ಹಲ್ಲೆಗೊಳಗಾದ ಮಹಿಳೆ TNIE
ದೇಶ

ರೋಡ್ ರೇಜ್ ಪ್ರಕರಣ: ಮಕ್ಕಳೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ ಮೇಲೆ ವ್ಯಕ್ತಿಯಿಂದ ಭೀಕರ ದಾಳಿ, ವಿಡಿಯೋ!

ತನ್ನ ಇಬ್ಬರು ಮಕ್ಕಳೊಂದಿಗೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನಲ್ಲಿದ್ದ ವ್ಯಕ್ತಿಯೋರ್ವ ಬಂದು ಮಹಿಳೆ ಮೇಲೆ ಭೀಕರ ದಾಳಿ ಮಾಡಿರುವ ಘನಟೆ ಫ್ಯಾಷನ್-ಬ್ಯಾನರ್ ಲಿಂಕ್ ರಸ್ತೆಯಲ್ಲಿ ನಡೆದಿದೆ.

ಪುಣೆ: ತನ್ನ ಇಬ್ಬರು ಮಕ್ಕಳೊಂದಿಗೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನಲ್ಲಿದ್ದ ವ್ಯಕ್ತಿಯೋರ್ವ ಬಂದು ಮಹಿಳೆ ಮೇಲೆ ಭೀಕರ ದಾಳಿ ಮಾಡಿರುವ ಘನಟೆ ಫ್ಯಾಷನ್-ಬ್ಯಾನರ್ ಲಿಂಕ್ ರಸ್ತೆಯಲ್ಲಿ ನಡೆದಿದೆ. ಈ ಸಂಬಂಧ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಪುಣೆ ಮೂಲದ ಐಷಾರಾಮಿ ಹೋಟೆಲ್‌ನ ಮಾರ್ಕೆಟಿಂಗ್ ಮುಖ್ಯಸ್ಥೆ ಜೆರ್ಲಿನ್ ಡಿ ಸಿಲ್ವಾ ಎಂದು ಗುರುತಿಸಲ್ಪಟ್ಟ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಶನಿವಾರ ನಡೆದ ಘಟನೆಗಳನ್ನು ವಿವರಿಸಿದ್ದಾರೆ. ವೀಡಿಯೊದಲ್ಲಿ ಜೆರ್ಲಿನ್ ಮೂಗಿನಿಂದ ರಕ್ತ ಸೋರುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ವಯಸ್ಸಾದ ವ್ಯಕ್ತಿ ಸುಮಾರು ಎರಡು ಕಿಲೋಮೀಟರ್ ದೂರದಿಂದ ವೇಗವಾಗಿ ಬರುತ್ತಿದ್ದು ಹಾರ್ನ್ ಮಾಡಿದ. ಕಾರಿಗೆ ದಾರಿ ಮಾಡಿಕೊಡಲು ನಾನು ಸ್ಕೂಟರ್ ಅನ್ನು ರಸ್ತೆಯ ಎಡಭಾಗಕ್ಕೆ ತಂದು ನಿಲ್ಲಿಸಿದೆ. ಆಗ ಆತ ತನ್ನ ಕಾರನ್ನು ನನ್ನ ಸ್ಕೂಟರ್ ಮುಂದೆ ತಂದು ನಿಲ್ಲಿಸಿದ. ನಂತರ ಆತ ಕಾರಿನಿಂದ ಹೊರಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ನನ್ನ ಮಕ್ಕಳ ಮುಂದೆ ಕೂದಲನ್ನು ಹಿಡಿದು ಎಳೆದಾಡಿದನು. ನಂತರ ಆ ವ್ಯಕ್ತಿ ತಪ್ಪಿಸಿಕೊಳ್ಳುವುದನ್ನು ತಡೆಯಲು ಆತನ ಕಾರ್ ಕೀಲಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದೆ, ಆಗ ಕಾರಿನಲ್ಲಿದ್ದ ಅವನ ಹೆಂಡತಿ ಕೂಡ ನನ್ನ ಮೇಲೆ ಹಲ್ಲೆ ಮಾಡಿದಳು ಎಂದು ಜೆರ್ಲಿನ್ ಆರೋಪಿಸಿದ್ದಾರೆ.

ಈ ನಗರ ಎಷ್ಟು ಸುರಕ್ಷಿತವಾಗಿದೆ? ಜನರು ಹುಚ್ಚನಂತೆ ಏಕೆ ವರ್ತಿಸುತ್ತಿದ್ದಾರೆ? ನನ್ನೊಂದಿಗೆ ಇಬ್ಬರು ಮಕ್ಕಳು ಇದ್ದರು, ಏನು ಬೇಕಾದರೂ ಆಗಬಹುದಿತ್ತು. ನಂತರ ಒಬ್ಬ ಮಹಿಳೆ ನನಗೆ ಸಹಾಯ ಮಾಡಿದಳು ಎಂದು ಜೆರ್ಲಿನ್ ಹೇಳಿದ್ದಾರೆ. ಆರೋಪಿ ವ್ಯಕ್ತಿಯನ್ನು 57 ವರ್ಷದ ಸ್ವಾಪ್ನಿಲ್ ಕೆಕ್ರೆ ಎಂದು ಗುರುತಿಸಲಾಗಿದ್ದು ಆತ ಮತ್ತು ಆತನ ಹೆಂಡತಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಮೋಟಾರು ವಾಹನಗಳ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಏತನ್ಮಧ್ಯೆ, ಜೆರ್ಲಿನ್ ಅವರ ಚಿಕ್ಕಪ್ಪ ವಿಶಾಲ್ ಎಂಬುವರು ಈ ಘಟನೆಯ ಬಗ್ಗೆ ತಿಳಿದ ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಜರ್ನಿಲ್ ನನ್ನ ಬಳಿ ನನ್ನ ಸ್ಕೂಟರ್ ಆತನ ಕಾರಿಗೆ ಗುದ್ದಲಿಲ್ಲ. ಆದರೆ ಆತ ತನ್ನ ಶಕ್ತಿಯನ್ನು ತೋರಿಸಲು ಮಾತ್ರ ಇದನ್ನು ಮಾಡಿದ್ದಾನೆ ಎಂದು ಹೇಳಿದ್ದಾಗಿ ವಿಶಾಲ್ ವಿವರಿಸಿದರು. ಇನ್ನು ಮಕ್ಕಳು ದೈಹಿಕವಾಗಿ ಹಾನಿಗೊಳಗಾಗಲಿಲ್ಲ. ಆದರೆ ಭಯಭೀತರಾಗಿದ್ದು ಕಿರುಚುತ್ತಿದ್ದರು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT