ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ 
ದೇಶ

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ, ಮೂರು ವಾರಗಳಲ್ಲಿ 13ನೇ ಘಟನೆ

ಇಂದು ಬೆಳಗ್ಗೆ ಸಹರ್ಸಾ ಜಿಲ್ಲೆಯ ಮಹಿಷಿ ಗ್ರಾಮದಲ್ಲಿ ಸೇತುವೆ ಕುಸಿದಿದೆ. ಇದು ಸಣ್ಣ ಸೇತುವೆ ಅಥವಾ ಕಾಸ್‌ವೇ ಆಗಿರಬಹುದು. ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ.

ಸಹರ್ಸಾ: ಬಿಹಾರದಲ್ಲಿ ಸೇತುವೆ ಕುಸಿತ ಸರಣಿ ಮುಂದುವರೆದಿದ್ದು, ಬುಧವಾರ ಸಹರ್ಸಾ ಜಿಲ್ಲೆಯಲ್ಲಿ ಮತ್ತೊಂದು ಸೇತುವೆ ಕುಸಿದಿದೆ. ಇದರೊಂದಿಗೆ ಮೂರು ವಾರಗಳ ಅವಧಿಯಲ್ಲಿ ರಾಜ್ಯದಲ್ಲಿ 13 ಸೇತುವೆಗಳು ಕುಸಿದು ಬಿದ್ದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸಹರ್ಸಾ ಜಿಲ್ಲೆಯ ಮಹಿಷಿ ಗ್ರಾಮದಲ್ಲಿ ಸೇತುವೆ ಕುಸಿದಿದೆ. ಇದು ಸಣ್ಣ ಸೇತುವೆ ಅಥವಾ ಕಾಸ್‌ವೇ ಆಗಿರಬಹುದು. ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ನಾವು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೆಚ್ಚುವರಿ ಜಿಲ್ಲಾಧಿಕಾರಿ(ಸಹರ್ಸಾ), ಜ್ಯೋತಿ ಕುಮಾರ್ ಅವರು ಹೇಳಿದ್ದಾರೆ.

ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿಗೆ ಸಂಭವಿಸಿದ ಸೇತುವೆ ಕುಸಿತದ ಸರಣಿ ಘಟನೆಗಳಿಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಕನಿಷ್ಠ 15 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳೆದ ವಾರ ರಾಜ್ಯದ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ, ತಕ್ಷಣ ದುರಸ್ತಿ ಮಾಡಬೇಕಾದ ಸೇತುವೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jamui harassment: ಮೂವರ ಬಂಧನ, 7 ಮಂದಿ ಗುರುತು ಪತ್ತೆ.. ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಪೊಲೀಸ್ ಶೋಧ!

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧಭಕ್ತರೇ ಹೊಣೆ - ರಾಹುಲ್ ಗಾಂಧಿ

Human Vs Terminator: 6 ಅಡಿ ರೋಬೋಟ್ ಜೊತೆ ಇನ್‌ಫ್ಲುಯೆನ್ಸರ್ ಫೈಟ್, ಗೆದ್ದಿದ್ಯಾರು? Video ವೈರಲ್

ನೆಲಮಂಗಲ ಬಳಿ ನನ್ನದು, ಮಗನದ್ದು ಹತ್ತತ್ತು ಎಕರೆ ಆಸ್ತಿ ಇದೆ, ರಾಜ್ಯ ಸರ್ಕಾರ ದಿವಾಳಿ ಆಗಿದ್ರೆ ಕೊಡುತ್ತೇನೆ: ಎಚ್​​ಡಿ ರೇವಣ್ಣ ತಿರುಗೇಟು

'ಗೆಳತಿಗೆ 370 ರೂ ಬಿರಿಯಾನಿ' ವಿವಾದ: ಕಮಿಡಿಯನ್ Pranit More ಅರ್ಜಿ, ಕೇಂದ್ರ ಸೇರಿ 3 ಸರ್ಕಾರಗಳಿಗೆ 'ಸುಪ್ರೀಂ' ನೋಟಿಸ್