ಮಾಜಿ ಸಚಿವ ಪೌಡ್ಯಾಲ್ 
ದೇಶ

ಸಿಕ್ಕಿಂ ಮಾಜಿ ಸಚಿವ ಪೌಡ್ಯಾಲ್ ಮೃತದೇಹ ಪಶ್ಚಿಮ ಬಂಗಾಳದ ಕಾಲುವೆಯಲ್ಲಿ ಪತ್ತೆ!

ಪೌಡ್ಯಾಲ್ ಅವರು ಸಿಕ್ಕಿಂ ವಿಧಾನಸಭೆಯಲ್ಲಿ ಉಪಸಭಾಪತಿಯಾಗಿ ಮತ್ತು ನಂತರ ರಾಜ್ಯದ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಗ್ಯಾಂಗ್ಟೋಕ್: ನಾಪತ್ತೆಯಾಗಿದ್ದ ಸಿಕ್ಕಿಂನ ಮಾಜಿ ಸಚಿವ ಆರ್.ಸಿ ಪೌಡ್ಯಾಲ್ (80) ಅವರ ಮೃತದೇಹ ಪಶ್ಚಿಮ ಬಂಗಾಳದ ಸಿಲಿಗುರಿಯ ಬಳಿ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೌಡ್ಯಾಲ್ ಶವ ತೀಸ್ತಾ ನದಿಯಿಂದ ಕಾಲುವೆಗೆ ತೇಲಿ ಬಂದಿದೆ ಎಂದು ಶಂಕಿಸಲಾಗಿದೆ. ವಾಚ್ ಮತ್ತು ಧರಿಸಿದ್ದ ಬಟ್ಟೆಗಳಿಂದ ಅವರ ಮೃತದೇಹದ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜುಲೈ 7 ರಂದು ಪೌಡ್ಯಾಲ್ ಅವರು ಪಾಕ್ಯೊಂಗ್ ಜಿಲ್ಲೆಯ ಚೋಟಾ ಸಿಂಗ್ಟಾಮ್‍ನಿಂದ ನಾಪತ್ತೆಯಾಗಿದ್ದರು. ಅವರನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಲಾಗಿತ್ತು. ದುರಾದೃಷ್ಟವಶಾತ್ ಅವರು ಸಾವಿಗೀಡಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೌಡ್ಯಾಲ್ ಅವರು ಸಿಕ್ಕಿಂ ವಿಧಾನಸಭೆಯಲ್ಲಿ ಉಪಸಭಾಪತಿಯಾಗಿ ಮತ್ತು ನಂತರ ರಾಜ್ಯದ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 70 ಮತ್ತು 80ರ ದಶಕದಲ್ಲಿ ರೈಸಿಂಗ್ ಸನ್ ಪಾರ್ಟಿಯನ್ನು ಸ್ಥಾಪಿಸುವ ಮೂಲಕ ಸಿಕ್ಕಿಂ ರಾಜ್ಯದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟರು. ಅವರು ಸಿಕ್ಕಿಂನ ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಚಾರಗಳ ಅಪಾರ ಜ್ಞಾನ ಹೊಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅನ್ನಭಾಗ್ಯ: 5 ಕೆಜಿ ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ದೇಶದಲ್ಲೇ ಮೊದಲು: ಉದ್ಯೋಗಸ್ಥ ಮಹಿಳೆಯರಿಗೆ ಗುಡ್ ನ್ಯೂಸ್; ವೇತನ ಸಹಿತ 'ಋತುಚಕ್ರ ರಜೆ'ಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ!

ನ. 25 ರಂದು ಪ್ರಧಾನಿ ಮೋದಿಯಿಂದ ರಾಮ ಮಂದಿರದ ಮೇಲೆ 21 ಅಡಿ ಎತ್ತರದ ಧರ್ಮ ಧ್ವಜಾರೋಹಣ

'ಮೂರ್ನಾಲ್ಕು ದಿನದಲ್ಲಿ ಡಿಸ್ಚಾರ್ಜ್ ಆಗ್ತಾರೆ': ದೇವೇಗೌಡರ ಆರೋಗ್ಯದ ಕುರಿತು ಎಚ್.ಡಿ ಕುಮಾರಸ್ವಾಮಿ ಹೇಳಿಕೆ

Op Sindoor ನಿಂದ ಭಾರಿ ನಷ್ಟ, ಭಾರತದ ವಿರುದ್ಧ ಪ್ರತೀಕಾರಕ್ಕೆ ಸಜ್ಜು: ಮೊದಲ ಬಾರಿಗೆ 'ಮಹಿಳಾ ವಿಂಗ್ ' ರಚಿಸಿದ ಉಗ್ರ ಸಂಘಟನೆ JeM!

SCROLL FOR NEXT