ಬೈಚುಂಗ್ ಭುಟಿಯಾ 
ದೇಶ

Sikkim polls 2024: Bhaichung Bhutiaಗೆ ಮತ್ತೆ ಸೋಲು, 10 ವರ್ಷಗಳಲ್ಲಿ 6 ಬಾರಿ ಸೋತ ಫುಟ್ಬಾಲ್ ತಾರೆ!

ತೀವ್ರ ಕುತೂಹಲ ಕೆರಳಿಸಿದ್ದ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಮತ್ತು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಉಪಾಧ್ಯಕ್ಷ ಬೈಚುಂಗ್ ಭುಟಿಯಾಗೆ ಮತ್ತೆ ಸೋಲಾಗಿದ್ದು, ಭಾರತದ ಫುಟ್ಬಾಲ್ ತಾರೆ 10 ವರ್ಷಗಳಲ್ಲಿ 6ನೇ ಬಾರಿಗೆ ಸೋತಿದ್ದಾರೆ.

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಮತ್ತು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಉಪಾಧ್ಯಕ್ಷ ಬೈಚುಂಗ್ ಭುಟಿಯಾಗೆ ಮತ್ತೆ ಸೋಲಾಗಿದ್ದು, ಭಾರತದ ಫುಟ್ಬಾಲ್ ತಾರೆ 10 ವರ್ಷಗಳಲ್ಲಿ 6ನೇ ಬಾರಿಗೆ ಸೋತಿದ್ದಾರೆ.

ಹೌದು..ಇಂದು ಪ್ರಕಟಗೊಂಡ ಸಿಕ್ಕಿಂ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) 32 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಎಸ್‌ಕೆಎಂ ಈ ಬಾರಿ ಪ್ರಚಂಡ ಗೆಲುವು ದಾಖಲಿಸಿದೆ. ಇನ್ನು ಒಂದು ಕಡೆ ಸಿಕ್ಕಿಂ ಡೆಮಾಕ್ರಾಟಿಕ್‌ ಫ್ರಂಟ್‌ (SDF) ಗೆಲುವು ಪಡೆದಿದೆ.

ಫುಟ್ಬಾಲ್ ತಾರೆ ಬೈಚುಂಗ್ ಭುಟಿಯಾಗೆ ಮತ್ತೆ ಸೋಲು

ಇತ್ತ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಮತ್ತು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಉಪಾಧ್ಯಕ್ಷ ಬೈಚುಂಗ್ ಭುಟಿಯಾ ಅವರು ನಾಮ್ಚಿ ಜಿಲ್ಲೆಯ ಬರ್ಫುಂಗ್ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.

ಎಸ್‌ಕೆಎಂನ ರಿಕ್ಷಾಲ್ ದೋರ್ಜಿ ಭುಟಿಯಾ ವಿರುದ್ಧ ಭುಟಿಯಾ ಸುಮಾರು 4 ಸಾವಿರಕ್ಕೂ ಅಧಿಕ ಮತಗಳ ಅಂತದಲ್ಲಿ ಸೋತಿದ್ದಾರೆ. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಭ್ಯರ್ಥಿ 8,358 ಮತಗಳನ್ನು ಪಡೆದರೆ, ಭುಟಿಯಾ 4,012 ಮತಗಳನ್ನು ಪಡೆದಿದ್ದಾರೆ.

ಉಳಿದಂತೆ ಸಿಟಿಜನ್ ಆಕ್ಷನ್ ಪಾರ್ಟಿ -- ಬಾರ್ಫುಂಗ್ ಕ್ಷೇತ್ರದಲ್ಲಿ ಸಿಕ್ಕಿಂ ಅಭ್ಯರ್ಥಿ ದಾದುಲ್ ಲೆಪ್ಚಾ 656 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ತಾಶಿ ದಾದುಲ್ ಭುಟಿಯಾ ಕೇವಲ 298 ಮತಗಳನ್ನು ಪಡೆದಿದ್ದಾರೆ.

ಈ ಮೂಲಕ 10 ವರ್ಷಗಳಲ್ಲಿ ಬರೋಬ್ಬರಿ ಆರು ಬಾರಿ ಸೋಲುವ ಮೂಲಕ ಸೋಲಿನಲ್ಲೂ ಭುಟಿಯಾ ದಾಖಲೆ ಬರೆದಿದ್ದಾರೆ.

ಭುಟಿಯಾ ರಾಜಕೀಯ ಇತಿಹಾಸ

ಬೈಚುಂಗ್ ಭುಟಿಯಾ ಅವರು 2018 ರಲ್ಲಿ ತಮ್ಮದೇ ಆದ ಹಮ್ರೋ ಸಿಕ್ಕಿಂ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ ಕಳೆದ ವರ್ಷ ಅದನ್ನು ಎಸ್‌ಡಿಎಫ್‌ನೊಂದಿಗೆ ವಿಲೀನಗೊಳಿಸಿದ್ದರು. ಪ್ರಸ್ತುತ ಅವರು ಎಸ್‌ಡಿಎಫ್‌ನ ಉಪಾಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು ಮಾಜಿ ಫುಟ್ಬಾಲ್ ಆಟಗಾರ ಬೈಚುಂಗ್ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

2014 ರ ಲೋಕಸಭಾ ಚುನಾವಣೆಯಲ್ಲಿ ಡಾರ್ಜಿಲಿಂಗ್‌ನಿಂದ ಹಾಗೂ 2016 ರ ವಿಧಾನಸಭಾ ಚುನಾವಣೆಯಲ್ಲಿ ಸಿಲಿಗುರಿಯಿಂದ ಸ್ಪರ್ಧಿಸಿದ್ದರು. ಆದರೆ ಎರಡೂ ಕಡೆಯೂ ಅವರು ಸೋಲು ಅನುಭವಿಸಿದ್ದರು.

ನಂತರ ಹಿಮಾಲಯ ಪ್ರದೇಶದಲ್ಲಿ ಬರುವ ಸರೋವರಗಳಿಗೆ ಹೆಸರುವಾಸಿಯಾಗಿರುವ ಸುಂದರವಾದ ರಾಜ್ಯ ಸಿಕ್ಕಿಂನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಯಸಿದ ಅವರು ಅಲ್ಲಿ ತಮ್ಮದೇ ಪಕ್ಷವನ್ನು ಸ್ಥಾಪಿಸಿದರು. 2019 ರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾಂಗ್ಟಾಕ್ ಮತ್ತು ತುಮೆನ್ ಲಿಂಗಿಯಿಂದ ಸ್ಪರ್ಧಿಸಿದರು ಆದರೆ ಎರಡೂ ಕ್ಷೇತ್ರಗಳಲ್ಲೂ ಅವರು ಮತ್ತೆ ಸೋಲು ಕಂಡರು. 2019 ರಲ್ಲಿ ಮತ್ತೆ ಗ್ಯಾಂಗ್‌ಟಾಕ್‌ನ ಉಪ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋತರು.

ಬೈಚುಂಗ್ ಭುಟಿಯಾ ಸಿಕ್ಕಿಂ ವಿಧಾನಸಭಾ ಚುನಾವಣೆಗೂ ಮುನ್ನ ಎಸ್‌ಡಿಎಫ್‌ಗೆ ಸೇರಿದ್ದರು. ಅವರು ಹಿಂದಿನ ಹಮ್ರೊ ಸಿಕ್ಕಿಂ ಪಕ್ಷವನ್ನು ಎಸ್‌ಡಿಎಫ್‌ನೊಂದಿಗೆ ವಿಲೀನಗೊಳಿಸಿದ್ದರು. ಇದೀಗ ವಿಧಾನಸಭೆ ಚುನಾವಣೆಯಲ್ಲೂ ಸೋಲು ಕಂಡಿದ್ದಾರೆ.

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಭಾನುವಾರ ಹಿಮಾಲಯ ರಾಜ್ಯದಲ್ಲಿ 32 ಸದಸ್ಯ ಬಲದ ಅಸೆಂಬ್ಲಿಯಲ್ಲಿ 31 ಸ್ಥಾನಗಳನ್ನು ಗೆದ್ದು ಪ್ರಚಂಡ ಜಯಗಳಿಸುವ ಮೂಲಕ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT