ನವದೆಹಲಿ: ಇತ್ತೀಚಿನ ಸಮೀಕ್ಷೆಯ ಪ್ರಕಾರ ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ತಂತ್ರಜ್ಞಾನ ಮತ್ತು ಮಾಧ್ಯಮ ಸೇರಿದಂತೆ ಪ್ರಮುಖ ಭಾರತೀಯ ಉದ್ಯಮ ವಲಯಗಳಲ್ಲಿ ಕೆಲಸ ಮಾಡುವ ಐವರಲ್ಲಿ ಮೂವರು ಉದ್ಯೋಗಿಗಳು ಹೆಚ್ಚಿನ ಅಥವಾ ತೀವ್ರ ಒತ್ತಡವನ್ನು ಅನುಭವಿಸಿದ್ದಾರೆ. ಈ ಪೈಕಿ ಹೆಚ್ಚಿನ ಮಹಿಳೆಯರು ಕೆಲಸದ ಒತ್ತಡವನ್ನು ಎದುರಿಸುತ್ತಿದ್ದಾರೆ.
21 ರಿಂದ ಮತ್ತು 30 ವರ್ಷದ ನಡುವಿನ ಜನರು ಹೆಚ್ಚು ಒತ್ತಡಕ್ಕೊಳಗಾದ ಉದ್ಯೋಗಿಗಳ ಗುಂಪಾಗಿದ್ದು, ಅವರ ನಂತರ 30ರಿಂದ 40 ರ ವಯಸ್ಸಿನವರು ಮತ್ತು 41 ರಿಂದ 50 ವರ್ಷ ವಯಸ್ಸಿನವರು ಎಂದು ಹೆಚ್ಚು ಒತ್ತಡದಲ್ಲಿದ್ದಾರೆ ಎಂದು ಸಮೀಕ್ಷೆಯು ಹೇಳಿದೆ.
ಐಟಿ ಮತ್ತು ಉತ್ಪಾದನೆ, ಸಾರಿಗೆ, ಸಿಬ್ಬಂದಿ ಮತ್ತು ನೇಮಕಾತಿ, ಟೆಕ್ ಹಾಗೂ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ 5,000 ಕ್ಕೂ ಹೆಚ್ಚು ಉದ್ಯೋಗಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಗುರುತಿಸಲಾದ ಪ್ರಮುಖ ಒತ್ತಡಗಳು ತೀರ್ಪಿನ ಭಯ, ಕೆಲಸ- ವೈಯಕ್ತಿಕ ಜೀವನದ ಸಮತೋಲನದ ಕೊರತೆ ಮತ್ತು ಕಡಿಮೆ ಮನ್ನಣೆ ಎಂದು ಹೇಳಲಾಗಿದೆ.
ವಿವಿಧ ನಿಗಮಗಳ ಸಹಭಾಗಿತ್ವದಲ್ಲಿ ಭಾರತದ ಪ್ರಮುಖ ಮಾನಸಿಕ ಮತ್ತು ಭಾವನಾತ್ಮಕ ಸ್ವಾಸ್ಥ್ಯ ಕಂಪನಿಗಳಲ್ಲಿ ಒಂದಾದ YourDOST ನಡೆಸಿದ ಸಮೀಕ್ಷೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ತೀವ್ರ ಒತ್ತಡದಿಂದ ಬಳಲುತ್ತಿರುವ ಉದ್ಯೋಗಿಗಳ ಸಂಖ್ಯೆ ಶೇ. 31 ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಶೇ. 72.2 ರಷ್ಟು ಮಹಿಳೆಯರು ಮತ್ತು ಶೇ. 53.64 ರಷ್ಟು ಪುರುಷರು ಒತ್ತಡ ಎದುರಿಸುತ್ತಿದ್ದಾರೆ ವರದಿ ತಿಳಿಸಿದೆ.