ಸ್ಮಿತಾ ಸಬರ್ವಾಲ್ 
ದೇಶ

ಅಂಗವೈಕಲ್ಯ ಮೀಸಲಾತಿಗೆ ಸ್ಮಿತಾ ಸಬರ್ವಾಲ್ ಆಕ್ಷೇಪ; ಐಎಎಸ್ ಅಧಿಕಾರಿಯಿಂದ ವಿವಾದಾತ್ಮಕ ಪೋಸ್ಟ್

ತೆಲಂಗಾಣ ಹಣಕಾಸು ಆಯೋಗದ ಸದಸ್ಯ ಕಾರ್ಯದರ್ಶಿ ಸ್ಮಿತಾ ಸಬರ್ವಾಲ್ ಅವರು ಅಂಗವೈಕಲ್ಯ ಮೀಸಲಾತಿ ಕುರಿತ ಎಕ್ಸ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ.

ಹೈದರಾಬಾದ್: ಮಹಾರಾಷ್ಟ್ರದ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಅಂಗವೈಕಲ್ಯ ಪ್ರಮಾಣಪತ್ರ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ತೆಲಂಗಾಣದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಅಖಿಲ ಭಾರತ ನಾಗರಿಕ ಸೇವೆಗಳಲ್ಲಿ ಅಂಗವೈಕಲ್ಯ ಮೀಸಲಾತಿ ಕುರಿತ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ ಹಣಕಾಸು ಆಯೋಗದ ಸದಸ್ಯ ಕಾರ್ಯದರ್ಶಿ ಸ್ಮಿತಾ ಸಬರ್ವಾಲ್ ಅವರು ಅಂಗವೈಕಲ್ಯ ಮೀಸಲಾತಿ ಕುರಿತ ಎಕ್ಸ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದು, "ವಿಕಲಚೇತನರ ಬಗ್ಗೆ ನನಗೆ ಗೌರವ ಇದೆ. ಆದರೆ ವಿಮಾನಯಾನ ಸಂಸ್ಥೆಯೊಂದು ಅಂಗವೈಕಲ್ಯ ಹೊಂದಿರುವ ಪೈಲಟ್ ಅನ್ನು ನೇಮಿಸಿಕೊಳ್ಳುತ್ತದೆಯೇ? ಅಥವಾ ನೀವು ಅಂಗವೈಕಲ್ಯ ಹೊಂದಿರುವ ಶಸ್ತ್ರಚಿಕಿತ್ಸಕರನ್ನು ನಂಬುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಅಖಿಲ ಭಾರತ ನಾಗರಿಕ ಸೇವೆಗಳ (ಐಎಎಸ್/ಐಪಿಎಸ್/ಐಎಫ್ಒಎಸ್) ಸ್ವರೂಪವವು ಕ್ಷೇತ್ರ ಕಾರ್ಯವನ್ನು ಬಯಸುತ್ತದೆ, ದೀರ್ಘಾವಧಿಯ ಪ್ರಯಾಣವನ್ನು ಕೇಳುತ್ತದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಬೇಕಾಗುತ್ತದೆ. ಇದಕ್ಕೆಲ್ಲ ದೈಹಿಕ ಸಾಮರ್ಥ್ಯ ಅತ್ಯಗತ್ಯವಾಗಿದೆ" ಎಂದು ಸ್ಮಿತಾ ಸಬರ್ವಾಲ್ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರು, ಅಂಗವೈಕಲ್ಯ ಹಕ್ಕುಗಳ ಹೋರಾಟಗಾರರು ಮತ್ತು ಸಾರ್ವಜನಿಕರು ಐಎಎಸ್ ಅಧಿಕಾರಿಯ ಈ ವಿವಾದಾತ್ಮಕ ಪೋಸ್ಟ್ ಅನ್ನು ಖಂಡಿಸಿದ್ದಾರೆ.

ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸಬರ್ವಾಲ್ ಅವರ ಪೋಸ್ಟ್ ಅನ್ನು ಟೀಕಿಸಿದ್ದು, ಈ ಹೇಳಿಕೆ "ನಮ್ಮಲ್ಲಿ ಇರಬಹುದಾದ ಬಹಳ ಶೋಚನೀಯ ಹಾಗೂ ಹೊರಹಾಕುವ ದೃಷ್ಟಿಕೋನವಾಗಿದೆ. ಅಧಿಕಾರಿಗಳು ತಮ್ಮ ಸೀಮಿತ ಆಲೋಚನೆಗಳನ್ನು ಮತ್ತು ತಮ್ಮ ಸವಲತ್ತುಗಳನ್ನು ಹೇಗೆ ಪ್ರದರ್ಶಿಸುತ್ತಿದ್ದಾರೆ ಎನ್ನುವುದನ್ನು ನೋಡುವುದು ಆಸಕ್ತಿಕರವಾಗಿದೆ" ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಮಿತಾ, "ಆಡಳಿತದ ಸಮಂಜಸ ಸಮಸ್ಯೆಗಳ ಕುರಿತು ಅಧಿಕಾರಿಗಳು ಮಾತನಾಡದೆ ಇದ್ದರೆ, ಇನ್ಯಾರು ಮಾತನಾಡುತ್ತಾರೆ? ನನ್ನ ಆಲೋಚನೆ ಹಾಗೂ ಕಳವಳವು 24 ವರ್ಷಗಳ ವೃತ್ತಿ ಜೀವನದಿಂದ ಉದ್ಭವಿಸಿರುವುದು... ಸೀಮಿತ ಅನುಭವವಲ್ಲ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT