ಅಣ್ಣಾ ಕ್ಯಾಂಟೀನ್ 
ದೇಶ

ವಿಜಯವಾಡ: ಶೀಘ್ರದಲ್ಲೇ ಅಣ್ಣಾ ಕ್ಯಾಂಟೀನ್‌ ಪುನರಾರಂಭ- ಸಿಎಂ ಚಂದ್ರಬಾಬು ನಾಯ್ಡು

ಧರ್ಮದ ಸಂರಕ್ಷಣೆಯಲ್ಲಿ ನಂಬಿಕೆ ಮೂಡಿಸುವಲ್ಲಿ ದತ್ತಿ ಸಂಸ್ಥೆಗಳ ಮಹತ್ವವನ್ನು ಒತ್ತಿ ಹೇಳಿದ ಮುಖ್ಯಮಂತ್ರಿ, ಈ ಜಗತ್ತನ್ನು ಮುನ್ನಡೆಸುವುದು ನಂಬಿಕೆ ಮಾತ್ರ. ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಏಕೈಕ ಶಕ್ತಿ ದೇವರು" ಎಂದು ಅವರು ಹೇಳಿದರು.

ವಿಜಯವಾಡ: ರಾಜ್ಯದಲ್ಲಿ ‘ಅಣ್ಣಾ ಕ್ಯಾಂಟೀನ್‌’ಗಳನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.

ಈ ಹಿಂದೆ ತಾನು ಮುಖ್ಯಮಂತ್ರಿಯಾಗಿದ್ದಾಗ 203 ಅಣ್ಣಾ ಕ್ಯಾಂಟೀನ್‌ಗಳನ್ನು ಸರ್ಕಾರ ನಡೆಸುತಿತ್ತು. ಅವುಗಳಿಗೆ ಅಕ್ಷಯಪಾತ್ರದಿಂದ ಉತ್ತಮ ಗುಣಮಟ್ಟದ ಆಹಾರ ಒದಗಿಸಲಾಗುತಿತ್ತು. ಆದರೆ ಕಳೆದ ಜಗನ್ ಸರ್ಕಾರ ಈ ಕ್ಯಾಂಟೀನ್ ಗಳನ್ನು ಮುಚ್ಚಿತ್ತು ಎಂದು ಅವರು ತಿಳಿಸಿದರು.

ವಿಜಯವಾಡ-ಗುಂಟೂರು ಹೆದ್ದಾರಿಯ ತಾಡೇಪಲ್ಲಿ ಸಮೀಪದ ಕೊಳನುಕೊಂಡದ ಹರೇಕೃಷ್ಣ ಗೋಕುಲ ಕ್ಷೇತ್ರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ರಾಜ್ಯವನ್ನು ಬಡತನ ರಹಿತ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವುದು ತಮ್ಮ ಮಹತ್ವಾಕಾಂಕ್ಷೆಯಾಗಿದೆ ಎಂದು ಹೇಳಿದರು.

ಧರ್ಮದ ಸಂರಕ್ಷಣೆಯಲ್ಲಿ ನಂಬಿಕೆ ಮೂಡಿಸುವಲ್ಲಿ ದತ್ತಿ ಸಂಸ್ಥೆಗಳ ಮಹತ್ವವನ್ನು ಒತ್ತಿ ಹೇಳಿದ ಮುಖ್ಯಮಂತ್ರಿ, ಈ ಜಗತ್ತನ್ನು ಮುನ್ನಡೆಸುವುದು ನಂಬಿಕೆ ಮಾತ್ರ. ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಏಕೈಕ ಶಕ್ತಿ ದೇವರು" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ