ಸಿಬ್ಬಂದಿ ಕಾರ್ಯಾಚರಣೆ  
ದೇಶ

ಛತ್ತೀಸ್‌ಗಢದ ಬಿಜಾಪುರ್ ದಲ್ಲಿ IED ಸ್ಫೋಟ: ಇಬ್ಬರು STF ಸಿಬ್ಬಂದಿ ಹುತಾತ್ಮ, ನಾಲ್ವರಿಗೆ ಗಾಯ

ಇಬ್ಬರು ಎಸ್‌ಟಿಎಫ್ ಕಾನ್ಸ್ಟೇಬಲ್ ಗಳಾದ ರಾಯ್‌ಪುರದ ನಿವಾಸಿ ಭರತ್ ಸಾಹು ಮತ್ತು ನಾರಾಯಣಪುರ ಜಿಲ್ಲೆಯ ಸತ್ಯರ್ ಸಿಂಗ್ ಕಾಂಗೆ ಅವರು ನಕ್ಸಲೀಯರು ಸಿಡಿಸಿದ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಇತರ ನಾಲ್ವರು ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.

ಬಿಜಾಪುರ್: ಛತ್ತೀಸ್‌ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲೀಯರು ಸುಧಾರಿತ ಸ್ಫೋಟಕ ಸಾಧನವನ್ನು (IED) ಸ್ಫೋಟಿಸಿ ವಿಶೇಷ ಕಾರ್ಯಪಡೆಯ (STF) ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬಿಜಾಪುರ್-ಸುಕ್ಮಾ-ದಂತೇವಾಡ ಜಿಲ್ಲೆಗಳ ಮೂರು ಜಂಕ್ಷನ್‌ ಪ್ರದೇಶದ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲೀಯ ವಿರೋಧಿ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದಾಗ ತಾರೆಮ್ ಪ್ರದೇಶದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಟಿಎಫ್, ಜಿಲ್ಲಾ ಮೀಸಲು ಗಾರ್ಡ್‌ಗೆ ಸೇರಿದ ಸಿಬ್ಬಂದಿ - ರಾಜ್ಯ ಪೊಲೀಸ್‌ನ ಎರಡೂ ಘಟಕಗಳು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮತ್ತು ಅದರ ಘಟಕ ಕೋಬ್ರಾ ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ದರ್ಬಾ ಮತ್ತು ಪಶ್ಚಿಮಕ್ಕೆ ಸೇರಿದ ನಕ್ಸಲೈಟ್‌ಗಳ ಇರುವಿಕೆ ಕುರಿತು ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಯಿತು.

ಇಬ್ಬರು ಎಸ್‌ಟಿಎಫ್ ಕಾನ್ಸ್ಟೇಬಲ್ ಗಳಾದ ರಾಯ್‌ಪುರದ ನಿವಾಸಿ ಭರತ್ ಸಾಹು ಮತ್ತು ನಾರಾಯಣಪುರ ಜಿಲ್ಲೆಯ ಸತ್ಯರ್ ಸಿಂಗ್ ಕಾಂಗೆ ಅವರು ನಕ್ಸಲೀಯರು ಸಿಡಿಸಿದ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಇತರ ನಾಲ್ವರು ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.

ಘಟನೆಯ ನಂತರ ಸ್ಥಳಕ್ಕೆ ಸೇನಾ ಯೋಧರು ಧಾವಿಸಿ ಗಾಯಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT