ನ್ಯಾಯಾಲಯ (ಸಂಗ್ರಹ ಚಿತ್ರ) online desk
ದೇಶ

'ಮರೆಯುವುದು ನಿಮ್ಮ ಹಕ್ಕು'- ಜ್ಞಾಪಿಸಿದ ಮದ್ರಾಸ್ ಕೋರ್ಟ್; ಮರೆತೇವೆಂದರೂ ಮರೆವುದು ಹ್ಯಾಂಗ ಎಂದ ಸುಪ್ರೀಂ ಕೋರ್ಟ್

ಆರೋಪಿಯ ಹೆಸರುಗಳನ್ನು ಹೊಂದಿರುವ ನ್ಯಾಯಾಲಯದ ಆದೇಶಗಳನ್ನು ಆತ ನಿರ್ದೋಷಿ ಎಂದಾದರೆ ಸಾರ್ವಜನಿಕ ವೇದಿಕೆಗಳಿಂದ ತೆಗೆಯುವ right to be forgotten ವಿಷಯವನ್ನು ಪರಿಶೀಲಿಸುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ನವದೆಹಲಿ: ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಮತದಾನದ ಹಕ್ಕುಗಳು ಗೊತ್ತು ಇದ್ಯಾವುದು ಮರೆಯುವ ಹಕ್ಕು? ಇದ್ಯಾವಾಗ ಬಂತು? ಎಂದು ಆಶ್ಚರ್ಯ ಚಕಿತರಾಗಿದ್ದರೆ, ಈ ವರದಿಯನ್ನು ಪೂರ್ಣವಾಗಿ ಓದಿ...

Right to be forgotten
ಒಬ್ಬ ವ್ಯಕ್ತಿಯ ವಿರುದ್ಧ ಒಂದು ಪ್ರಕರಣ ದಾಖಲಾಗಿ ಎಷ್ಟೋ ವರ್ಷಗಳ ನಂತರ ನ್ಯಾಯಾಲಯ ಆತ ನಿರ್ದೋಷಿ ಎಂದು ತೀರ್ಪು ನೀಡುತ್ತದೆ. ಆ ತೀರ್ಪಿನ ಉಲ್ಲೇಖದಲ್ಲಿ ಆರೋಪಿಯ ಹೆಸರು ನಮೂದಾಗಿ, ಸಾರ್ವಜನಿಕ ವೇದಿಕೆಗಳಲ್ಲಿ ಉಳಿದುಹೋಗುವುದನ್ನು ತಪ್ಪಿಸುವುದಕ್ಕೆ ಮರೆಯುವ ಹಕ್ಕು ಅಥವಾ right to be forgotten ಎನ್ನಲಾಗುತ್ತದೆ.

ಆರೋಪಿಯ ಹೆಸರುಗಳನ್ನು ಹೊಂದಿರುವ ನ್ಯಾಯಾಲಯದ ಆದೇಶಗಳನ್ನು ಆತ ನಿರ್ದೋಷಿ ಎಂದಾದರೆ ಸಾರ್ವಜನಿಕ ವೇದಿಕೆಗಳಿಂದ ತೆಗೆಯುವ right to be forgotten ವಿಷಯವನ್ನು ಪರಿಶೀಲಿಸುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಮರೆಯುವ ಹಕ್ಕು ತನ್ನದೇ ಆದ ಗಂಭೀರ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ನ ಸಿಜೆಐ ಡಿವೈ ಚಂದ್ರಚೂಡ್ ಅವರಿದ್ದ ಪೀಠ ಹೇಳಿದ್ದು, ಖುಲಾಸೆಗೊಂಡ ಅತ್ಯಾಚಾರದ ಆರೋಪಿಯ ಹೆಸರನ್ನು ಪೋರ್ಟಲ್ ಒಂದರಿಂದ ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.

ತೀರ್ಪುಗಳು ಸಾರ್ವಜನಿಕ ದಾಖಲೆಗಳ ಭಾಗವಾಗಿರುತ್ತದೆ ಮತ್ತು ನ್ಯಾಯಾಲಯಗಳಿಂದ ಅದನ್ನು ತೆಗೆದುಹಾಕುವ ಆದೇಶವು ಗಂಭೀರ ಪರಿಣಾಮಗಳನ್ನು ಹೊಂದಿರುತ್ತದೆ, ”ಎಂದು ಸಿಜೆಐ ಹೇಳಿದ್ದಾರೆ.

ಒಬ್ಬ ವ್ಯಕ್ತಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ಭಾವಿಸಿದ ಪೀಠ, "ತೀರ್ಪನ್ನು ಹಿಂತೆಗೆದುಕೊಳ್ಳುವಂತೆ ಹೈಕೋರ್ಟ್ ಅವರಿಗೆ (ಕಾನೂನು ಪೋರ್ಟಲ್) ಹೇಗೆ ನಿರ್ದೇಶಿಸುತ್ತದೆ? ತೀರ್ಪು ನೀಡಿದ ನಂತರ, ಅದು ಸಾರ್ವಜನಿಕ ದಾಖಲೆಯ ಭಾಗವಾಗುತ್ತದೆ" ಎಂದು ಹೇಳಿದೆ.

ನ್ಯಾಯಾಲಯ ತನ್ನ ವೆಬ್‌ಸೈಟ್‌ನಿಂದ ತೀರ್ಪನ್ನು ತೆಗೆದುಹಾಕುವಂತೆ ಕೇಳಿರುವ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ "ಇಂಡಿಯಾ ಕಾನೂನ್" ಪೋರ್ಟಲ್ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸುತ್ತಿದೆ. ಕಾರ್ತಿಕ್ ಥಿಯೋಡರ್ ಎಂಬಾತನ ಮನವಿಯ ಮೇರೆಗೆ, ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT