟನೆಯಲ್ಲಿ ದೇವಮಾನವನ ಪಾತ್ರದ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದು, ಅಗತ್ಯವಿದ್ದಲ್ಲಿ ದೇವ ಮಾನವನ ವಿಚಾರಣೆ ನಡೆಸುವುದಾಗಿ ಹೇಳುತ್ತಿದ್ದಾರೆ.

ಇಂದು ಭೋಲೇ ಬಾಬಾ ಎಂದು ಖ್ಯಾತಿ ಪಡೆದಿರುವ ಸೂರಜ್ ಪಾಲ್ ಜಾತವ್, ತನ್ನ ಸತ್ಸಂಗ ಸಭೆಗಳಲ್ಲಿ ಮಾನವ ಧರ್ಮವನ್ನು ಬೋಧಿಸುತ್ತಾರೆ. ಈತ ಉತ್ತರ ಪ್ರದೇಶ ಹಾಗೂ ಇನ್ನಿತರ ನೆರೆ-ಹೊರೆಯ ರಾಜ್ಯಗಳಲ್ಲಿ 20 ಕ್ಕೂ ಆಶ್ರಮಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ ಸಾಲು ಸಾಲು ಐಷಾರಾಮಿ ವಾಹನಗಳು, ಕೋಟ್ಯಂತರ ರೂಪಾಯಿ ಆಸ್ತಿ, ವೈಯಕ್ತಿಕ ಭದ್ರತಾ ಪಡೆಗಳು, ಕಮಾಂಡ್ ಗಳನ್ನು ಭೋಲೇ ಬಾಬಾ ಹೊಂದಿದ್ದಾರೆ.

ಶ್ರೀ ನಾರಾಯಣ್ ಹರಿ ಸಾಕಾರ್ ಚಾರಿಟಬಲ್ ಟ್ರಸ್ಟ್ ಭೋಲೇ ಬಾಬಾ ಅವರ ಎಲ್ಲಾ ವ್ಯವಸ್ಥೆಗಳನ್ನೂ ನೋಡಿಕೊಳ್ಳುತ್ತಿದೆ. ಆದರೆ ಭೋಲೇ ಬಾಬಾ ಅವರಿಗೆ ಇರುವ ಅನುಯಾಯಿಗಳ ಪೈಕಿ ಬಹುತೇಕ ಮಂದಿ ದಮನಿತ, ದೀನದಲಿತ ವಿಭಾಗಗಳಿಂದ ಬಂದವರಾಗಿದ್ದು, ಆತನ ಆದಾಯದ ಮೂಲದ ಬಗ್ಗೆ ಅನೇಕ ಗೊಂದಲಗಳಿವೆ.

ಇತರ ಧಾರ್ಮಿಕ ಪ್ರವಚನಕಾರರ ರೀತಿಗಿಂತ ಭಿನ್ನವಾಗಿರುವ ಭೋಲೇ ಬಾಬಾ ಸೂಟ್ ಧರಿಸುತ್ತಾರೆ. ಅಷ್ಟೇ ಅಲ್ಲದೇ ದುಬಾರಿ ಐಷಾರಾಮಿ ಕನ್ನಡಕ ಹಾಕುವುದು ಈತನ ಟ್ರೇಡ್ ಮಾರ್ಕ್. ಭೋಲೇ ಬಾಬ ಒಮ್ಮೆ ಎಲ್ಲಾದರೂ ಹೋಗಬೇಕೆಂದರೆ ಆತನಿಗಾಗಿ 16 ಕಮಾಂಡೋಗಳಿರುವ ಬೆಂಗಾವಲು ಪಡೆ ಸಿದ್ಧಗೊಂಡಿರುತ್ತದೆ. ಆತ ಸಂಚರಿಸುವುದು ಟೊಯಾಟಾ ಫಾರ್ಚೂನರ್ ಕಾರಿನಲ್ಲಿ. ಇನ್ನು ಸೇವಾದಾರರ ವಿಷಯ ನೋಡುವುದಾದರೆ ಸೇವಾದಾರರಿಗೆ ಇಲ್ಲಿ ಗುಲಾಬಿ ಬಣ್ಣದ ಯೂನಿಫಾರ್ಮ್ ಇದ್ದು, ಲಾಠಿಗಳನ್ನು ಹಿಡಿದಿರುತ್ತಾರೆ. ಹತ್ರಾಸ್ ನಲ್ಲಿ ಪ್ರವಚನದ ಬಳಿಕ ಮಹಿಳೆಯರು ಭೋಲೇ ಬಾಬಾ ಅವರ ಆಶೀರ್ವಾದ ಪಡೆಯಲು ಮುಂದಾದಾಗ, ಸೇವಾದಾರರು ಲಾಠಿ ಹಿಡಿದು ಪ್ರಹಾರ ಮಾಡಿದ್ದೇ ಈ ಕಾಲ್ತುಳಿತಕ್ಕೆ ಕಾರಣ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಇಲ್ಲಿನ ಸೇವಾದಾರರು, ಪ್ರವಚನಕಾರರ ಫೋಟೋ, ವಿಡಿಯೋ ತೆಗೆಯುವುದಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡುವುದಿಲ್ಲ.

ಬಾಬಾರ ಟ್ರಸ್ಟ್‌ನಲ್ಲಿ ಸೇವಾದಾರರಾಗಲು, ಔಪಚಾರಿಕ ಆಯ್ಕೆ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಉತ್ತೀರ್ಣರಾದ ಬಳಿಕ ನೇಮಕಗೊಂಡ ನಂತರ, ಸೇವಾದಾರರು ಸಂಭಾವನೆ, ಆಹಾರ ಮತ್ತು ಆಶ್ರಮದೊಳಗೆ ವಸತಿಯನ್ನು ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇಷ್ಟೆಲ್ಲಾ ಐಷಾರಾಮಿ ಜೀವನ ನಡೆಸುವ ಬಾಬಾ ಇರುವುದು ಮೈನ್‌ಪುರಿ ಜಿಲ್ಲೆಯ ಬಿಚುವಾ ಆಶ್ರಮದಲ್ಲಿ. ಈ ಆಶ್ರಮ ವಿಸ್ತಾರವಾದ 21 ಬಿಘಾಗಳಲ್ಲಿ (ಭೂ ಮಾಪನದ ಸಾಂಪ್ರದಾಯಿಕ ಘಟಕ) ಹರಡಿದೆ ಮತ್ತು ಇದಕ್ಕೆ ಹರಿ ನಗರ ಎಂದು ಹೆಸರು ನೀಡಲಾಗಿದೆ. ವಿಸ್ತಾರವಾದ ಆಶ್ರಮದ ಆರು ಕೊಠಡಿಗಳನ್ನು ಭೋಲೆ ಬಾಬಾ ಮತ್ತು ಅವರ ಪತ್ನಿ ಮಾಲ್ತಿ ದೇವಿಗೆ ಕಾಯ್ದಿರಿಸಲಾಗಿದೆ. ಮೈನ್‌ಪುರಿ ಆಶ್ರಮದ ಸೌಲಭ್ಯದ ನಿರ್ಮಾಣಕ್ಕೆ 10,000 ರಿಂದ 2.5 ಲಕ್ಷ ರೂ.ವರೆಗೆ ಕೊಡುಗೆ ನೀಡಿದ 200 ದಾನಿಗಳ ಹೆಸರನ್ನು ಪ್ರವೇಶದ್ವಾರದಲ್ಲಿ ಬೃಹತ್ ಬೋರ್ಡ್‌ನೊಂದಿಗೆ ಪ್ರದರ್ಶಿಸಲಾಗಿದೆ. ಇದನ್ನು 3 ವರ್ಷಗಳ ಹಿಂದೆ ನಿರ್ಮಾಣ ಮಾಡ್ಲಾಗಿದೆ ಮತ್ತು ಬಾಬಾನ ಶಾಶ್ವತ ನೆಲೆಯಾಗಿದೆ.

ಆದಾಗ್ಯೂ, ಸಾಧಾರಣ ಯುಪಿ ಪೊಲೀಸ್ ಪೇದೆಯೊಬ್ಬರು ಇಷ್ಟೊಂದು ಸಂಪತ್ತನ್ನು ಹೇಗೆ ಸಂಗ್ರಹಿಸಿದರು ಎಂಬುದು ಇನ್ನೂ ಒಗಟಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT