ಸಾಂದರ್ಭಿಕ ಚಿತ್ರ  
ದೇಶ

ಕಣ್ಣೀರು ಒರೆಸಿಕೊಳ್ಳುತ್ತಾ ಕೈ ಹಿಡಿದುಕೊಂಡು ಹೋಗಿ ರೈಲಿಗೆ ತಲೆ ಕೊಟ್ಟು ಅಪ್ಪ-ಮಗ ಸಾವು!

ತಂದೆ ವಯಸ್ಸು 60, ಮಗನಿಗೆ 35. ಮಗನಿಗೆ ಸಾಯುವ ವಯಸ್ಸು, ಅಪ್ಪ ಇಂತ ಸಾವಿಗೆ ಅರ್ಹನಲ್ಲ. ನೋಡ ನೋಡುತ್ತಿದ್ದಂತೆ ಎರಡು ಜೀವದ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಮುಂಬೈ: ಯುವಕನೊಬ್ಬ ತನ್ನ ತಂದೆಯ ಜೊತೆಗೆ ಬಯಂದರ್ ನಿಲ್ದಾಣದ ಬಳಿ ಬರುತ್ತಿರುವ ಸ್ಥಳೀಯ ರೈಲಿನ ಮುಂದೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಡಿಯೊದಲ್ಲಿ ತಂದೆ, ಮಗ ಇಬ್ಬರು ರೈಲು ನಿಲ್ದಾಣದಲ್ಲಿ ಮಾತನಾಡುತ್ತಾ ಸಹಜವಾಗಿ ಎಂಬಂತೆ ನಡೆದುಕೊಂಡು ಹೋಗುತ್ತಿರುವುದು ಕಾಣುತ್ತದೆ. ಆ ನಿಲ್ದಾಣದಲ್ಲಿ ಇವರಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಕಾಣುತ್ತಿಲ್ಲ. ಈ ಸಮಯದಲ್ಲಿ ತಂದೆ ಮಗ ಇಬ್ಬರೂ ಎದುರಿಗೆ ಬರುತ್ತಿರುವ ರೈಲನ್ನು ಕಂಡು ಕೈ ಕೈ ಹಿಡಿದುಕೊಂಡು ಹಳಿಗಳ ಮೇಲೆ ಮಲಗಿದ್ದಾರೆ. ಇದರಿಂದ ರೈಲು ಅವರ ಮೇಲೆ ಹರಿದು ಇಬ್ಬರು ದಾರುಣವಾಗಿ ಸಾವನಪ್ಪಿದ್ದಾರೆ.

ತಂದೆ ವಯಸ್ಸು 60, ಮಗನಿಗೆ 35. ಮಗನಿಗೆ ಸಾಯುವ ವಯಸ್ಸು, ಅಪ್ಪ ಇಂತ ಸಾವಿಗೆ ಅರ್ಹನಲ್ಲ. ನೋಡ ನೋಡುತ್ತಿದ್ದಂತೆ ಎರಡು ಜೀವದ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪ್ಲಾಟ್‌ಫಾರ್ಮ್ ಮೂಲಕ ಅಪ್ಪ ಮಗ ಮಾತನಾಡುತ್ತಾ ಸಾಗಿದ್ದಾರೆ. ಬರುತ್ತಿರುವ ಕಣ್ಣೀರು ಒರೆಸಿಕೊಂಡು ಇಬ್ಬರು ಕೈ ಕೈ ಗಟ್ಟಿಯಾಗಿ ಹಿಡಿದುಕೊಂಡು ರೈಲಿಗೆ ತಲೆಯೊಡ್ಡಿದ ದಾರುಣ ಘಟನೆ ಮನಕಲುಕುವಂತಿದೆ. ಬೆಳಗ್ಗೆ 9.30ರ ವೇಳೆಗೆ ವಸೈ ನಿವಾಸಿಯಾದ 60 ವರ್ಷದ ಹರೀಶ್ ಮೆಹ್ತಾ ಹಾಗೂ 35 ವರ್ಷದ ಪುತ್ರ ಜಯ್ ಮೆಹ್ತಾ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಬೆಳಗ್ಗೆ 9.30ರ ವೇಳೆಗೆ ವಸೈ ನಿವಾಸಿಯಾದ 60 ವರ್ಷದ ಹರೀಶ್ ಮೆಹ್ತಾ ಹಾಗೂ 35 ವರ್ಷದ ಪುತ್ರ ಜಯ್ ಮೆಹ್ತಾ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಗಳು ಭಯಾನಕ ಕತೆ ಹೇಳುತ್ತಿದೆ.

ಹರೀಶ್ ಮೆಹ್ತಾ ಹಾಗೂ ಜಯ್ ಮೆಹ್ತಾ ಇಬ್ಬರು ಬಯಾಂದ್ರ ಸ್ಟೇಶನ್ ಪ್ಲಾಟ್‌ಫಾರ್ಮ್ ಮೂಲಕ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಈ ವೇಳೆ ಇಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ. ಇಬ್ಬರು ಕಣ್ಣೀರನ್ನು ಒರೆಸುತ್ತಾ ಸಾಗಿದ್ದಾರೆ. ಪ್ಲಾಟ್‌ಪಾರ್ಮ್ ಅಂತ್ಯಗೊಂಡ ಬಳಿಕ ನಿಧಾನವಾಗಿ ಟ್ರಾಕ್‌ನತ್ತ ಇಳಿದು ಇಬ್ಬರು ರೈಲು ಹಳಿಗಳಲ್ಲಿ ಸಾಗಿದ್ದಾರೆ.

ಪ್ಲಾಟ್‌ಫಾರ್ಮ್ ಮೂಲಕ ನಡೆದುಕೊಂಡು ಸಾಗುವಾಗ ಒಂದು ರೈಲು ಪಕ್ಕದಿಂದಲೇ ಸಾಗಿದೆ. ಆದರೆ ಪ್ಲಾಟ್‌ಫಾರ್ಮ್ ಬಳಿಕ ರೈಲು ಹಳಿಗಳ ಮೇಲೆ ನಡೆದುಕೊಂಡು ಸಾಗುವಾಗ ವಿರುದ್ದ ದಿಕ್ಕಿನಿಂದ ರೈಲು ಬಂದಿದೆ. ಇಬ್ಬರು ಕೈ ಕೈ ಹಿಡಿದುಕೊಂಡಿದ್ದಾರೆ. ತಕ್ಷಣವೇ ರೈಲು ಬರುತ್ತಿರುವ ಹಳಿಯತ್ತ ತೆರಳಿದ್ದಾರೆ. ಬಳಿಕ ರೈಲಿ ಹಳಿಯಲ್ಲಿ ತಲೆ ಇಟ್ಟು ಮಲಗಿದ್ದಾರೆ. ಅಷ್ಟೊತ್ತಿಗೆ ರೈಲು ಇವರಿಬ್ಬರ ಮೇಲಿನಿಂದ ಸಾಗಿದೆ. ಕ್ಷಣಾರ್ಧದಲ್ಲಿಲಿ ರೈಲು ಸಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ರೈಲ್ವೇ ಪೊಲೀಸರು ಸ್ಥಳ ಮಹಜರು ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇವರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT