ಹಲವು ಬೈಕ್ ಗಳಿಗೆ ಕಾರು ಢಿಕ್ಕಿ 
ದೇಶ

Kolhapur: ಭೀಕರ ಅಪಘಾತ, ವೇಗವಾಗಿ ಬಂದು ಹಲವು ಬೈಕ್ ಗಳಿಗೆ ಕಾರು ಢಿಕ್ಕಿ; ಗಾಳಿಯಲ್ಲಿ ಹಾರಿದ ಸವಾರರು, CCTV Video ವೈರಲ್!

ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರೊಂದು ವೇಗವಾಗಿ ಬಂದು ಹಲವು ಬೈಕ್ ಗಳಿಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರರು ಗಾಳಿಯಲ್ಲಿ ಹಾರಿ ಬಿದ್ದಿದ್ದು, 3 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೊಲ್ಹಾಪುರ: ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರೊಂದು ವೇಗವಾಗಿ ಬಂದು ಹಲವು ಬೈಕ್ ಗಳಿಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರರು ಗಾಳಿಯಲ್ಲಿ ಹಾರಿ ಬಿದ್ದಿದ್ದು, 3 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ದಾಖಲಾಗಿದೆ. ಕೊಲ್ಹಾಪುರದ ಪ್ರಮುಖ ವೃತ್ತದಲ್ಲಿ ಈ ಘಟನೆ ನಡೆದಿದ್ದು, ವೃತ್ತಿದಲ್ಲಿ ಹಲವು ಬೈಕ್ ಗಳು ಚಲಿಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಏಕಾಏಕಿ ಬೈಕ್ ಗಳಿಗೆ ಢಿಕ್ಕಿಯಾಗಿದೆ.

ಕಾರು ಗುದ್ದಿದ ರಭಸಕ್ಕೆ ಕ್ಷಣ ಮಾತ್ರದಲ್ಲಿ ಬೈಕ್ ಗಳಲ್ಲಿದ್ದ ಸವಾರರು ಮತ್ತು ಹಿಂಬದಿ ಸವಾರರು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದ್ದಾರೆ. ಈ ಪೈಕಿ ಒಂದು ಬೈಕ್ ನಲ್ಲಿ ದಂಪತಿ ಕೂಡ ಇದ್ದು, ದಂಪತಿಯ ಮಗು ಕೂಡ ಗಾಳಿಯಲ್ಲಿ ಹಾರಿ ಬಿದ್ದಿದೆ.

ಅಪಘಾತದ ಬಳಿಕ ಕಾರು ಪಲ್ಟಿಯಾಗಿ ಬಿದ್ದಿದ್ದು, ಈ ಅಪಘಾತದಲ್ಲಿ ಕಾರು ಚಾಲಕ ಸೇರಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 6ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಕೊಲ್ಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿ ವೇಗವೇ ಅಪಘಾತಕ್ಕೆ ಕಾರಣ

ಇನ್ನು ಮೇಲ್ನೋಟಕ್ಕೆ ಕಾರು ಚಾಲಕನ ಅತಿಯಾದ ವೇಗದ ಚಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಕೊಲ್ಹಾಪುರ ಪೊಲೀಸರು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT